ರಾಜ್ಯಾದ್ಯಂತ ಕೊರೋನಾ ರೂಪಾಂತರಿ ಆತಂಕ ಇದ್ದರು ಸರಳ ಸಾಮಾನ್ಯ ಮುಖ್ಯಮಂತ್ರಿ ಎಂದು ಕರೆಸಿಕೊಳ್ಳುತ್ತಿದ್ದ ಬಸವರಾಜ್ ಬೊಮ್ಮಾಯಿ ಅವರು ಇತ್ತೀಚಿಗೆ ಏಕೋ ದುಬಾರಿ ಆಗುತ್ತಿದ್ದಾರೆ.

ರಾಜ್ಯದ್ಯಂತ ಮತ್ತೆ ಎಲ್ಲೆಡೆ ಆತಂಕ ಶುರುವಾಗುವ ಲಕ್ಷಣ ಕಾಣುತ್ತಿದೆ.ಕೋವಿಡ್ ರೂಪಾಂತರಿ ಓಮಿಕ್ರಾನ್ ಆತಂಕ ಇರುವುದರಿಂದ ಮುಖ್ಯಮಂತ್ರಿಗಳ ಆದೇಶದ ಪ್ರಕಾರ ಸರ್ಕಾರ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸುವಂತೆ ಜನಸಾಮಾನ್ಯರಿಗೆ ಸೂಚಿಸಿದೆ.
ಶಾಲಾ-ಕಾಲೇಜುಗಳಿಗೆ ನಿರ್ಬಂಧ:
ಶಾಲಾ-ಕಾಲೇಜುಗಳಲ್ಲಿ ನಡೆಯುವ ಸೆಮಿನಾರ್‌ಗಳನ್ನು ರದ್ದು ಮಾಡಲಾಗಿದೆ. ಮದುವೆ ಮುಂತಾದ ಸಮಾರಂಭಗಳಿಗೆ ಇನ್ನೂ ಬ್ರೇಕ್ ಹಾಕದಿದ್ದರೂ ಸಹ ಹೆಚ್ಚಿನ ಜನರನ್ನು ಸೇರಿಸಿಬೇಡಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂಬ ಮೌಖಿಕ ಸೂಚನೆ ನೀಡಿದೆ.
ಈ ಮಧ್ಯೆ ಮುಖ್ಯಮಂತ್ರಿಗಳೇ ಮದುವೆಗಾಗಿ ತಮ್ಮ ಇಡೀ ಒಂದು ದಿನದ ಸಮಯ ಮೀಸಲಿಟ್ಟು ಪ್ರಯಾಣ ಮಾಡುತ್ತಿದ್ದಾರೆ.
ಮುಖ್ಯಮಂತ್ರಿಯ ಅಧಿಕೃತ ಕಾರ್ಯಕಲಾಪ ಪಟ್ಟಿಯನ್ನು ನೋಡಿದಾಗ ಮದುವೆಗಳು, ಆರತಕ್ಷತೆ, ಗೃಹ ಪ್ರವೇಶದಂತಹ ಕಾರ್ಯಕ್ರಮಗಳಿಗೆ ಯಾವುದೇ ಕೊರತೆ ಇರುವುದಿಲ್ಲ. ವಾರದಲ್ಲಿ ಮೂರ್ನಾಲ್ಕು ದಿನವಾದರೂ ಇಂತಹ ಖಾಸಗಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡೇ ಇರುತ್ತಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ (ಡಿ.1) ಹುಬ್ಬಳ್ಳಿ ಧಾರವಾಡ ಪ್ರವಾಸ ಹಮ್ಮಿಕೊಂಡಿದ್ದಾರೆ. ಅವರು ನೀಡಿರುವ ಪ್ರವಾಸ ಪಟ್ಟಿಯನ್ನೇ ನೋಡಿದರೆ ಯಾವುದೇ ಸರ್ಕಾರಿ ಸಭೆ, ಕಾರ್ಯಕ್ರಮಗಳು ಇಲ್ಲ. ಎರಡು ಮದುವೆ ಇವೆ. ಹೀಗೆ ಖಾಸಗಿ ಕಾರ್ಯಕ್ರಮಗಳಿಗಾಗಿ ಮುಖ್ಯಮಂತ್ರಿ ಇಡೀ ದಿನ ಪ್ರವಾಸ ಮಾಡುತ್ತಿದ್ದಾರೆ. ಇದರಲ್ಲಿ ಸರ್ಕಾರಿ ಕಾರ್ಯಕ್ರಮ ಸೇರಿರುವುದಿಲ್ಲ, ಇದು ಅಧಿಕೃತ ಪ್ರವಾಸ ಪಟ್ಟಿಯಲ್ಲಿ ಸೇರಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಮದುವೆಗಾಗಿ ವಿಮಾನದಲ್ಲಿ ಹೊರಟ ಮುಖ್ಯಮಂತ್ರಿ:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣ ಮೂಲಕ ಇಂಡಿಗೋ ವಿಮಾನದಲ್ಲಿ ಬೆಳಗ್ಗೆ 6.05ಕ್ಕೆ ಹುಬ್ಬಳ್ಳಿಗೆ ಪ್ರಯಾಣ ಬೆಳಸಿದಿದ್ದಾರೆ. ಬೆಳಗ್ಗೆ 7.30ಕ್ಕೆ ಹುಬ್ಬಳ್ಳಿ ತಲುಪಲಿದ್ದಾರೆ. ಬಳಿಕ ಅವರ ಸಮಯವನ್ನು ಕಾಯ್ದಿರಿಸಲಾಗಿದೆ.
ಬೆಳಗ್ಗೆ 11.30ಕ್ಕೆ ಹುಬ್ಬಳ್ಳಿಯ ಅಶೋಕನಗರ ಹತ್ತಿರ ನವನಿಕೇತನ ಸಭಾಭವನದಲ್ಲಿ ನಡೆಯುವ ಮದುವೆ ಕಾರ್ಯಕ್ರಮದಲ್ಲಿ ಸಿಎಂ ಪಾಲ್ಗೊಳ್ಳಲಿದ್ದಾರೆ. ಧಾರವಾಡ ಜಿಲ್ಲಾ ಬಿಜೆಪಿ ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾ ಸಂಚಾಲಕ ವೀರಣ್ಣ ಬಿ. ಕುಬಸದ ಅವರ ಪುತ್ರಿ ರೋಷಿನಿ ಮತ್ತು ಮಂಜು ಗಣೇಶ್ ಆರ್. ಎಂಬುವವರ ವಿವಾಹ ನಡೆಯಲಿದೆ.
ಬಳಿಕ ಮಧ್ಯಾಹ್ನ 12.10ಕ್ಕೆ ರಸ್ತೆ ಮೂಲಕ ಧಾರವಾಡದತ್ತ ಪ್ರಯಾಣ ಬೆಳಸಲಿದ್ದಾರೆ. ಇಲ್ಲಿನ ಡಾ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆಯುವ ಆಶಾ ಮತ್ತು ಕಾಶೀನಾಥ ಅ. ಹಾದಿಮನಿ ಇವರ ಪುತ್ರಿ ನಮ್ರತಾ ಮತ್ತು ರೋಹಿತ್ ಇವರ ವಿವಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದಾರೆ.
ಈ ಮದುವೆ ಕಾರ್ಯಕ್ರಮದ ನಂತರ ಮುಖ್ಯಮಂತ್ರಿಗಳ ಸಮಯ ಕಾಯ್ದಿರಿಸಲಾಗಿದೆ. ಬಳಿಕ ರಾತ್ರಿ 8.15ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನದಲ್ಲಿ ಹೊರಟು ರಾತ್ರಿ 9.35ಕ್ಕೆ ಬೆಂಗಳೂರು ತಲುಪಲಿದ್ದಾರೆ.
ಸರಳ ಸಾಮಾನ್ಯ ಮುಖ್ಯಮಂತ್ರಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಮದುವೆ ಕಾರ್ಯಕ್ರಮಗಳಿಗೆ ಹಾಜರ್ ಆಗುತ್ತಿರುವುದು ಎಷ್ಟು ಸರಿ ಎನ್ನುವುದು ಜನಸಾಮಾನ್ಯರ ಪ್ರಶ್ನೆ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…