
ಸಾರನಾಥದ ಅಶೋಕ ಸ್ತಂಭದ ಮೂಲ ಸ್ವರೂಪದಂತೆ, ರಾಷ್ಟ್ರ ಲಾಂಛನವನ್ನು ಪೈಬರ್ ಕಲಾಕೃತಿಯಲ್ಲಿ ರೂಪಸಿಲಾಗಿದೆ..
ಧ್ವಜ ಸ್ತಂಭದ ನಾಲ್ಕು ಮೂಲೆಗಳಿಗೂ ರಾಷ್ಟ್ರ ಲಾಂಛನದಲ್ಲಿ ಇರುವ ಪ್ರಾಣಿಗಳಾದ
ಸಿಂಹ, ಗೂಳಿ,ಕುದುರೆ, ಆನೆ, ಗಳನ್ನು ಅಳವಡಿಸಲಾಗಿದೆ,
ರಾಷ್ಟ್ರ ಲಾಂಛನ 7 ಅಡಿ ಎತ್ತರವಿದೆ,
12*12 ಅಡಿಯ ಧ್ವಜದ ಸ್ತಂಭ ನಿರ್ಮಾಣ ಮಾಡಿದ್ದು, ಕಪ್ಪು ಗ್ರಾನೈಟ್ ಹಾಕಲಾಗಿದೆ..
ನೂತನ ಧ್ವಜದ ಸ್ತಂಭಕ್ಕೆ ಹೊಂದಿಕೊಂಡಂತೆ, ಕೆಳಗಿನಿಂದ ಮೇಲೆ ಹತ್ತಲು 18 ಮೆಟ್ಟಿಲು ನಿರ್ಮಾಣ ಮಾಡಲಾಗಿದೆ.

ಶಿವಮೊಗ್ಗ :ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಆದರ್ಶ್ ಎಚ್ಎಂ ಹೊಸೂರ್ ತಮ್ಮ ಅಜ್ಜ ದಿ” ಕಾಡಪ್ಪ ಗೌಡ್ರು ಹೊಸೂರು, ತಂದೆ, ದಿ/ ಮಂಜುನಾಥ್ ಗೌಡ್ರು ಹೊಸೂರು ಇವರ ಸವಿನೆನಪಿಗಾಗಿ, ತಾಯಿ ಶ್ರೀಮತಿ ಸರಸ್ವತಿ ಮಂಜುನಾಥ್ ಗೌಡ್ರು ಇವರ ಆರ್ಶ್ರೀವಾದದೊಂದಿಗೆ, ಸಹೋದರಿಯರಾದ ಶ್ರೀಮತಿ ಶಿಲ್ಪ , ಶ್ರೀಮತಿ ಸೀಮಾ ಇವರ ಸಹಕಾರದಿಂದ ನಿರ್ಮಾಣ ಸುಮಾರು 1 ಲಕ್ಷ ರೂ ವೆಚ್ಚ ಹಣ ವೆಚ್ಚಮಾಡಿ ನಿರ್ಮಾಣ ಮಾಡಿಕೊಟ್ಟಿದ್ದಾರೆ.
ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಅತ್ಯಂತ ದೊಡ್ಡ ಧ್ವಜದ ಕಟ್ಟೆ ಎನ್ನುವ ಹಿರಿಮೆಯೂ ಜೊತೆಗೆ ಶಿವಮೊಗ್ಗ ಜಿಲ್ಲೆಯ ಅತಿದೊಡ್ಡ ಧ್ವಜಸ್ತಂಭ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ನಿನ್ನೆ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಬೀರಪ್ಪ ಇಟಗಿ ಅವರ ನೇತೃತ್ವದಲ್ಲಿ ನಡೆದ ಧ್ವಜರೋಹಣ ಕಾರ್ಯಕ್ರಮ ದಲ್ಲಿ ನೂತನ ಧ್ವಜದ ಕಟ್ಟೆಯನ್ನು ದಾನಿಗಳಾದ ಶ್ರೀಮತಿ ಸರಸ್ವತಿ ಮಂಜುನಾಥ್ ಗೌಡ್ರು ಉದ್ಘಾಟನೆ ಮಾಡಿ, ಗೌರವಾರ್ಥವಾಗಿ ಧ್ವಜಾರೋಹಣ ಮಾಡಿ ಗೌರವ ವಂದನೆ ಸಲ್ಲಿಸಿದರು.
ಈ ಸಮಯದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಶೋಕ್ ಓಣಿಮನೆ, ಮಂಜುನಾಥ್ ಹೆಗಡೆ ಗುಡ್ಡೇಕೇರಿ, ಜಯೇಶ್ ಹೆಗಡೆ ಹೊಸೂರು, ಹಸಿರುಮನೆ ಮಹಾಬಲೇಶ್, ಗ್ರಾ ಪಂ ಸದಸ್ಯರಾದ ಶಶಾಂಕ್ ಹೆಗಡೆ ಗುಡ್ಡೇಕೇರಿ, ಬಾಳೆಹಳ್ಳಿ ಪ್ರಭಾಕರ್, ಸಂದೇಶ್ ಜವಳಿ, ನಿತ್ಯಾನಂದ ಅಣಗೋಡು, ಪಟೇಲ್ ವೆಂಕಟೇಶ್ ಹೆಗಡೆ, ದಾನಿಗಳಾದ ಆದರ್ಶ್ ಹೊಸೂರು ಮುಖ್ಯ ಶಿಕ್ಷಕರಾದ ಮಂಜು ಬಾಬು ಹೆಚ್ ಪಿ ಹಾಗೂ ಮಕ್ಕಳು ಶಿಕ್ಷಕರು ಹಾಜರಿದ್ದರು,
ಈ ರಾಷ್ಟ್ರ ಧ್ವಜ ಸ್ತಂಭದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ರಾಷ್ಟ್ರ ಧ್ವಜ ಸ್ತಂಭದ ಕಲ್ಪನೆ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ ವೀರೇಶ್ ಅವರದ್ದಾಗಿದ್ದು ಎಲ್ಲಾ ಶಿಕ್ಷಕರು ವಿಶೇಷ ಸಹಕಾರ ನೀಡಿದ್ದು, ಇದರ ವಿನ್ಯಾಸ ವನ್ನು ಮಾಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಚಿತ್ರಕಲಾ ಶಿಕ್ಷಕರಾದ, ಜಗದೀಶ್ ಶೀಲವಂತರ್ ಮಾಡಿರುತ್ತಾರೆ..
ಸರ್ವರಿಗೂ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೆರಿ ಶಾಲೆ ಮಾದರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಇಲ್ಲಿಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯರು, ಸ್ಥಳೀಯರ, ಪೋಷಕರ, ಸಹಕಾರದೊಂದಿಗೆ ಯಾವುದೇ ಸರ್ಕಾರಿ ಶಾಲೆಗೆ ಕಡಿಮೆ ಇಲ್ಲದ ಹಾಗೆ ಅಭಿವೃದ್ಧಿಪಡಿಸಿದ್ದಾರೆ. ಈಗ ಇನ್ನೊಂದು ಗರಿ ಮೂಡಿದಂತಾಗಿದೆ. ಇದೇ ತರಹ ಎಲ್ಲಾ ಸರ್ಕಾರಿ ಶಾಲೆಗಳು ಪ್ರಯತ್ನಪಟ್ಟರೆ ಪೋಷಕರು ಕೂಡ ಖಾಸಗಿ ಶಾಲೆಗಳನ್ನು ಬಿಟ್ಟುಸರ್ಕಾರಿ ಶಾಲೆಗಳತ್ತ ಮುಖ ಮಾಡುವುದರಲ್ಲಿ ಸಂಶಯವಿಲ್ಲ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305