
ಕೊಪ್ಪಳ: ಕೊರೋನಾ ಲಸಿಕೆ ಹಾಕಿಸಿಕೊಳ್ಳುವ ಅಂತೆ ಸರ್ಕಾರಗಳು ಎಷ್ಟೇ ಜಾಗೃತಿ ಮೂಡಿಸಿದ್ದರೂ, ಅಧಿಕಾರಿಗಳು ಎಷ್ಟೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಕೆಲವು ಜನರು ಮಾತ್ರ ಇನ್ನು ತಮ್ಮ ಅಸಡ್ಡೆಯನ್ನು ತೋರಿಸುತ್ತಿದ್ದಾರೆ. ಜನರಿಗೆ ಈಗಲೂ ಲಸಿಕೆಯ ಬಗ್ಗೆ ಭಯ ಹೋಗಿಲ್ಲ.
ಇಂಥದ್ದೊಂದು ವಿಚಿತ್ರ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ:
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದಗುಂಪ ಗ್ರಾಮದಲ್ಲಿ ಲಸಿಕೆ ಅಭಿಯಾನವನ್ನು ಕಾರ್ಯಕ್ರಮವನ್ನು ಆರೋಗ್ಯ ಅಧಿಕಾರಿಗಳು, ಸಿಬ್ಬಂದಿಗಳು ನಡೆಸುತ್ತಿದ್ದಾರೆ. ಲಸಿಕೆ ಪಡೆಯುವಂತೆ ಗ್ರಾಮಸ್ಥರನ್ನು ಮನವೊಲಿಸಿ, ಲಸಿಕೆ ಹಾಕಿಸೋದಕ್ಕೆ ಮುಂದಾಗಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಗ್ರಾಮದ ಹುಚ್ಚಪ್ಪ ಛಲವಾದಿ ಎಂಬಾತನಿಗೆ ಕೊರೋನಾ ಲಸಿಕೆ ಹಾಕಿಸಿಕೊಳ್ಳುವಂತೆ ಬಾ ಎಂಬುದಾಗಿ ಕರೆದಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ ಹುಚ್ಚಪ್ಪ ಚಲವಾದಿ:
ಆರೋಗ್ಯ ಸಿಬ್ಬಂದಿಗಳು ಮನೆಗೆ ತೆರಳಿ ಲಸಿಕೆ ಹಾಕೋದಕ್ಕೆ ಹೋದಾಗ, ಹುಚ್ಚಪ್ಪ ಛಲವಾದಿ ಲಸಿಕೆ ಹಾಕಿಸಿಕೊಳ್ಳೋ ಭಯದಿಂದ ತನ್ನ ಮನೆಯ ಮಾಳಿಗೆ ಏರಿದ್ದಾನೆ. ನಾನು ಲಸಿಕೆ ಹಾಕಿಸಿಕೊಳ್ಳೋದಿಲ್ಲ. ಹಾಕೋಕೆ ಬಂದ್ರೇ ಇಲ್ಲಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೆದರಿಸಿದ್ದಾನೆ.
ಹೀಗೆ ಮಾಳಿಗೆ ಏರಿದ್ದಂತ ಹುಚ್ಚಪ್ಪನನ್ನು ಮನವೊಲಿಸಿದಂತ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೆಳಗೆ ಇಳಿಸಿದ್ದಾರೆ. ಕೊರೋನಾ ಲಸಿಕೆಯ ಬಗ್ಗೆ ಸಂಪೂರ್ಣವಾಗಿ ತಿಳಿ ಹೇಳಿ, ಆತನನ್ನು ಲಸಿಕೆ ಹಾಕಿಸಿಕೊಳ್ಳೋದಕ್ಕೆ ಮನವೊಲಿಸಿದ್ದಾರೆ. ಕೊನೆಗೂ ಲಸಿಕೆ ಹಾಕಿಸಿಕೊಳ್ಳೋದಿಲ್ಲ ಎಂಬುದಾಗಿ ಮಾಳಿಗೆ ಏರಿದ್ದಂತ ಹುಚ್ಚಪ್ಪ ಛಲವಾದಿಗೆ ಮನವೊಲಿಸಿ ಲಸಿಕೆ ಹಾಕಿದ್ದಾರೆ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: 9449553305/7892830899