
ಶಿವಮೊಗ್ಗ:–ಶಿವಮೊಗ್ಗದ ಮಹಾನಗರ ಪಾಲಿಕೆ ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿದ್ದಾನೆ. ಕಟ್ಟಡ ಪರವಾನಗೆ ನವೀಕರಣಕ್ಕೆ ಹಣದ ಬೇಡಿಕೆ ಇಟ್ಟಿದ್ದ ಹಿನ್ನಲೆಯಲ್ಲಿ ದಾಳಿ ನಡೆದಿದೆ.
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಂಪ್ಯೂಟರ್ ಆಪರೇಟರ್ ವಿಜಯ್ ಸಿಕ್ಕಿಬಿದ್ದಿದ್ದು ಕುವೆಂಪುರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ದಾಳಿ ನಡೆದಿದೆ. ಎಸಿಬಿ ಶಿವಮೊಗ್ಗ ಡಿವೈಎಸ್ಪಿ ಲೋಕೇಶ್ ನೇತೇತ್ವದಲ್ಲಿ ನಡೆದ ದಾಳಿ ನಡೆದಿದೆ.
ಜ್ಯೂನಿಯರ್ ಇಂಜಿನಿಯರ್ ಪರವಾಗಿ, ಹಣ ಪಡೆದುಕೊಳ್ಳುತ್ತಿದ್ದ ಆರೋಪ ಬಂದಿದ್ದು, ಈತ ಹೊರಗುತ್ತಿಗೆ ನೌಕರನೆಂದು ತಿಳಿದುಬಂದಿದೆ.
ಗೋಪಾಳದ ವೈದ್ಯರೊಬ್ವರ ಕಟ್ಟಡಕ್ಕೆ ಎರಡು ವರ್ಷ ಮುಗಿದ್ದಿದ್ದು 70% ಕೆಲಸ ಮುಗಿದಿತ್ತು. ಇನ್ನು 30% ಬಾಕಿ ಉಳಿದಿದ್ದು ಇದಕ್ಕೆ ಒಂದು ವರ್ಷ ಲೈಸೆನ್ಸ್ ನವೀಕರಣಕ್ಕೆ ಗಾಗಿ 10000 ರೂ. ಗೆ ಬೇಡಿಕೆ ಇಡಲಾಗಿತ್ತು.ಇಂದು 6 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಎಸಿಬಿ ಟೀಂ ದಾಳಿ ನಡೆಸಿದೆ.
ವಿನೋಬನಗರದ ವ್ಯಕ್ತಿಯೊಬ್ಬರ ದೂರು ಆಧರಿಸಿ, ದಾಳಿ ಮಾಡಿದ್ದ ಎಸಿಬಿ ಅಧಿಕಾರಿಗಳು.ವಿಜಯ್ ಮತ್ತು ಎಇಇ ಜಯಶೀಲರನ್ನೂ ವಶಕ್ಕೆ ಪಡೆದುಕೊಂಡು ಎಸಿಬಿ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…