Home ರಾಜ್ಯಜೆಡಿಎಸ್ ಗೆ ಜಯಭೇರಿ ಕಾಂಗ್ರೆಸ್ ಗೆ ಮುಖಭಂಗ… ವಿಜಯೋತ್ಸವದಲ್ಲಿ ಕೋವಿಡ್ ನಿಯಮಗಳು ಕಣ್ಮರೆ ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು…

ಜೆಡಿಎಸ್ ಗೆ ಜಯಭೇರಿ ಕಾಂಗ್ರೆಸ್ ಗೆ ಮುಖಭಂಗ… ವಿಜಯೋತ್ಸವದಲ್ಲಿ ಕೋವಿಡ್ ನಿಯಮಗಳು ಕಣ್ಮರೆ ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು…

by EDITOR NEWS WARRIORS
0 comments

ದಾವಣಗೆರೆ> ಜಿಲ್ಲೆಯ ಹರಿಹರ ತಾಲೂಕಿನ ಕಾಳಿದಾಸ ನಗರದ 14ನೇ ವಾರ್ಡ್‌ನ ಕಾಂಗ್ರೆಸ್ ನ ಅಭ್ಯರ್ಥಿ ಮೆಹಬೂಬ್ ಬಾಷ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ. ಅಲ್ತಾಫ್‍ 742 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಜೀನತ್‍ ಉನ್ನೀಸಾ ಅವರ ವಿರುದ್ಧ 333 ಮತಗಳ ಅಂತರದಿಂದ ಜಯ ಸಾಧಿಸುವುದರ ಮುಖಾಂತರ ಹೊಸ ಇತಿಹಾಸ ಬರೆದಿದ್ದಾರೆ.

ಕಾಂಗ್ರೆಸ್ ನ ಭದ್ರಕೋಟೆ ಗೆ ಲಗ್ಗೆ ಹಾಕಿದ ಜೆಡಿಎಸ್…
ನಗರದ ಮಿನಿವಿಧಾನಸೌಧ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ 8ರಿಂದ ಮತಏಣಿಕೆ ಕಾರ್ಯ ಆರಂಭಗೊಂಡಿತು. 8.30ಕ್ಕೆ ಫಲಿತಾಂಶ ಪ್ರಕಟಗೊಂಡಿತು. ಮತಏಣಿಕೆ ಕಾರ್ಯದಲ್ಲಿ ಚುನಾವಣಾಧಿಕಾರಿ ರಾಮಾಂಜನೇಯ, ಉಪ ಚುನಾವಣಾಧಿಕಾರಿ ಲಕ್ಷ್ಮಣನಾಯಕ್‌, ತಹಶೀಲ್ದಾರ್‍ ಕೆ.ಬಿ. ರಾಮಚಂದ್ರಪ್ಪ, ಪಿಎಸ್‍ಐ ಸುನಿಲ್‍ ತೇಲಿ, ಸಿಬ್ಬಂದಿ ಬಿ.ಬಿ. ರೇವಣನಾಯಕ್‌, ಬಸವರಾಜಯ್ಯ ಭಾಗವಹಿಸಿದ್ದರು.

ಕಾಂಗ್ರೆಸ್ಸಿನ ಎಡವಟ್ಟು ಜೆಡಿಎಸ್ ಗೆ ಸಿಕ್ತು ಪಟ್ಟು:

ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಆಯ್ಕೆ ಮೆಹಬೂಬ್ ಬಾಷ ಅವರ ಮಡದಿಯ ಆಯ್ಕೆ ಉತ್ತಮವಾಗಿರಲಿಲ್ಲ. ಜೆಡಿಎಸ್ ನ ಅಭ್ಯರ್ಥಿ ಅಲ್ತಾಫ್ ಜನರಿಗೆ ಚಿರಪರಿಚಿತ ನಾಗಿದ್ದು. ಜನರ ಸಂಕಷ್ಟಕ್ಕೆ ನೆರವಾಗುವ ವ್ಯಕ್ತಿಯಾಗಿದ್ದ ನೆಂದು ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಗೊಂಡಿತ್ತು. ಅದು ಈಗ ನಿಜವಾಗಿದೆ. ಬಿಜೆಪಿ-ಜೆಡಿಎಸ್ ನೇರ ಹೋರಾಟದಲ್ಲಿ ಬಿಜೆಪಿಯ ಪಾತ್ರ ಅಷ್ಟೇನೂ ಇರಲಿಲ್ಲ.

ಅಂತಿಮವಾಗಿ ನಡೆದ ‌ ಮತದಾನದಲ್ಲಿ 1,444 ಮತದಾರರು ಹಕ್ಕು ಚಲಾಯಿಸಿದ್ದರು. ಜೆಡಿಎಸ್‍ ಅಭ್ಯರ್ಥಿ ಬಿ. ಅಲ್ತಾಫ್‍ 742, ಕಾಂಗ್ರೆಸ್‍ ಅಭ್ಯರ್ಥಿ ಜೀನತ್‍ ಉನ್ನೀಸಾ 409, ಬಿಜೆಪಿ ಅಭ್ಯರ್ಥಿ ಸಂತೋಷ ರಾಜನಹಳ್ಳಿ 290 ಹಾಗೂ ಪಕ್ಷೇತರ ಅಭ್ಯರ್ಥಿ ಸಂಕೇತರಾಜ್‍ 3 ಮತಗಳನ್ನು ಪಡೆದರು.

ಸಂಭ್ರಮದಲ್ಲಿ ಮೈ ಮರೆತ ಜೆಡಿಎಸ್ ನಾಯಕರು:

ಜೆಡಿಎಸ್ ಅಭ್ಯರ್ಥಿಯ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಹಾತ್ಮ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಜಯಘೋಷಗಳೊಂದಿಗೆ ಸಂಭ್ರಮಾಚರಣೆ ಮಾಡಿದರು. ಮಾಜಿ ಶಾಸಕ ಎಚ್‍.ಎಸ್‍. ಶಿವಶಂಕರ್‍ ಹಾಗೂ ವಿಜೇತ ಅಭ್ಯರ್ಥಿ ಬಿ. ಅಲ್ತಾಫ್‍ಗೆ ಹಾರ ಹಾಕಿ ಮೆರವಣಿಗೆ ನಡೆಸಲಾಯಿತು.

ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ ಸಂಭ್ರಮಾಚರಣೆ ಮೂಕಪ್ರೇಕ್ಷಕರಾದ ಅಧಿಕಾರಿಗಳು:

ಜೆಡಿಎಸ್‍ ಸಂಭ್ರಮಾಚರಣೆಯಲ್ಲಿ ಅಂತರ ಹಾಗೂ ಮಾಸ್ಕ್‌ ಕಣ್ಮರೆಯಾಗಿತ್ತು. ನೂರಾರು ಜನ ಗುಂಪು ಸೇರಿ ಮೆರವಣಿಗೆ ನಡೆಸಿದರು. ಇದನ್ನು ನೋಡುತ್ತಿದ್ದ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದರು ಕೋವಿಡ್ ನಿಯಮಗಳು ಕಣ್ಮರೆ ಆಗಿತ್ತು…

ವರದಿ.. ರಘುರಾಜ್ ಹೆಚ್. ಕೆ…

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...