ಶಿವಮೊಗ್ಗ : ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲಾ ಕ್ರೀಡಾಶಾಲೆ/ವಸತಿ ನಿಲಯಕ್ಕೆ ಹಾಕಿ ಮತ್ತು ಕುಸ್ತಿ ಕ್ರೀಡೆಗೆ ಸಂಬಂಧಿಸಿದಂತೆ ಕ್ರೀಡಾಪಟುಗಳ ಅಯ್ಕೆ ಪ್ರಕ್ರಿಯೆ ನಡೆಸುತ್ತಿದ್ದು, ದಿ: 19/07/2022 ರಂದು ಬೆಳಗ್ಗೆ 10.00ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ಆಯ್ಕೆಯನ್ನು ನಡೆಸಲಾಗುವುದು. ಆಸಕ್ತ ಕ್ರೀಡಾಪಟುಗಳು ಅಂದು ಬೆಳಗ್ಗೆ 9.30ಕ್ಕೆ ನಿಗಧಿತ ಸ್ಥಳದಲ್ಲಿ ಹಾಜರಿದ್ದು, ವರದಿ ಮಾಡಿಕೊಳ್ಳುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಿರಿಯರ ವಿಭಾಗದಲ್ಲಿ ಹಾಕಿ ಕ್ರೀಡೆಗೆ ಸಂಬಂಧಿಸಿದಂತೆ ಬಾಲಕ/ಬಾಲಕಿಯರು 11 ವರ್ಷದೊಳಗಿದ್ದು, 5ನೇ ತರಗತಿ ಸೇರಲು ಅರ್ಹತೆ ಹೊಂದಿರಬೇಕು. ಕುಸ್ತಿ ಕ್ರೀಡೆಗೆ ಸಂಬಂಧಿಸಿದಂತೆ ಬಾಲಕು 11 ವರ್ಷದೊಳಗಿದ್ದು, 5ನೇ ತರಗತಿ ಸೇರಲು ಅರ್ಹತೆ ಹೊಂದಿರಬೇಕು.
ಹಿರಿಯರ ವಿಭಾಗದಲ್ಲಿ ವಾಲಿಬಾಲ್ ಕ್ರೀಡೆಗೆ ಸಂಬಂಧಿಸಿದಂತೆ ಬಾಲಕರು 17 ವರ್ಷದೊಳಗಿದ್ದು, ಪ್ರಥಮ ಪಿಯುಸಿ ಸೇರಲು ಅರ್ಹತೆ ಹೊಂದಿರಬೇಕು. ಕ್ರೀಡಾಪಟುಗಳು ಆಯ್ಕೆ ಸಮಯದಲ್ಲಿ ಕಡ್ಡಾಯವಾಗಿ ಕ್ರೀಡಾ ಸಮವಸ್ತ್ರಗಳನ್ನು ಧರಿಸಿರಬೇಕು.
ಹೆಚ್ಚಿನ ಮಾಹಿತಿಗಾಗಿ ಅಥ್ಲೇಟಿಕ್ಸ್ ತರಬೇತುದಾರ ಬಾಳಪ್ಪ ಮಾನೆ-9880653266 ಹಾಗೂ ಕ್ರಿಕೆಟ್ ತರಬೇತುದಾರ ಪಿ.ವಿ.ನಾಗರಾಜ್ -9964599936 ಇವರುಗಳನ್ನು ಸಂಪರ್ಕಿಸುವುದು…
ರಘುರಾಜ್ ಹೆಚ್ .ಕೆ…9449553305….