
ತೀರ್ಥಹಳ್ಳಿ :ವಿಶ್ವ ಪ್ರಸಿದ್ಧ ಆಗುಂಬೆಯ ಮುಖ್ಯ ರಸ್ತೆಯಲ್ಲಿ ದಿನನಿತ್ಯವೂ ಸಾವಿರಾರು ವಾಹನಗಳು ಸಂಚರಿ ತಿರುತ್ತವೆ. ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಮಣಿಪಾಲ್ ಆಸ್ಪತ್ರೆಗೆ ನಿತ್ಯವೂ ದಾವಣಗೆರೆ ,ಚಿತ್ರದುರ್ಗ, ಶಿವಮೊಗ್ಗ, ಹರಪನಹಳ್ಳಿ ಹೊಸಪೇಟೆ, ಬಳ್ಳಾರಿಯಿಂದಲೂ ಸಹ ಸಾಕಷ್ಟು ಜನ ಚಿಕಿತ್ಸೆಗಾಗಿ ಬರುತ್ತಾರೆ. ಹಾಗೆ ನಿತ್ಯವು ಆಗುಂಬೆಗೆ ಪ್ರವಾಸಿಗರು ಕೂಡ ದಂಡುದಂಡಾಗಿ ಬರುವುದು ಸರ್ವೇ ಸಾಮಾನ್ಯ ಹಾಗಾಗಿ ಸಹಜವಾಗಿಯೇ ಆಗುಂಬೆಯ ಮುಖ್ಯ ರಸ್ತೆಗಳಲ್ಲಿ ಸಾಕಷ್ಟು ವಾಹನಗಳು ದಿನನಿತ್ಯ ಸಂಚರಿಸುತ್ತವೆ.
ಅಧಿಕ ಮಳೆಯಿಂದ ಗುಂಡಿ ಬಿದ್ದಿರುವ ರಸ್ತೆಗಳು :
ಕರ್ನಾಟಕದ ಚಿರಾಪುಂಜಿ ಎಂದೆ ಪ್ರಸಿದ್ಧಿ ಪಡೆದಿರುವ ಆಗುಂಬೆಯಲ್ಲಿ ಆರು ತಿಂಗಳು ಸತತವಾಗಿ ಮಳೆ ಇರುತ್ತದೆ. ಈ ಮಳೆಯ ಆರ್ಭಟಕ್ಕೆ ನ್ಯಾಷನಲ್ ಅಂತಹ ಸಂಸ್ಥೆ ನಿರ್ಮಾಣ ಮಾಡಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಕೂಡ ಗುಂಡಿ ಬಿದ್ದು ಪ್ರಯಾಣಿಕರಿಗೆ ಅನಾಹುತಗಳು ಸಂಭವಿಸುತ್ತಿವೆ.
ಗುಂಡಿ ಬಿದ್ದ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿದ ನ್ಯಾಷನಲ್ ಸಂಸ್ಥೆ :
ಹೀಗೆ ಗುಂಡಿ ಬಿದ್ದ ರಸ್ತೆಯ ವಿಷಯವನ್ನು ಆಗುಂಬೆಯ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಅರ್ಚಕರಾದ ಗಜೇಂದ್ರ ಭಟ್ಟರು ಪತ್ರಿಕೆಯ ಗಮನಕ್ಕೆ ತಂದಾಗ ಪತ್ರಿಕೆ ಕೂಡಲೇ ನ್ಯಾಷನಲ್ ಸಂಸ್ಥೆಗೆ ವಿಷಯ ತಿಳಿಸಿದಾಗ ಕೂಡಲೇ ಸ್ಪಂದಿಸಿದ ಸಂಸ್ಥೆಯವರು ತಾತ್ಕಾಲಿಕ ರಸ್ತೆ ದುರಸ್ತಿ ಕಾರ್ಯವನ್ನು ಮಾಡಿದ್ದಾರೆ. ಮುಂದೆ ಸ್ವಲ್ಪ ಮಳೆ ಕಡಿಮೆಯಾದ ನಂತರ ಶಾಶ್ವತ ರಸ್ತೆ ಕಾರ್ಯ ಮಾಡುವುದಾಗಿ ಭರವಸೆ ನೀಡಿದ್ದಾರೆ…
ಅತೀವ ಕಾಳಜಿಯಿಂದ ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಅರ್ಚಕರಾದ ಗಜೇಂದ್ರ ಭಟ್ಟರು ಪತ್ರಿಕೆಗೆ ತಿಳಿಸಿದ್ದಕ್ಕಾಗಿ ಹಾಗೂ ಕೂಡಲೇ ಇದಕ್ಕೆ ಸ್ಪಂದಿಸಿದ ನ್ಯಾಷನಲ್ ಸಂಸ್ಥೆಯ ಮುಖ್ಯಸ್ಥರಾದ ಶರೀಫ್ ಅವರಿಗೆ ನ್ಯೂಸ್ ವಾರಿಯರ್ಸ್ ಪತ್ರಿಕೆ ಕಡೆಯಿಂದ ಧನ್ಯವಾದಗಳು…
ರಘುರಾಜ್ ಹೆಚ್.ಕೆ…9449553305…