
ಸಾಗರ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಆಸ್ಥಾನಕ್ಕೆ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ಎಂಟರಿಂದ ಒಂಬತ್ತು ತಿಂಗಳು ಕಳೆದಿವೆ.
ಆದರೆ ಸಾಗರ ನಗರಸಭೆಯಲ್ಲಿ ಮಾತ್ರ ಈಗಲೂ ಬಿಎಸ್ವೈ ಮುಖ್ಯಮಂತ್ರಿಯಾಗಿ ಉಳಿದಿದ್ದಾರೆ:
ಸಾಗರದ ನಗರಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಕೊಠಡಿಯಲ್ಲಿ ಈಗಲೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಫೋಟೋ ಇದೆ ಎಲ್ಲೂ ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಫೋಟೋ ಕಾಣುತ್ತಿಲ್ಲ. ಉಳಿದಂತೆ ಸಂಸದರಾದ ರಾಘವೇಂದ್ರ ಶಾಸಕರಾದ ಹಾಲಪ್ಪನವರ ಫೋಟೋ ಹಾಕಲಾಗಿದೆ. ಇನ್ನೊಂದು ಕಡೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಫೋಟೋಗಳನ್ನು ಹಾಕಲಾಗಿದೆ.
ಈಗಲಾದರೂ ಎಚ್ಚೆತ್ತುಕೊಂಡು ಗೌರವಸೂಚಕವಾಗಿ ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಫೋಟೋ ಹಾಕಲಿ…
ವರದಿ: ಓಂಕಾರ್ ಎಸ್ ವಿ ತಾಳಗೊಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305..