Home ಶಿವಮೊಗ್ಗಆರೋಗ್ಯಡಾ.ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದ ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘ..!

ಡಾ.ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದ ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘ..!

by EDITOR NEWS WARRIORS


ಡಾ.ಬಿ ಆರ್ ಅಂಬೇಡ್ಕರ್ ಎಲ್ಲರಿಗೂ ಚಿರಪರಿಚಿತವಾದ ಬಹು ದೊಡ್ಡ ಹೆಸರು. ಆದರೆ ಅವರ ಘನ ವ್ಯಕ್ತಿತ್ವದ ಪರಿಚಯ ಎಷ್ಟು ಜನರಿಗಿದೆಯೋ ಗೊತ್ತಿಲ್ಲ. ದೃಷ್ಟಿ ಇಲ್ಲದಿರುವವನು ಆನೆಯನ್ನು ವರ್ಣಿಸಿದಂತೆ ತಮ್ಮ ತಮ್ಮ ಗ್ರಹಿಕೆಯ ಮಿತಿಯಲ್ಲಷ್ಟೇ ಅವರನ್ನು ಗ್ರಹಿಸಿದವರೇ ಹೆಚ್ಚಿರಬಹುದು. ಅವರ ಧೀಮಂತ ವ್ಯಕ್ತಿತ್ವದ ಪರಿಚಯವಾಗಬೇಕಿದ್ದರೆ ಅಂಬೇಡ್ಕರ್ ರವರನ್ನು ಸಾಕಷ್ಟು ಓದಿಕೊಳ್ಳಬೇಕು. ಬಹುತೇಕರಿಗೆ ಅಷ್ಟೆಲ್ಲಾ ಓದುವ ತಾಳ್ಮೆಯಾಗಲಿ, ಕುತೂಹಲವಾಗಲಿ ಇರಲಿಕ್ಕಿಲ್ಲ. ಅಂತವರಾದರೂ ಎಫ್ ಹೆಚ್ ಜಕ್ಕಪ್ಪನವರ ಅನುವಾದಿಸಿದ “ಪುಸ್ತಕ ಮನೆ” ಪ್ರಕಟಿತ ಅವರ ಈ ಭಾಷಣವನ್ನಾದರೂ ಓದಿದರೆ ಅಂಬೇಡ್ಕರ್ ಎಂತಹ ಮಹಾನ್ ವ್ಯಕ್ತಿಯಾಗಿದ್ದರು ಎಂಬ ಅರಿವಾಗುವುದು ಖಂಡಿತ.ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಹೋನ್ನತ ವ್ಯಕ್ತಿತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಕೂಡ ಸಂವಿದಾನ ಶಿಲ್ಪಿಗೆ ನಾವು ಸಲ್ಲಿಸುವ ಗೌರವ ಎಂದು ನಾವು ಭಾವಿಸಿದ್ದೇವೆ. ಅದಕ್ಕಾಗಿ ಕಳೆದ ಕೆಲ ವರ್ಷಗಳಿಂದ ಅವರ ಜನ್ಮ ದಿನದಂದು ವಿಶೇಷವಾಗಿ ಅವರ ಈ ಭಾಷಣದ ಪ್ರತಿಗಳನ್ನು ಹಂಚುವ ಮೂಲಕ ಅಂಬೇಡ್ಕರ್ ರವರ ಬಗ್ಗೆ ಅರಿವು ಹೆಚ್ಚಿಸುವ ಪುಟ್ಟ ಪ್ರಯತ್ನವನ್ನು ನಮ್ಮ ಸಂಘ ಮಾಡುತ್ತಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಶಾಖೆಯ ಅಧ್ಯಕ್ಷ ಟಿ ವಿ ಸತೀಶ ನುಡಿದರು. ಅವರು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಘದ ಕಾರ್ಯದರ್ಶಿ ರಾಮು ಬಿ, ಅಂಬೇಡ್ಕರ್ ರವರ ಬಗ್ಗೆ, ಅವರ ವಿಚಾರಧಾರೆಯ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಈ ದಿಸೆಯಲ್ಲಿ ನಮ್ಮ ವ್ಯಾಪ್ತಿಯಲ್ಲಿ ನಡೆಸುತ್ತಿರುವ ನಮ್ಮ ಈ ಪುಟ್ಟ ಪ್ರಯತ್ನಗಳು ಒಂದಿಷ್ಟು ಸಾರ್ಥಕತೆಯ ಭಾವ ತಂದಿದೆ ಎಂದರು.

ಉಪಾಧ್ಯಕ್ಷ ಎಲ್ಲಪ್ಪ ವಡ್ಡರ್ ಮಾತನಾಡಿ, ಡಾ. ಅಂಬೇಡ್ಕರ್ ರವರ ಬದುಕು ನಮಗೆ ಆದರ್ಶವಾಗಬೇಕು. ನಮ್ಮ ಯುವ ಜನತೆ ಅವರ ತತ್ವ ಆದರ್ಶಗಳಿಂದ ಪ್ರೇರೇಪಿತರಾಗಬೇಕು ಎಂದರು.ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ನವೀನ್, ಮಂಜುನಾಥ, ಅಕ್ಷಯ್,ಆದಿತ್ಯ, ರಾಜೇಶ್ವರಿ, ಕಾಡಪ್ಪ ಗೌಡ, ಮಲ್ಯ ಮತ್ತಿತರರಿದ್ದ ಕಾರ್ಯಕ್ರಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರಿಗೆ ಅರವತ್ತು ವರ್ಷ ತುಂಬಿದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ನಾಗರೀಕ‌ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾಡಿದ್ದ ಭಾಷಣದ ಕನ್ನಡ ಅನುವಾದಗಳ ಪ್ರತಿಯನ್ನು ಹಂಚುವ ಮೂಲಕ ಅಂಬೇಡ್ಕರ್ ಜಯಂತಿ ವಿಶಿಷ್ಟವಾಗಿ ಆಚರಿಸಿತು.

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!