Wednesday, April 30, 2025
Google search engine
Homeಶಿವಮೊಗ್ಗಸಚಿವ ಈಶ್ವರಪ್ಪ ಹುಚ್ಚುತನದಿಂದ ಮಾತನಾಡುವುದನ್ನು ಬಿಡಲಿ ಅಭಿವೃದ್ಧಿ ಕಡೆ ಗಮನ ಕೊಡಲಿ...!ಕೋರೋಣ ಸೋಂಕಿನ ಹೆಚ್ಚಳಕ್ಕೆ ಈಶ್ವರಪ್ಪ...

ಸಚಿವ ಈಶ್ವರಪ್ಪ ಹುಚ್ಚುತನದಿಂದ ಮಾತನಾಡುವುದನ್ನು ಬಿಡಲಿ ಅಭಿವೃದ್ಧಿ ಕಡೆ ಗಮನ ಕೊಡಲಿ…!ಕೋರೋಣ ಸೋಂಕಿನ ಹೆಚ್ಚಳಕ್ಕೆ ಈಶ್ವರಪ್ಪ ನೇರ ಕಾರಣ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಗಂಭೀರ ಆರೋಪ…!

ಶಿವಮೊಗ್ಗ: ಇಂದು ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ಎಸ್ ಸುಂದರೇಶ್ ಅವರು ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗಲು ಸಚಿವ ಈಶ್ವರಪ್ಪನವರ ಕೊಡುಗೆ ಅಪಾರವಾಗಿದೆ.

ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕಳೆದ ವಾರ ಎರಡಂಕಿ ದಾಟದ ಸೋಂಕಿತ ಸಂಖ್ಯೆ ತಮಿಳುನಾಡಿನ ಮೇಲ್ಮರ ಮತ್ತೂರಿನ ಓಂಶಕ್ತಿ ದರ್ಶನ ಪಡೆದು ಶುಕ್ರವಾರ ರಾತ್ರಿ ಆಗಮಿಸಿದ ಯಾತ್ರಾರ್ಥಿಗಳಿಂದಲೇ ಕೋರೋನಾ ಹೆಚ್ಚಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಓಂಶಕ್ತಿ ದರ್ಶನ ಪಡೆಯಲು ವ್ಯವಸ್ಥೆ ಮಾಡಿದ್ದು, 82 ಬಸ್ಗ ಳಲ್ಲಿ ತೆರಳಿದ್ದ ಯಾತ್ರಾರ್ಥಿಗಳೆಲ್ಲಾರಿಗೂ ಕರೋನಾ ಟೆಸ್ಟ್ ಮಾಡಬೇಕು. ಅವರ ಮನೆಗೆ ಅಧಿಕಾರಿಗಳನ್ನು ಕಳುಹಿಸಿ ತಪಾಸಣೆ ನಡೆಸಬೇಕು. ಹಾಗೆಯೇ ಅವರೆಲ್ಲರಿಗೂ ಕ್ವಾಂರಟೈನ್ ವ್ಯವಸ್ಥೆ ಮಾಡಬೇಕೆಂದು ಕಾಂಗ್ರೆಸ್ ಪಕ್ಷದಿಂದ ಒತ್ತಾಯಿಸಲಾಗಿತ್ತು. ಆದರೆ ಕಾಟಾಚಾರಕ್ಕೆ ಕೋರೋನಾ ಟೆಸ್ಟ್ ಮಾಡಿ ಹಾಗೆಯೇ ಮನೆಗೆ ಕಳುಹಿಸಿದ್ದರಿಂದ ಕೋರೋನಾ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಈಶ್ವರಪ್ಪನವರೇ ನೇರ ಕಾರಣ.

ಮೇಕೆದಾಟು ಪಾದಯಾತ್ರೆಯ ಅಂತಿಮ ದಿನಕ್ಕೆ ಎರಡು ಸಾವಿರ ಜನ ತೆರಳಲು ಸಿದ್ಧತೆ:

ಮೇಕೆದಾಟು ಯೋಜನೆ ಜಾರಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದ್ದು, ಜ.19ರಂದು ಬೆಳಿಗ್ಗೆ 8.30ಕ್ಕೆ ಶಿವಮೊಗ್ಗ ಜಿಲ್ಲೆಯವರು ಕೆಪಿಸಿಸಿ ಕಚೇರಿ ಬಳಿ ಹಾಜರಿರುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ. ಬಹಿರಂಗ ಸಭೆ ನಡೆಯುವ ಸ್ಥಳದವರೆಗೆ ನಡೆಯುವ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದೇವೆ ಎಂದರು.

ಮೇಕೆದಾಟು ಗೆ ಆಡಳಿತಾತ್ಮಕ ಮಂಜೂರಾತಿ ಕೊಟ್ಟಿದ್ದೆ ಕಾಂಗ್ರೆಸ್ ಸರ್ಕಾರ:

ಮೇಕೆದಾಟು ಯೋಜನೆಗೆ ಮೊದಲ ಬಾರಿಗೆ ಆಡಳಿತಾತ್ಮಕ ಮಂಜೂರಾತಿ ಕೊಟ್ಟಿದ್ದೇ ಅಂದಿನ ಕಾಂಗ್ರೆಸ್ ಸರ್ಕಾರ. ಆದರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಲು ವಿಳಂಬ ಮಾಡುತ್ತಿದೆ. ಈ ಯೋಜನೆ ಜಾರಿಯಾದರೆ ಬೆಂಗಳೂರು ಸೇರಿದಂತೆ ಸುತ್ತಮುತ್ತಲ 10 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲವಾಗಲಿದೆ. ಸದರಿ ಯೋಜನೆಯಿಂದ 67.15 ಟಿಎಂಸಿ ನೀರು ಸಂಗ್ರಹಿಸಬಹುದಾಗಿದೆ ಹಾಗೂ 400 ಮೇಗವಾಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸಬಹುದಾಗಿದೆ. ಮುಂದಿನ 50 ವರ್ಷದವರೆಗೆ ಈ 10 ಜಿಲ್ಲೆಗಳಿಗೆ ಕುಡಿಯವ ನೀರಿನ ಸಮಸ್ಯೆ ಇರುವುದಿಲ್ಲ ಎಂದರು.ಈ ಯೋಜನೆ ಜಾರಿ ವಿಳಂಬವಾಗುತ್ತಿರುವ ಬಗ್ಗೆ ಬಿಜೆಪಿ ಸುಳ್ಳು ಹೇಳುತ್ತಿದೆ. ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು ಸಹ ಈ ಯೋಜನೆ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ದೂರಿದರು.

ಕೊರೋನಾ ಸೋಂಕಿನಿಂದ ಅಸುನೀಗಿದವರಿಗೆ ಸಚಿವ ಈಶ್ವರಪ್ಪ 50,000 ರೂ,ಗಳುಪರಿಹಾರ ಧನ ನೀಡಬೇಕು:


ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕಳೆದ ವಾರ ಎರಡಂಕಿ ದಾಟದ ಸೋಂಕಿತ ಸಂಖ್ಯೆ ತಮಿಳುನಾಡಿನ ಮೇಲ್ಮರ ಮತ್ತೂರಿನ ಓಂಶಕ್ತಿ ದರ್ಶನ ಪಡೆದು ಶುಕ್ರವಾರ ರಾತ್ರಿ ಆಗಮಿಸಿದ ಯಾತ್ರಾರ್ಥಿಗಳಿಂದಲೇ ಕರೋನಾ ಹೆಚ್ಚಾಗಿದೆ. ಜಿಲ್ಲಾ ಕರೋನಾ ಟೆಸ್ಟ್ ಮಾಡಿ ಹಾಗೆಯೇ ಮನೆಗೆ ಕಳುಹಿಸಿದ್ದರಿಂದ ಕರೋನಾ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ದೂರಿದರು.
ಓಂಶಕ್ತಿ ದರ್ಶನ ಪಡೆದು ಕರೋನಾ ಸೋಂಕಿಗೊಳಗಾದವರಿಗೆ ಸಚಿವ ಈಶ್ವರಪ್ಪ ಅವರು 50000 ರೂ. ಪರಿಹಾರ ನೀಡಬೇಕು. ಸಚಿವರಿಗೂ ಸಹ ಕರೋನಾ ಟೆಸ್ಟ್ ಮಾಡುವುದು ಒಳ್ಳೆಯದು.

ಸಚಿವ ಈಶ್ವರಪ್ಪ ರನ್ನ ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹ:

ಸಚಿವ ಸ್ಥಾನದಿಂದ ಈಶ್ವರಪ್ಪ ಅವರನ್ನು ವಜಾಗೊಳಿಸುವಂತೆ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಅವಶ್ಯಕತೆ ಇಲ್ಲ ಎಂದರು.

ಕೋವಿಡ್ ನಿಯಮ ಉಲ್ಲಂಘನೆಗೆ ಎಫ್ಐಆರ್ ಕಾಂಗ್ರೆಸ್ ನಾಯಕರಿಗೆ ಮಾತ್ರ ಆದರೆ ಎಫ್ಐಆರ್ ಬಿಜೆಪಿ ನಾಯಕರಿಗೆ ಯಾಕಿಲ್ಲ?

ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ ಆರೋಪದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರು ಸೇರಿದಂತೆ 31 ಜನರ ವಿರುದ್ಧ ಎಫ್ಐ ಆರ್ ದಾಖಲಾಗಿದೆ. ಹೊನ್ನಾಳಿಯ ಬಲಮುರಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಾಸಕ ರೇಣುಕಾಚಾರ್ಯ, ತೀರ್ಥಹಳ್ಳಿಯಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡಿ ಜಾತ್ರೆ ನಡೆಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಜಾತ್ರೆಯಲ್ಲಿ ಭಾಗವಹಿಸಿ ಉಲ್ಲಂಘಿಸಿರುವ ಶಾಸಕ ಸುಭಾಷ್ ಗುತ್ತೇದಾರ್ ವಿರುದ್ಧ ಎಫ್ಐಅಆರ್ ದಾಖಲಿಸಬೇಕು ಬರೀ ಕಾಂಗ್ರೆಸ್ ನಾಯಕರಿಗೆ ಮಾತ್ರ ಎಫ್ಐಆರ್ ದಾಖಲಿಸಿರುವುದು ಎಷ್ಟರಮಟ್ಟಿಗೆ ಸರಿ ಸರ್ಕಾರವನ್ನು ಅವರು ಪ್ರಶ್ನೆ ಮಾಡಿದರು.

ಮಹಾನಗರಪಾಲಿಕೆಯಲ್ಲಿ ಲಂಚವಿಲ್ಲದೆ ಕೆಲಸವಾಗುವುದಿಲ್ಲ ಕಳಪೆಯಿಂದ ಕೂಡಿದ ಸ್ಮಾರ್ಟ್ ಸಿಟಿ ಕಾಮಗಾರಿ:
ಮಹಾನಗರ ಪಾಲಿಕೆಯಲ್ಲಿ ಪಾರದರ್ಶಕ ಆಡಳಿತವಿದ್ದು, ಇಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಮೇಯರ್ ಅವರು ಹೇಳಿಕೆ ನೀಡಿದ್ದಾರೆ. ಆದರೆ, ಯಾವುದೇ ಕೆಲಸವಾಗಬೇಕಾದರೂ ಲಂಚ ನೀಡದೆ ಆಗುತ್ತಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆಯಿಂದ ಕೂಡಿದ್ದು, ಒಂದು ವರ್ಷದವರೆಗೂ ಬಾಳಿಕೆ ಬರುವುದಿಲ್ಲ. ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಸ್ಮಾರ್ಟ್ಸಿದಟಿ ಕಾಮಗಾರಿ ಬಗ್ಗೆ ಪಾಲಿಕೆ ಸದಸ್ಯರಿಗೆ ಮಾಹಿತಿ ಸಿಗುತ್ತಿಲ್ಲ.

ಜನರಿಂದ ಆಯ್ಕೆಯಾಗಿ ಬಂದ ಸಚಿವ ಈಶ್ವರಪ್ಪ ಇನ್ನಾದರೂ ಜನರ ಋಣ ತೀರಿಸಲು ಅಭಿವೃದ್ಧಿ ಕಡೆ ಗಮನ ಕೊಡಲಿ:

ಶಾಸಕ ಈಶ್ವರಪ್ಪ ಅವರು ಹುಚ್ಚು ತನದಿಂದ ಮಾತನಾಡದೆ ಮತದಾರರ ಋಣ ತೀರಿಸಲು ಇನ್ನಾದರೂ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಹರಿಸಬೇಕು .ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಕೋರೋನಾದಿಂದಾಗಿ ಪಕ್ಷದ ವತಿಯಿಂದ ಹೋರಾಟವನ್ನು ನಿಲ್ಲಿಸಿದ್ದು, ಮುಂದೆ ಹೋರಾಟವನ್ನು ತೀವ್ರಗೊಳಿಸಲಾಗುವುದು. ಕೋರೋನಾ ನಿಯಂತ್ರಣಕ್ಕೆ ಪಕ್ಷದ ವತಿಯಿಂದ ಸಂಪೂರ್ಣ ಸಹಕಾರವಿದೆ.

ದೇಶದ ಹಾಗೂ ರಾಜ್ಯದ ಅಭಿವೃದ್ಧಿ ಕೇವಲ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಬಿಜೆಪಿ ಅಭಿವೃದ್ಧಿ ಶೂನ್ಯ:

ರಾಜ್ಯದಲ್ಲಿ ಬಿಜೆಪಿಯ 2/ವರೆ ವರ್ಷದ ಆಡಳಿತ ಸಾಧನೆ ಶೂನ್ಯವಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಹೋರಾಟ ಮಾಡುತ್ತಿದ್ದೇಯೆ ಹೊರತು ಅಭಿವೃದ್ಧಿ ಕಡೆ ಗಮನ ಹರಿಸುತ್ತಿಲ್ಲ. ಬರಿ ಸುಳ್ಳಿನ ರಾಜಕೀಯ ಮಾಡುತ್ತಿದೆ.ದೇಶದ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು:

ಪತ್ರಕರ್ತರೊಬ್ಬರು ಶಿವಮೊಗ್ಗ ಜಿಲ್ಲೆಯಲ್ಲಿ ಕೋರೊನಾ ಸೋಂಕು ಹೆಚ್ಚಾಗಲು ಸಚಿವ ಈಶ್ವರಪ್ಪ ಕಾರಣ ಎಂದು ನೀವು ಹೇಳುತ್ತಿದ್ದೀರಿ. ಆದರೆ ನೀವು ಮೇಕೆದಾಟು ಪಾದಯಾತ್ರೆಗೆ 2000 ಜನ ತೆರಳುತ್ತೇವೆ ಎಂದು ಹೇಳುತ್ತೀರಿ ಇದರಿಂದ ಕೊರೊನಾ ಸೋಂಕು ಹೆಚ್ಚಳವಾಗುವುದಿಲ್ಲವಾ ಎಂದು ಕೇಳಿದಾಗ ಉತ್ತರಿಸಿದ ಸುಂದರೇಶ್ ಆ ಸಮಯದಲ್ಲಿ ಕೋರೋಣದ ತೀವ್ರತೆ ನೋಡಿಕೊಂಡು ತೀರ್ಮಾನತೆಗೆದುಕೊಳ್ಳುತ್ತೇವೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರ ಜೊತೆಗೆ ಮಹಾನಗರಪಾಲಿಕೆಯ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ರೇಖಾ ರಂಗನಾಥ್, ಮೆಹಖ್ ಷರೀಫ್, ಮುಖಂಡರಾದ ಎಲ್.ರಾಮೇಗೌಡ, ವೈ.ಹೆಚ್.ನಾಗರಾಜ್, ಸಿ.ಎಸ್.ಚಂದ್ರಭೂಪಾಲ್, ಶಿವಲಿಂಗ ಮೂರ್ತಿ, ಚಂದ್ರಶೇಖರ್, ಎ.ಬಿ. ಮಾರ್ಟಿಸ್, ಸೌಗಂಧಿಕಾ ಇದ್ದರು. 

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...