
ಶಿವಮೊಗ್ಗ:ಲಕ್ಷ್ಮೀಪ್ರಸಾದ್, ಐ ಪಿ ಎಸ್ ಪೊಲೀಸ್ ಅಧೀಕ್ಷ ಕರು, ಶಿವಮೊಗ್ಗ, ಶೇಖರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ, ಖಚಿತ ಮಾಹಿತಿ ಮೇರೆಗೆ ಗಜಾನನ ಸುತಾರ ಪ್ರೊಬೆಶನರಿ ಡಿವೈಎಸ್ ಪಿ ರವರು ತುಂಗಾನಗರ ಪೋಲಿಸ್ ಠಾಣೆಯ ಅಧಿಕಾರಿ ದೀಪಕ್ ಹೆಗಡೆ ಹಾಗೂ ಸಿಬ್ಬಂದಿಗಳು , ಶಂಕರ್ ಡಿಸಿಎಫ್ ಶಂಕರ್ ವಲಯ ಆಲ್ಕೊಳ ಹಾಗೂ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಯವರೊಂದಿಗೆ ಜಂಟಿಯಾಗಿ ಭರ್ಜರಿ ಕಾರ್ಯಾಚರಣೆ ನಡೆಸಿ,
ಅಕ್ರಮ ಶ್ರೀಗಂಧ ತುಂಡುಗಳ ವಶ:
ಟಿಪ್ಪುನಗರ ಏಳನೇ ಕ್ರಾಸ್ ಗೋಡೋನ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಸುಮಾರು 910 ಕೆ.ಜಿ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದು. ಈ ಸಂಬಂಧ ಗಜಾನನ ಸುತಾರ, ಪ್ರೊಬೆಶನರಿ ಡಿವೈಎಸ್ಪಿ ರವರ ದೂರಿನ ಮೇರೆಗೆ ಪ್ರಕರಣ ಅರಣ್ಯ ಇಲಾಖೆಯಲ್ಲಿ ದಾಖಲಿಸಲಾಗಿರುತ್ತದೆ. ಆರೋಪಿ ಅಪ್ಸರ್ ನನ್ನ ಬಂಧಿಸಲಾಗಿದೆ.
ಗಜಾನನ ಸುತಾರ, ಪ್ರೊಬೆಶನರಿ ಡಿವೈಎಸ್ಪಿ ಹಾಗೂ ತುಂಗಾ ನಗರ ಪೊಲೀಸ್ ಠಾಣೆಯ ಅಧಿಕಾರಿ ದೀಪಕ್ ಹೆಗಡೆ ಹಾಗೂ ಸಿಬ್ಬಂದಿ ರವರ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305