ಯಶಸ್ವಿಯಾಗಿ ನಡೆದ ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘದ ರಕ್ತದಾನ ಶಿಬಿರ..!
73 ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಗಾಗಿ ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ಸರ್ಕಾರಿ ನೌಕರರ ಸಮಸ್ಯೆಗಳ ಪರಿಹಾರಕ್ಕಷ್ಟೇ ಸೀಮಿತಗೊಳ್ಳದೆ ಅನೇಕ ನಿರಂತರ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಸಂಘದ ಸತತ ಎಂಟನೆಯ ರಕ್ತದಾನ ಶಿಬಿರ ಎಂಬ ಹೆಮ್ಮೆ ಸಂಘದ್ದು.
ರಾಷ್ಟೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಮಯದಲ್ಲಿ ರಕ್ತದಾನದ ಮೂಲಕ ಸಂಭ್ರಮಿಸುವ ವಿಭಿನ್ನ ಪದ್ದತಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಸಂಘವು ಸರ್ಕಾರಿ ನೌಕರರು ಮತ್ತು ನಾಗರೀಕರು ವರ್ಷಕ್ಕೆರಡು ಬಾರಿಯಾದರೂ ರಕ್ತದಾನ ಮಾಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಈ ಕಾರ್ಯವನ್ನು ಹಮ್ಮಿಕೊಂಡಿದ್ದು,ಇದರೊಂದಿಗೆ ಪ್ರತೀ ವರ್ಷ ಹೊಸ ಹೊಸ ರಕ್ತದಾನಿಗಳನ್ನು ರಕ್ತದಾನಕ್ಕೆ ಪ್ರೇರೇಪಿಸಿ ಸೇರ್ಪಡೆಗೊಳಿಸುವ ಉದ್ದೇಶ ಸಂಘದ್ದು. ಈ ದಿಸೆಯಲ್ಲಿ ಈ ಬಾರಿಯೂ ಹೊಸ ರಕ್ತದಾನಿಗಳ ಸೇರ್ಪಡೆಗೊಂಡಿರುವ ಬಗ್ಗೆ ಸಂಘ ಸಂತಸ ವ್ಯಕ್ತಪಡಿಸಿದೆ.
ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಕಟ್ಟೆ ಮಂಜುನಾಥ್ ಮತ್ತು ಜಯಪ್ರಕಾಶ್ ನೇತೃತ್ವದ ಕಂದಾಯ ಇಲಾಖಾ ತಂಡ, ಡಾ.ಅನಿಕೇತನ್ ನೇತೃತ್ವದ ಆರೋಗ್ಯ ಇಲಾಖಾ ತಂಡ, ಕೃಷಿ ಅಧಿಕಾರಿ ಕೌಶಿಕ್ ನೇತೃತ್ವದ ಕೃಷಿ ಇಲಾಖಾ ತಂಡ,ಉಪವಲಯ ಅರಣ್ಯಾಧಿಕಾರಿ ಎಲ್ಲಪ್ಪ ವಡ್ಡರ್ ನೇತೃತ್ವದ ಅರಣ್ಯ ಇಲಾಖಾ ತಂಡ, ಸಂಘದ ಉಪಾಧ್ಯಕ್ಷ ರಾಘವೇಂದ್ರ ಎಸ್ ನೇತೃತ್ವದ ಆರ್ ಡಿ ಪಿ ಆರ್ ತಂಡ, ಉಪನ್ಯಾಸಕ ನಾಗಭೂಷಣ, ಶಿಕ್ಷಕರಾದ ರಾಘವೇಂದ್ರ, ಮಂಜುನಾಥ್ ಕೆ ಆರ್, ನ್ಯಾಯಾಂಗ ಇಲಾಖೆಯ ಗಣೇಶ್ ಮೂರ್ತಿ ಮುಂತಾದವರ ಜೊತೆಗೆ ಹೊಸಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷ ರಾಜೇಶ್, ಸಾಮಾಜಿಕ ಹೋರಾಟಗಾರ ಹಾರೋಗೊಳಿಗೆ ವಿಶ್ವನಾಥ್,ಮಯೂರ ಹೋಟೆಲ್ ಸಿಬ್ಬಂದಿ ರಾಮಕುಮಾರ್ ಸಂಘದ ಮನವಿಗೆ ಸ್ಪಂದಿಸಿ ರಕ್ತದಾನ ಮಾಡಿರುವುದು ಸಂಘದ ಉತ್ಸಾಹ ಹೆಚ್ಚಿಸಿದ್ದು ಸಂಘದ ಸಮಾಜಮುಖಿ ಕಾರ್ಯದ ಯಶಸ್ಸಿಗೆ ಸಹಕರಿಸಿದ ಸರ್ವರನ್ನೂ ಸಂಘದ ಅಧ್ಯಕ್ಷ ಟಿ ವಿ ಸತೀಶ, ಕಾರ್ಯದರ್ಶಿ ರಾಮು ಬಿ ಕೃತಜ್ಞತೆಯಿಂದ ಸ್ಮರಿಸಿ, ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305