
ಸಾಗರ: ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರ ಸುತ್ತಮುತ್ತ ಭಾರಿ ಗುಡುಗು ಸಿಡಿಲು ಮಿಂಚು ಆರ್ಭಟ ಹೆಚ್ಚಾಗಿದೆ.
ಬೆಳಿಗ್ಗೆಯಿಂದ ಬಿರು ಬಿಸಿಲಿನಿಂದ ಬೇಸತ್ತಿದ್ದ ಜನತೆಗೆ ಸಂಜೆ ವೇಳೆಗೆ ವರುಣರಾಯ ತಂಪೆರೆದಿದ್ದಾನೆ.
ಆನಂದಪುರ ಸುತ್ತಮುತ್ತ ಭಾರೀ ಗುಡುಗು ಸಿಡಿಲು ಬಡಿದಿದ್ದು ಆನಂದಪುರ ಹೋಬಳಿಯ ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣ್ಣೂರು ಗ್ರಾಮದ ರಾಜಶೇಖರ ಬಿನ್ ಮಂಜಪ್ಪ ಎಂಬುವರ ಮನೆಯ ತೆಂಗಿನ ಮರಕ್ಕೆ ಸಿಡಿಲು ಬಡಿದಿದ್ದು, ಮನೆಯಲ್ಲಿದ್ದ ಎಮ್ಮೆ ಸಿಡಿಲಿಗೆ ಬಲಿಯಾಗಿದೆ.
ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು, ಪಶು ವೈದ್ಯರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…