Home ಶಿಕಾರಿಪುರಈಶ್ವರಪ್ಪ ವೋಟ್ ಬ್ಯಾಂಕ್ ಗೆ ಬಿಜೆಪಿ ರಣತಂತ್ರ ಶಿಕಾರಿಪುರದಿಂದ ರೆಡಿಯಾದ ಶಿಕಾರಿವೀರ ಯಾರು..?!

ಈಶ್ವರಪ್ಪ ವೋಟ್ ಬ್ಯಾಂಕ್ ಗೆ ಬಿಜೆಪಿ ರಣತಂತ್ರ ಶಿಕಾರಿಪುರದಿಂದ ರೆಡಿಯಾದ ಶಿಕಾರಿವೀರ ಯಾರು..?!

by EDITOR NEWS WARRIORS
0 comments

ಬಿಜೆಪಿಯ ರೆಬೆಲ್ ನಾಯಕ ಕೆಎಸ್ ಈಶ್ವರಪ್ಪ ಬಿಜೆಪಿಗೆ ದೊಡ್ಡ ತಲೆ ನೋವಾಗಿದ್ದಾರೆ ಬಿಜೆಪಿಗೆ ಬಂಡಾಯವಾಗಿ ತಾವೇ ಸಂಸದ ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದಾರೆ. ಯಾರ ಮನವಲಿಕೆಗೂ ಬಗ್ಗದೆ ಮೂರು ಬಾರಿ ನಾಮಪತ್ರ ಸಲ್ಲಿಸಿ ತಮ್ಮ ಉಮೇದುವಾರಿಕೆಯನ್ನುಸಾಬೀತುಪಡಿಸಿದ್ದಾರೆ.

ಈಶ್ವರಪ್ಪ ವೋಟ್ ಬ್ಯಾಂಕ್ ಕೀಳಲು ಬಿಜೆಪಿ ರಣತಂತ್ರ :

ಹಲವು ಕಡೆ ಒಂದೇ ಹೆಸರಿನ ಹಲವು ಅಭ್ಯರ್ಥಿಗಳನ್ನು ನಿಲ್ಲಿಸಿ ರಣತಂತ್ರಗಳನ್ನು ಬಳಸಿದ ಉದಾಹರಣೆಗಳು ಸಾಕಷ್ಟು ಇದೆ ಇದೇ ರೀತಿ ಶಿವಮೊಗ್ಗದಲ್ಲೂ ಕೂಡ ಕೆಎಸ್ ಈಶ್ವರಪ್ಪನವರ ವಿರುದ್ಧ ಅದೇ ಹೆಸರಿನ ಇನ್ನೊಬ್ಬ ವ್ಯಕ್ತಿಯನ್ನು ಕಣಕ್ಕಿಳಿಸಿ ಬಿಜೆಪಿ ತನ್ನ ರಣತಂತ್ರ ವನ್ನು ರೂಪಿಸಿದೆಯಾ..?!

ಯಾರು ಈ ಶಿಕಾರಿಪುರದ ಶಿಕಾರಿ ವೀರ..?!

ಪಕ್ಷೇತರ ಅಭ್ಯರ್ಥಿಯಾಗಿ ಡಿ.ಎಸ್.ಈ‍ಶ್ವರಪ್ಪ ಎಂಬುವವರು ಇವತ್ತು ನಾಮಪತ್ರ ಸಲ್ಲಿಸಿದ್ದಾರೆ. ನಾಲ್ವರು ಸೂಚಕರೊಂದಿಗೆ ಆಗಮಿಸಿ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಡಿ.ಎಸ್.ಈಶ್ವರಪ್ಪ ಶಿಕಾರಿಪುರ ಪಟ್ಟಣದ ಮಾಯಪ್ಪನ ಕೇರಿಯವರು‌ ಎಂದು ತಿಳಿದು ಬಂದಿದೆ.

ಈಶ್ವರಪ್ಪನವರ ವೋಟ್ ಬ್ಯಾಂಕ್ ಕೀಳಲು ಅದೇ ಹೆಸರಿನ ಇನ್ನೊಬ್ಬ ವ್ಯಕ್ತಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸುವ ಮೂಲಕ ಬಿಜೆಪಿ ಪಕ್ಷ ಪರೋಕ್ಷವಾಗಿ ಈಶ್ವರಪ್ಪನವರನ್ನು  ಮಣಿಸಲು ಪ್ಲಾನ್ ರೂಪಿಸುತ್ತಿದ್ಯಾ..? ಇದು ವರ್ಕೌಟ್ ಆಗುತ್ತಾ..? ಕಾದು ನೋಡಬೇಕು…

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...