ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಎಂಟು ವರ್ಷದ ಪುಟ್ಟ ಬಾಲಕ ಮಂಗನ ಕಾಯಿಲೆಗೆ ಬಲಿಯಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಸುಮಾರು 12 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ ತೀರ್ಥಹಳ್ಳಿಯ ಕೋಣಂದೂರು ಸಮೀಪದ ದತ್ತರಾಜಪುರ ಎನ್ನುವ ಹಳ್ಳಿಯ ರಚಿತ್ ಎನ್ನುವ ಎಂಟು ವರ್ಷದ ಪುಟ್ಟ ಬಾಲಕನೇ ಮೃತ ದುರ್ದೈವಿ ಆಗಿದ್ದಾನೆ.
ಕಳೆದ 12 ದಿನಗಳ ಹಿಂದೆ ರಚಿತ್ ಮತ್ತು ಆತನ ಸಹೋದರಿಗೆ ತೀವ್ರವಾದ ಜ್ವರ ಕಾಣಿಸಿಕೊಂಡಿತ್ತು. ಇಬ್ಬರನ್ನೂ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಬ್ಬರನ್ನು ಪರೀಕ್ಷೆಯ ಒಳಪಡಿಸಿದಾಗ ಸಹೋದರನಿಗೆ ಮೊದಲು ಕೆಎಫ್ ಡಿ ಪಾಸಿಟಿವ್ ಬಂದಿದೆ. ಆದರೆ ರಜತ್ ಗೆ ನಾರ್ಮಲ್ ಎಂದು ವರದಿ ಬಂದಿತ್ತು ನಂತರ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ
ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚೇತರಿಸಿಕೊಂಡ ಸಹೋದರಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ರಚಿತ್ ಚಿಕಿತ್ಸೆ ಫಲಿಸದೆ ನಿನ್ನೆ ತಡರಾತ್ರಿ 8:30ರ ವೇಳೆಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಕುಟುಂಬಗಳ ಮಾಹಿತಿಯ ಪ್ರಕಾರ ಇಬ್ಬರು ಮಕ್ಕಳು ಶಾಲೆ ಬಿಟ್ಟರೆ ಮನೆಗೆ ಬರುತ್ತಿದ್ದರೆ ವಿನಃ ಕಾಡಿಗೆ ಹೋದ ಬಗ್ಗೆ ಗೊತ್ತಿಲ್ಲ ಹೇಗೆ ಅವರಿಗೆ ಮಂಗನ ಕಾಯಿಲೆ ಬಂತು ಎನ್ನುವುದೇ ಗೊತ್ತಾಗುತ್ತಿಲ್ಲ ಎನ್ನುತ್ತಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ವೈದ್ಯಾಧಿಕಾರಿಗಳಾದ ಡಾಕ್ಟರ್ ನಟರಾಜ್ ಅವರು ಪತ್ರಿಕೆ ಜೊತೆ ಮಾತನಾಡಿ ಈ ಪ್ರಕರಣ ನಿನ್ನೆ ತಡರಾತ್ರಿ ನಡೆದಿದೆ ಆದರೆ ಇದು ಶಂಕಿತ ಪ್ರಕರಣವಾಗಿದ್ದು ಪುಣೆಗೆ ಸ್ಯಾಂಪಲ್ ಕಳಿಸಿದ್ದೇವೆ ಅಲ್ಲಿಂದ ವರದಿ ಬಂದ ನಂತರವೇ ದೃಢಪಡುವುದು ಆರೋಗ್ಯ ಇಲಾಖೆಯಿಂದ ಎಲ್ಲಾ ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತಿದ್ದೇವೆ ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎನ್ನುತ್ತಾರೆ.
ತೀರ್ಥಹಳ್ಳಿ ತಾಲೂಕಿಗೆ ಸಂಬಂಧಿಸಿದಂತೆ ಇದು ಎರಡನೇ ಪ್ರಕರಣವಾಗಿದೆ ಹಿಂದೆ ಕೊನೇರಿಪುರ ಗ್ರಾಮದ 54 ವರ್ಷದ ಮಹಿಳೆ ಕೆಎಫ್‌ಡಿ ಸೋಂಕಿನಿಂದ ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಸಾವನ್ನಪ್ಪಿದ್ದರು.
ಒಟ್ಟಿನಲ್ಲಿ ಮಲೆನಾಡಿನಲ್ಲಿ ಮಂಗನ ಕಾಯಿಲೆಯ ಆರ್ಭಟ ಮತ್ತೆ ಶುರುವಾಗಿದೆ. ಇತಿಹಾಸದ ಪುಟ ಸೇರಿರುವ ಕಾಯಿಲೆಗೆ ಯಾವುದೇ ಸರ್ಕಾರಗಳು ಬಂದರೂ ಸರಿಯಾದ ಚಿಕಿತ್ಸೆಯ ಕ್ರಮ ಸಿಕ್ಕಿಲ್ಲ ಎನ್ನುವುದೇ ದುರಂತ.