
ಗದಗ : ನಗರದಲ್ಲಿ ನಡೆದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಮಾತನಾಡಿದ ಡಿಕೆ ಶಿವಕುಮಾರ್, ದೆಹಲಿಯ ಕೆಂಪು ಕೋಟೆ ಮೇಲೆ ರಾಷ್ಟ್ರಧ್ವಜ ಬದಲು ಕೇಸರಿ ಧ್ವಜ ಹಾರಾಡುತ್ತೆ ಅಂತ ಈಶ್ವರಪ್ಪ ಹೇಳಿದ್ದಾನೆ. ಇಂತಹ ಮನುಷ್ಯನನ್ನು ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ, ಗವರ್ನರ್ ಕ್ಯಾಬಿನೆಟ್ ನಲ್ಲಿ ಏಕೆ ಇಟ್ಟುಕೊಂಡಿದ್ದಾರೆ ?ಎಂದು ಏಕವಚನದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡ ಶಿವಕುಮಾರ್ ಮುಂದುವರೆದು ಮಾತನಾಡುತ್ತಾ,
ಕಾಂಗ್ರೆಸ್ ಪಕ್ಷದಲ್ಲಿ ಆಗಿದ್ದರೆ ಹತ್ತು ನಿಮಿಷ ಕೂಡ ಇಂಥ ನಾಯಕರು ಇರುತ್ತಿರಲಿಲ್ಲ:
ನಮ್ಮ ಕಾಂಗ್ರೆಸ್ ನಲ್ಲಾಗಿದ್ರೆ ಇಂತಹವರನ್ನು ಹತ್ತು ನಿಮಿಷ ಕೂಡ ಪಕ್ಷದಲ್ಲಿ ಇರಿಸಿಕೊಳ್ಳುತ್ತಿರಲಿಲ್ಲ. ಆದರೆ ಇಂತಹ ಹೇಳಿಕೆ ನೀಡಿದ ಈಶ್ವರಪ್ಪನ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ತುಟಿ ಪಿಟಿಕ್ ಅನ್ನುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ರಾಜ್ಯದ ಪೊಲೀಸರು ಬಿಜೆಪಿಯ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ:
ಇನ್ನು ಈ ರಾಜ್ಯದ ಪೋಲೀಸರಂತೂ ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪವನ್ನು ಡಿಕೆ ಶಿವಕುಮಾರ್ ಮಾಡಿದರು.
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305….