Home ರಾಜ್ಯShivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..!

Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..!

by EDITOR NEWS WARRIORS
0 comments

ಮಹಾನಗರ ಪಾಲಿಕೆಯ ನಿಷ್ಕ್ರಿಯ ಆಯುಕ್ತರೆಂದೇ ಹೆಸರುವಾಸಿಯಾಗಿದ್ದ ಶ್ರೀಮತಿ ಡಾ/ ಕವಿತಾ ಯೋಗಪ್ಪನವರ್ ವರ್ಗಾವಣೆಯಾಗಿದೆ.

..

ಕಳೆದ ವರ್ಷ ಜೂನ್ 18ರಂದು ಮಾಯಣ್ಣ ಗೌಡ ಅವರ ಜಾಗಕ್ಕೆ ಬಂದು ಅಧಿಕಾರ ಸ್ವೀಕರಿಸಿದ ಕವಿತಾ ಯೋಗಪ್ಪನವರ್ 2006ರ ಬ್ಯಾಚ್ ನ್ ಕೆ ಎ ಎಸ್ ಅಧಿಕಾರಿ ಮೂಲತ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರು ಗ್ರಾಮದವರಾಗಿದ್ದು ತಂದೆ ದಿವಂಗತ ಎಸ್ ಎಸ್ ಯೋಗಪ್ಪನವರ ಕೂಡ ಕೆ ಎ‌ ಎಸ್ ಅಧಿಕಾರಿಯಾಗಿದ್ದರು.

ಬೆಂಗಳೂರಿನಲ್ಲಿ ಬಿಬಿಎಂಪಿಯಲ್ಲಿ ಶಿವರಾಂ ಕಾರಂತ್ ಬಡಾವಣೆ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದ ಕವಿತಾ ಯೋಗಪ್ಪನವರ್ ಶಿವಮೊಗ್ಗಕ್ಕೆ ಕಳೆದ ವರ್ಷ ವರ್ಗಾವಣೆಯಾಗಿ ಬಂದಿದ್ದರು.

ಕವಿತಾ ಯೋಗಪ್ಪನವರ ಮೇಲೆ ಇತ್ತು ಸಾಲು ಸಾಲು ಆರೋಪಗಳು..!

ಕವಿತಾ ಯೋಗಪ್ಪನವರ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದ ದಿನದಿಂದ ಇಲ್ಲಿಯವರೆಗೂ ಸಾರ್ವಜನಿಕರಿಂದ ,ಸಂಘ ಸಂಸ್ಥೆಗಳಿಂದ, ಸಂಘಟನೆಗಳಿಂದ, ಪತ್ರಕರ್ತರಿಂದ ನಿರಂತರವಾಗಿ ಸಾಲು ಸಾಲು ಆರೋಪಗಳನ್ನು ಎದುರಿಸುತ್ತಿದ್ದಾರೆ. ಕಾರಣ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ ,ತಮ್ಮ ಅಧೀನದಲ್ಲಿ ಕಾರ್ಯನಿರ್ವ ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲ, ಏನೇ ಕೆಲಸ ಹೇಳಿದರು ಅದನ್ನು ಪೂರ್ಣಗೊಳಿಸುವುದಿಲ್ಲ ರಾಜಕಾರಣಿಗಳ ಮಾತಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ, ಭ್ರಷ್ಟಾಚಾರದ ಆರೋಪಗಳು ನಿರಂತರವಾಗಿ ಇವರ ಮೇಲೆ ಇದೆ ಮಾನ್ಯ ಲೋಕಾಯುಕ್ತದಲ್ಲಿ ಇವರ ಮೇಲೆ ಸುಮಟೊ ಪ್ರಕರಣಗಳು ದಾಖಲಾಗಿವೆ. ಕೆಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಹಿಂದೆ ಯಾವುದೇ ಆಯುಕ್ತರು ಈ ರೀತಿ ಇರಲಿಲ್ಲ ಅಂತಹ ನಿಷ್ಕ್ರಿಯ ಆಯುಕ್ತರು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇದ್ದಾರೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದಾರೆ. ಪತ್ರಿಕೆ ಕೂಡ ನಿರಂತರವಾಗಿ ಇವರ ವಿರುದ್ಧ ಸಾಕ್ಷಿ ಸಮೇತ ಸಾಕಷ್ಟು ಸುದ್ದಿಯನ್ನು ಪ್ರಕಟಿಸಿದ್ದು ಮಾನ್ಯ ಲೋಕಾಯುಕ್ತಕ್ಕೆ, ಪ್ರಾದೇಶಿಕ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ ದೂರನ್ನು ಕೂಡ ನೀಡಲಾಗಿತ್ತು ಲೋಕಾಯುಕ್ತದಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಯಿತು. ಪ್ರಾದೇಶಿಕ ಆಯುಕ್ತರಿಂದ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬಂದಿದ್ದು ಇದೆಲ್ಲಾದರ ಪರಿಣಾಮ ಆಯುಕ್ತೆ ಕವಿತಾ ಯೋಗಪ್ಪನವರ್ ಈಗ ಶಿವಮೊಗ್ಗದಿಂದ ಎತ್ತಂಗಡಿ ಆಗಿದ್ದಾರೆ.

ಬೆಳಗಾವಿಗೆ ಕವಿತಾ ಯೋಗಪ್ಪನವರನ್ನು ವರ್ಗಾವಣೆ ಮಾಡುವ ಸಾಧ್ಯತೆ ಇದ್ದು… ಇವರ ಜಾಗಕ್ಕೆ ಎಂಟು ಜನರು ಬರಲು ಕಾಯುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಪತ್ರಿಕೆ ಪ್ರಕಟಿಸಿತ್ತು. ಅದರಲ್ಲಿ ಹಿಂದೆ ‌ ಯಶಸ್ವಿಯಾಗಿ ಎಲ್ಲರೊಂದಿಗೆ ಉತ್ತಮವಾಗಿ ಬೆರೆತು ಕಾರ್ಯನಿರ್ವಹಿಸಿದ ಮಾಯಣ್ಣಗೌಡರ ಅವರ ಹೆಸರು ಕೂಡ ಕೇಳಿ ಬಂದಿತ್ತು.

ಇದೀಗ ಡಾಕ್ಟರ್ ಕವಿತಾ ಯೋಗಪ್ಪನವರ ಜಾಗಕ್ಕೆ ಹಿಂದೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಮಾಯನಗೌಡ ಮತ್ತೆ ಬಂದಿದ್ದು ಶಿವಮೊಗ್ಗ ನಗರದ ನಾಗರಿಕರಲ್ಲಿ ಉತ್ಸಾಹ ಮೂಡಿಸಿದೆ ಡಾಕ್ಟರ್ ಕವಿತಾ ಯೋಗಪ್ಪನವರಿಗೆ ಸರ್ಕಾರ ಇನ್ನು ಸ್ಥಳ ತೋರಿಸಿಲ್ಲ.

ರಘುರಾಜ್ ಹೆಚ್‌ ಕೆ…9449553305…

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...