
ಕನಕದಾಸರ 534 ನೇ ಜಯಂತಿಯನ್ನು ನವುಲೆ ಯಲ್ಲಿ ಶ್ರೀಶ್ರೀಶ್ರೀ ಬೀರೇಶ್ವರ ವಿಕಾಸನ ಸಂಸ್ಥೆ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಸಮಾಜದ ಹಿರಿಯರಾದ ಶಿವಲಿಂಗಪ್ಪ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.
ಸಭಾಧ್ಯಕ್ಷರಾದ ನವುಲೆಯ ಎಂ,ಈಶ್ವರಪ್ಪನವರು ಪುಷ್ಪ ನಮನ ಸಲ್ಲಿಸಿದರು.
ಸಂಸ್ಥೆ ಅಧ್ಯಕ್ಷರಾದ ನವುಲೆಯ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಈ ಬೀರಪ್ಪ, ಕಾರ್ಯದರ್ಶಿ ಕೃಷ್ಣ ಎನ್, ಉಪಾಧ್ಯಕ್ಷರಾದ ಷಣ್ಮುಖ, ಪರಮೇಶ್, ಸುರೇಶ್, ಆನಂದ್ , ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಮಾರ್ಗದರ್ಶಿಗಳು ,ಸಮಾಜದ ಬಾಂಧವರು,ಶಾಲಾ ಮಕ್ಕಳು ಗ್ರಾಮಸ್ಥರು, ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಅನ್ನಸಂತರ್ಪಣೆ , ಸಿಹಿ ವಿತರಣೆ ಮಾಡಲಾಯಿತು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…