Home ಶಿವಮೊಗ್ಗಆರೋಗ್ಯShivamogga:ಡಾ/ ಪೃಥ್ವಿ ಬಿ.ಸಿ ಯವರಿಂದ ಯಶಸ್ವಿಯಾಗಿ ನಡೆದ ಆಶಾ ಕಾರ್ಯಕರ್ತೆಯರ ತರಬೇತಿ ಕಾರ್ಯಾಗಾರ..!

Shivamogga:ಡಾ/ ಪೃಥ್ವಿ ಬಿ.ಸಿ ಯವರಿಂದ ಯಶಸ್ವಿಯಾಗಿ ನಡೆದ ಆಶಾ ಕಾರ್ಯಕರ್ತೆಯರ ತರಬೇತಿ ಕಾರ್ಯಾಗಾರ..!

by EDITOR NEWS WARRIORS
0 comments

ಶಿವಮೊಗ್ಗ: ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ವಿನ್ ಲೈಫ್, ಡಯಬಿಟಿಸ್ ವೆಲ್ ನೆಸ್ ಸೆಂಟರ್, ಮೆಟ್ರೋ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಸಹಯೋಗದೊಂದಿಗೆ ನಡೆದ ಕಾರ್ಯಾಗಾರದಲ್ಲಿ ಆಶಾ ಕಾರ್ಯಕರ್ತೆಯರು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದರು.

ಈ ಕಾರ್ಯಾಗಾರದಲ್ಲಿ ಮಧುಮೇಹ @360°, ಸಮತೋಲನ ಆಹಾರ ಪದ್ಧತಿ, ಮೆಡಿಕಲ್ ಯೋಗ ಥೆರಪಿ, ತುರ್ತು ಜೀವ ರಕ್ಷಕ ತರಬೇತಿ ಹಾಗೂ ಆಧುನಿಕ ಆವಿಷ್ಕಾರಗಳ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸವನ್ನು ಸವಿಸ್ತಾರವಾಗಿ ನೀಡಲಾಯಿತು. ಡಾ ಪೃಥ್ವಿ ಬಿ. ಸಿ ಯವರಿಂದ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಡಯಬಿಟಿಸ್ ಕುರಿತು ಸಂಪೂರ್ಣ ಮತ್ತು ನಿರಂತರ ಮಾಹಿತಿಗಾಗಿ ಕ್ಯೂ ಆರ್ ಸ್ಕ್ಯಾನರ್ ಕೋಡ್ ನ್ನು ಅನಾವರಣಗೊಳಿಸಲಾಯಿತು.

ಗ್ರಾಮೀಣ ಭಾಗದಲ್ಲಿ ಜನರಿಗೆ ಹತ್ತಿರವಾಗಿ ಸೇವೆ ಸಲ್ಲಿಸುವ ಆಶಾ ಕಾರ್ಯಕರ್ತೆಯರು ಮನಸು ಮಾಡಿದರೆ ಮಧುಮೇಹ ಅಥವಾ  ಸಕ್ಕರೆ ಕಾಯಿಲೆ ಬಗೆಗೂ ಜನರಲ್ಲಿ ದೊಡ್ಡ ಜಾಗೃತಿ ಮೂಡಿಸಲು ಸಾಧ್ಯವಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಅಭಿಪ್ರಾಯಪಟ್ಟರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಸ್‌. ನಟರಾಜ್‌ ಮಾತನಾಡಿ, ಆರೋಗ್ಯ ಸುಧಾರಣೆಯಲ್ಲಿ ಆಶಾ ಕಾರ್ಯಕರ್ತೆಯರು ಕೊಡುಗೆ ಅಪಾರವಾಗಿದೆ. ಅವರಿಗೆ ಇಂತಹ ತರಬೇತಿ ಅಗತ್ಯವಾಗಿ ಬೇಕಾಗಿತ್ತು. ಆ ನಿಟ್ಟಿನಲ್ಲಿ ವಿನ್ ಲೈಫ್, ಡಯಬಿಟಿಸ್ ವೆಲ್ ನೆಸ್ ಸೆಂಟರ್ ಹಾಗೂ ಮೆಟ್ರೋ ಆಸ್ಪತ್ರೆ ಮಧು ಮೇಹ ಮತ್ತು ಸಿಪಿಆರ್‌ ಕುರಿತು ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರ ಶ್ಲಾಘನೀಯವಾದದ್ದು ಎಂದರು. 

ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ ಕೆ, ಡಾ ನಟರಾಜ್ ಕೆ ಎಸ್ -ಶಿವಮೊಗ್ಗ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಧಿಕಾರಿಗಳು, ಡಾ ಓ ಮಲ್ಲಪ್ಪ- ಆರ್ ಸಿ ಹೆಚ್ ಅಧಿಕಾರಿಗಳು, ಡಾ ನಾಗರಾಜ್ ನಾಯಕ್ ಎಲ್ – ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಮೆಟ್ರೋ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಪಿ. ಲಕ್ಷ್ಮೀ ನಾರಾಯಣ ಆಚಾರ್‌ ಹಾಗೂ ವಿನ್ ಲೈಫ್ ನ ಮ್ಯಾನಜಿಂಗ್ ಟ್ರಸ್ಟಿ ಹಾಗೂ  ಮೆಟ್ರೋ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಪೃಥ್ವಿ ಬಿ.ಸಿ. ಯವರು ಉಪಸ್ಥಿರಿದ್ದರು.

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...