Home ಶಿವಮೊಗ್ಗಮಲೆನಾಡು ಮರ್ಚೆಂಟ್ಸ್ ಮನೋರಂಜನಾ ಕೇಂದ್ರದ ಮೇಲೆ ಪೊಲೀಸರ ದಾಳಿ 19 ಜನರ ಬಂಧನ ..!

ಮಲೆನಾಡು ಮರ್ಚೆಂಟ್ಸ್ ಮನೋರಂಜನಾ ಕೇಂದ್ರದ ಮೇಲೆ ಪೊಲೀಸರ ದಾಳಿ 19 ಜನರ ಬಂಧನ ..!

by EDITOR NEWS WARRIORS
0 comments

ಶಿವಮೊಗ್ಗ: ನಗರದ  ಮಲೆನಾಡು ಮರ್ಚೆಂಟ್ಸ್ ಮನೋರಂಜನಾ ಕೇಂದ್ರದ ಮೇಲೆ ಶಿವಮೊಗ್ಗ ಪೊಲೀಸ್ ದಾಳಿ ನಡೆಸಿದ್ದು ಅಂದರ್ ಬಾಹರ್ ಆಡುತ್ತಿದ್ದ 19 ಜನರನ್ನು ವಶಪಡಿಸಿಕೊಂಡಿದ್ದಾರೆ.

ಇಂದು ಸಂಜೆ ಅಂದರ್ ಬಾಹರ್ ಆಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿಯ ಮೇರೆಗೆ  ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಮೊಗ್ಗ ಟೌನ್ ಬಿ.ಹೆಚ್ ರಸ್ತೆಯ  ಮಲೆನಾಡು ಸಿರಿಯ ಮುಂಬಾಗ ಹರ್ಷ ಆರ್ಕಿಡ್ ನ 2ನೇ ಮಹಡಿಯಲ್ಲಿರುವ ಮಲೆನಾಡು ಮರ್ಚೆಂಟ್ಸ್ ಮನೋರಂಜನಾ ಕೇಂದ್ರದಲ್ಲಿ ಎಸ್ ಪಿ  ಮಿಥುನ್ ಕುಮಾರ್ ಜಿ ಕೆ,   ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಅನಿಲ್ ಕುಮಾರ್ ಭೂಮಾರೆಡ್ಡಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು  ಕಾರಿಯಪ್ಪ ಎ.ಜಿ,ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2  ರವರ ಮಾರ್ಗದರ್ಶದಲ್ಲಿ, ಬಾಬು ಅಂಜನಪ್ಪ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ ಮತ್ತು  ಪ್ರಕಾಶ್ ಪೊಲೀಸ್ ಉಪಾಧೀಕ್ಷಕರು, ಡಿಎಆರ್ ಶಿವಮೊಗ್ಗ ರವರ ನೇತೃತ್ವದಲ್ಲಿ,  ತಿಪ್ಪೇಸ್ವಾಮಿ ಪಿಐ ಸಿಇಎನ್ ಪೊಲೀಸ್ ಠಾಣೆ, ಶ್ರೀಶೈಲ ಪಟ್ಟಣ ಶೆಟ್ಟಿ ಪಿಎಸ್ಐ ಡಿಸಿಆರ್. ಬಿ ಶಿವಮೊಗ್ಗ ಮತ್ತು ಸಿಬ್ಬಂಧಿಗಳನ್ನೊಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಇಸ್ಪೀಟು ಜೂಜಾಟ ಆಡುತ್ತಿದ್ದ ಒಟ್ಟು 19 ಜನ ಆರೋಪಿತರನ್ನು ದಸ್ತಗಿರಿ ಮಾಡಿ, ಜೂಜಾಟದಲ್ಲಿ ಪಣವಾಗಿಟ್ಟಿದ್ದ ಒಟ್ಟು 1,25,850/- ರೂ ನಗದು ಹಣ, ಟೋಕನ್ ಗಳು ಮತ್ತು ಇಸ್ಪೀಟು ಎಲೆಗಳನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣಾ ಗುನ್ನೆ ಸಂಖ್ಯೆ 0147/2024 ಕಲಂ 79, 80 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಿಜೆಪಿಯ ಮಾಜಿ ಕಾರ್ಪೊರೇಟರ್ ಮಾಲಿಕತ್ವದ ಇಸ್ಪೀಟ್ ಅಡ್ಡೆ ಇದಾಗಿದ್ದು ನಿರಂತರವಾಗಿ ಇಲ್ಲಿ ಇಸ್ಪೀಟ್ ಆಟ ನಡೆಯುತ್ತಿದ್ದು ಇಂದು ಖಚಿತ ಮಾಹಿತಿಯ ಮೇರೆಗೆ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆದಿದೆ.

Related Articles

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!