Home ರಾಜ್ಯBig news: ವಿಗ್ರಹ ಒದ್ದವನ ಮನೆ ಕೆಡವಲು ಶಾಸಕ ಚೆನ್ನಿ ಡೆಡ್ ಲೈನ್..! ಏನಿದು ಬಂಗಾರಪ್ಪ ಬಡಾವಣೆಯ ಘಟನೆ ‌..?! ಸುಳ್ಳು ಸುದ್ದಿ ಹಬ್ಬಿಸುವವರಿಗೆ ಎಚ್ಚರಿಕೆ ನೀಡಿದ ಎಸ್ ಪಿ..!

Big news: ವಿಗ್ರಹ ಒದ್ದವನ ಮನೆ ಕೆಡವಲು ಶಾಸಕ ಚೆನ್ನಿ ಡೆಡ್ ಲೈನ್..! ಏನಿದು ಬಂಗಾರಪ್ಪ ಬಡಾವಣೆಯ ಘಟನೆ ‌..?! ಸುಳ್ಳು ಸುದ್ದಿ ಹಬ್ಬಿಸುವವರಿಗೆ ಎಚ್ಚರಿಕೆ ನೀಡಿದ ಎಸ್ ಪಿ..!

by EDITOR NEWS WARRIORS
0 comments

ಶಿವಮೊಗ್ಗ : ನಗರದ ಬಂಗಾರಪ್ಪ ಬಡಾವಣೆಯಲ್ಲಿ ಅನ್ಯಕೋಮಿನ ವ್ಯಕ್ತಿ ಓರ್ವ ಹಿಂದೂ ವಿಗ್ರಹವನ್ನು ಒದ್ದು ಚರಂಡಿಗೆ ಹಾಕಿದ ಘಟನೆ ಇಂದು ಸಂಜೆ ನಡೆದಿದ್ದು. ಶಿವಮೊಗ್ಗ ಗ್ರಾಮೀಣ ಪಿಎಸ್ ಮಿತಿಯ ರಾಗಿ ಗುಡ್ಡ ಬಳಿಯ ಬಂಗಾರಪ್ಪ ಲೇಔಟ್‌ನಲ್ಲಿ ನಾಗರ ವಿಗ್ರಹ ಸ್ಥಳಾಂತರಗೊಂಡ ಘಟನೆ ನಡೆದಿದೆ..

ನಿರ್ಮಾಣ ಹಂತದಲ್ಲಿರುವ ವಕೀಲ ಸಿದ್ದಿಯೂಕ್ ಅವರ ಮನೆಯ ಮುಂದೆ ಸುಮಾರು 1000 ಚದರ ಅಡಿ ವಿಸ್ತೀರ್ಣದ ತೆರೆದ ಉದ್ಯಾನವಿದೆ.. ಒಬ್ಬ ನಿಯಮ್ ಮನೆಯ ನಿರ್ಮಾಣವನ್ನು ನೋಡಿಕೊಳ್ಳುತ್ತಾರೆ ನಿಯಮ್ ಅವರ ಸ್ನೇಹಿತ ನಾಗರ ವಿಗ್ರಹವನ್ನು ಸ್ಥಳಾಂತರಗೊಳಿಸಿ ಎಸೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪೋಲಿಸರು ಪರಿಶೀಲಿಸಿದ ನಂತರ ವಿಗ್ರಹವು ಅದೇ ಸ್ಥಳದಲ್ಲಿದೆ ಆದರೆ ಅದನ್ನು ಸಿಮೆಂಟ್ ನೆಲಕ್ಕೆ ಅಂಟಿಸಿದ ಅಂಟು‌ ಸ್ವಲ್ಪ ಸಡಿಲಗೊಂಡಿದೆ..

ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದು  ಆರೋಪಿಗಳನ್ನು ಗುರುತಿಸಲಾಗಿದ್ದು ಆಸಲಿಗೆ ಏನಾಯಿತು ಎಂಬುದನ್ನು ಪರಿಶೀಲಿಸುತ್ತಿದ್ದಾರೆ.

ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಪ್ರಸ್ತುತ ವಾತಾವರಣ ಶಾಂತವಾಗಿದ್ದು ಇಲ್ಲಿ ಮನೆ ಕಟ್ಟುತ್ತಿರುವ ಮುಸ್ಲಿಂ ವ್ಯಕ್ತಿ ಓರ್ವ ಈ ಕೃತ್ಯವನ್ನು ಎಸಿಗಿದ್ದಾನೆ ಎಂದು ಸ್ಥಳೀಯರು ಆರೋಪಿಸುತ್ತಿದ್ದು ಪೊಲೀಸರು ಸ್ಥಳಕ್ಕೆ ಬಂದು ಈ ಘಟನೆಗೆ ಸಂಬಂಧಿಸಿದಂತೆ 2 ಜನರನ್ನು ಬಂಧಿಸಿ ವಿಚಾರಣೆ ಗೊಳಪಡಿಸಿದ್ದಾರೆ.

ವಿಗ್ರಹ ಒದ್ದವನ  ಮನಯನ್ನು ಕೆಡವಿ ಶಾಸಕ ಚೆನ್ನಿ ಡೆಡ್ ಲೈನ್..!

ಸ್ಥಳಕ್ಕೆ ಶಾಸಕ ಚನ್ನಬಸಪ್ಪ ಚೆನ್ನಿ ಭೇಟಿ ನೀಡಿದ್ದು ಈ ಸಮಯದಲ್ಲಿ ಸ್ಥಳೀಯರು ಹಾಜರಿದ್ದು ಈ ಮನೆಯನ್ನು ಅನಧಿಕೃತವಾಗಿ ಕಟ್ಟುತ್ತಿದ್ದು ಈ ಮನೆಯನ್ನು ಕಟ್ಟುತ್ತಿರುವ ಮಾಲೀಕನೇ ಈ ವಿಗ್ರಹವನ್ನು  ಒದ್ದಿದಾನೆ ಆದ್ದರಿಂದ ಈ ಮನೆಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಈ ಸಮಯದಲ್ಲಿ ಮಾತನಾಡಿದ ಶಾಸಕ ಚೆನ್ನಿ ರಾಗಿಗುಡ್ ಶಾಂತಿನಗರ  ಈಗ ಪ್ರಸ್ತುತ ಶಾಂತವಾಗಿದೆ ಶಾಂತಿಯನ್ನು ಕದಡುವ ಪ್ರಯತ್ನವನ್ನು ಕೆಲವು ದುಷ್ಕರ್ಮಿಗಳು ಮಾಡುತ್ತಿದ್ದಾರೆ ಅಂಥವರನ್ನು ಮಟ್ಟ ಹಾಕಬೇಕು ಈ ವಿಗ್ರಹವನ್ನು ಒದ್ದವನ ಮನೆಯನ್ನು ಕೆಡವಿ ನಾಳೆ ಒಳಗೆ ಈ ಕೆಲಸ ಆಗಬೇಕು ಎಂದು ಡೆಡ್ ಲೈನ್ ನೀಡಿದ್ದಾರೆ.

ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎನ್ನುವಂತೆ ಮುಸ್ಲಿಂಮರ ಪವಿತ್ರ ಹಬ್ಬ ಇರುವ ಸಂದರ್ಭದಲ್ಲಿ ಈ ತರಹದ ಘಟನೆ ನಡೆದಿರುವುದು ದುರಂತವೇ ಸರಿ.

ಸುಳ್ಳು ಸುದ್ದಿ ಹಬ್ಬಿಸುವವರಿಗೆ ಖಡಕ್ ಎಚ್ಚರಿಕೆ ನೀಡಿದ ಎಸ್ಪಿ ಮಿಥುನ್ ಕುಮಾರ್ : 

ರಾಗಿಗುಡ್ಡ ಸಮೀಪ ಬಂಗಾರಪ್ಪ ಬಡಾವಣೆಯಲ್ಲಿ ಘಟನೆ ಒಂದು ನಡೆದಿದೆ ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ವಿಚಾರಣೆ ನಡೆಸುತ್ತಿದ್ದೇವೆ ಅಸಲಿಗೆ ಏನಾಗಿದೆ ಎಂದು ಪರಿಶೀಲಿಸುತ್ತಿದ್ದೇವೆ ವಿನಾಕಾರಣ ಮಾಹಿತಿ ತಿಳಿದುಕೊಳ್ಳದೆ ಸುಳ್ಳು ಸುದ್ದಿ ಹಬ್ಬಿಸಿದರೆ ಅಂತರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ ಪಿ ಎಚ್ಚರಿಕೆ ನೀಡಿದ್ದಾರೆ.

ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿರಲಿ ಅಂತವರಿಗೆ ಕಠಿಣ ಶಿಕ್ಷೆ ಆಗಬೇಕು ಪ್ರಕರಣ ಮುಂದುವರಿಯದಂತೆ ನೋಡಿಕೊಳ್ಳಬೇಕು ಎಂದು ಪ್ರಜ್ಞಾವಂತರು ಕಳಕಳಿ ವ್ಯಕ್ತಪಡಿಸಿದ್ದಾರೆ…

ರಘುರಾಜ್ ಹೆಚ್‌ ಕೆ..9449553305…

 

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...