Home ಮಂಡ್ಯಹನುಮಧ್ವಜ ಸ್ಥಂಭ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

ಹನುಮಧ್ವಜ ಸ್ಥಂಭ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

by EDITOR NEWS WARRIORS
0 comments

ಮಂಡ್ಯ : ಕೆರಗೋಡು ಹನುಮಧ್ವಜ ಸ್ಥಂಭ  ಪ್ರಕರಣ ಇದೀಗ ಬೇರೆ ತಿರುವು ಪಡೆದುಕೊಂಡಿದ್ದು   ಹನುಮಧ್ವಜ ಸ್ಥಂಭ ಹೋರಾಟಗಾರರ ವಿರುದ್ದ ರೌಡಿ ಶೀಟರ್  ಅಸ್ತ್ರವನ್ನು ಸರ್ಕಾರ ಪ್ರಯೋಗಿಸಲು ಮುಂದಾಗಿದ್ದು ಹನುಮಧ್ವಜ ಸ್ಥಂಭಕ್ಕಾಗಿ ಹೋರಾಟ ನಡೆಸಿದ್ದ ಮೂವರಿಗೆ ನೋಟಿಸ್ ನೀಡಲಾಗಿದ್ದು.


ಮಂಡ್ಯದ ಕೆರಗೋಡು ಪೊಲೀಸರಿಂದ ರೌಡಿ ಶೀಟರ್ ತೆರೆಯುವ ನೋಟಿಸ್ ಜಾರಿ‌ ಮಾಡಲಾಗಿದೆ.
ಬಾಲಕೃಷ್ಣ @ ಚಿಕ್ಕಬಳ್ಳಿ ಬಾಲು, ಕಾರ್ತಿಕ್ ಮತ್ತು ಹರೀಶ್ ಗೆ ನೋಟೀಸ್‌ ನೀಡಲಾಗಿದೆ.


ಕೆರಗೋಡು ಹನುಮಧ್ವಜ ಸ್ಥಂಭಕ್ಕಾಗಿ ಹೋರಾಟ ನಡೆಸಿದ್ದ ಈ ಮೂವರು ಬಾರಿ ಹೋರಾಟ ನಡೆಸಿದ್ದರು.
ದೇಶಾಧ್ಯಂತ ಬಾರೀ ಸಂಚಲನ ಉಂಟುಮಾಡಿದ್ದ ಪ್ರಕರಣ ಇದಾಗಿತ್ತು.


ಹನುಮಧ್ವಜ  ಹೋರಾಟದ ಸಂದರ್ಭ ಐಪಿಸಿ ಸೆಕ್ಷನ್ 143, 341,353,149 ರ ಅಡಿಯಲ್ಲಿ ಇವರ ವಿರುದ್ದ ಪ್ರಕರಣ ದಾಖಲು ಮಾಡಲಾಗಿತ್ತು.


ಹನುಮಧ್ವಜ ಹೋರಾಟದ ಸಂದರ್ಭ ಅನ್ಯಕೋಮಿನವರನ್ನ ಹೆದರಿಸುವುದು, ಬೆದರಿಸುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಕೊಟ್ಟು ನೋಟಿಸ್ ಜಾರಿಗೊಳಿಸಿ 7 ದಿನಗಳ ಒಳಗೆ ಕೆರಗೋಡು ಪೊಲೀಸ್ ಠಾಣೆಗೆ ಹಾಜರಾಗಿ ನೋಟಿಸ್ಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ.


ನೋಟಿಸ್ ತಲುಪಿದ ನಂತರ ಹನುಮಧ್ವಜ ಹೋರಾಟಗಾರರ ಆಕ್ರೋಶ ಹೊರಹಾಕಿದ್ದು
ಹಿಂದು ಕಾರ್ಯಕರ್ತರನ್ನ ಹತ್ತಿಕ್ಕಲಾಗ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

Latest news
Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..!