
ತುಮರಿ (ಕರೂರು ಹೋಬಳಿ ಸಾಗರ ):- ನಾವು ಇಷ್ಟು ಬೇಗ ಇಂತಹದೊಂದು ಪರ್ಯಾಯ ಜನತಾ ಅಂಬುಲೆನ್ಸ್ ಸೇವೆ ಮುಳುಗಡೆ ನೆಲಕ್ಕೆ ಲಭ್ಯ ಆಗುತ್ತದೆ ಎಂದು ಭಾವಿಸಿರಲಿಲ್ಲ. ಸರ್ಕಾರವೆ ನಮಗೆ 2009 ರಲ್ಲಿ 108 ಆರಂಭಿಸಿದಾಗ ನಾಡಿಗೆ ಬೆಳಕು ಕೊಟ್ಟ ಸಂತ್ರಸ್ತ ಜನರ ದ್ವೀಪ ಕರೂರು – ಬಾರಂಗಿ ಹೋಬಳಿಗೆ ನೀಡಿರಲಿಲ್ಲ. ಆಮೇಲೆ ಹೋರಾಟ ಪತ್ರ ಚಳುವಳಿ ಮಾಡಿ ಪಡೆದಿದ್ದೆವು. ಈಗಲೂ ಆ ಸೇವೆ ಕುಂಟುತ್ತಾ ಸಾಗಿದೆ. ಜೋಡಿ ಸಾವು ಅದರೂ ದ್ವೀಪದ 108 ಸೇವೆ ಇಂದಿಗೂ ಸರಿ ಹೋಗಿಲ್ಲ.
ಈ ನಡುವೆ ನಮಗೆ ಸರಕಾರವಲ್ಲದೆ ನಮ್ಮದೇ ವಾಹನ ಇದ್ದರೆ ಚಂದ ಎಂದು ಹಲವು ಬಾರಿ ಅನ್ನಿಸಿತ್ತು. ಸಿಗಂದೂರು ದೇವಾಲಯ ಕೊರೋನ ಲಾಕ್ ಡೌನ್ ಕಾಲದಲ್ಲಿ ಆಂಬುಲೆನ್ಸ್ ನೀಡಿದ್ದನ್ನು ಈ ಹಿಂದಿನ ಆಡಳಿತದಲ್ಲೀ ಶ್ರೀ ಸತ್ಯನಾರಾಯಣ ಜಿ. ಟಿ. ತುಮರಿ ರವರು ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿದ್ದಾಗ 60 ದಿನ ಸೇವೆ ನೀಡಿತ್ತು. ಕೊರೋನಾ ಬಿಕ್ಕಟ್ಟಿನಲ್ಲಿ ರಾಜ್ಯದಲ್ಲಿ ಅಂಬುಲೆನ್ಸ್ ಸೇವೆ ನೀಡಿದ ಏಕೈಕ ಪಂಚಾಯತಿ ನಮ್ಮದು ಆಗಿತ್ತು. ಆ ಹೊತ್ತಿನಲ್ಲಿ ಸಾಗರ ಮೊಗವೀರ ಸಂಘದ ಪ್ರಮುಖರು ಮತ್ತು ಒಡನಾಡಿಗಳು ಆದ ಕೃಷ್ಣ ಜಿ (ದೋಣಿ ಕೃಷ್ಣಣ್ಣ ) ಬಳಿ ಆಂಬುಲೆನ್ಸ್ ಅಗತ್ಯ ದ ಇಂಗಿತ ವ್ಯಕ್ತ ಪಡಿಸಿದ್ದೇವು. ಅವರು ತಮ್ಮ ಸಂಘದ ಪದಾದಿಕಾರಿಗಳ ಜತೆ ಚರ್ಚೆ ಮಾಡಿ ಮೊಗವೀರ ಸಂಘ ರಾಜ್ಯ ಅಧ್ಯಕ್ಷರು ಮತ್ತು ಉದ್ಯಮಿಗಳಾದ ಡಾಕ್ಟರ್ ಜಿ. ಶಂಕರ್ ಬಳಿ ಬೇಡಿಕೆ ಇಟ್ಟಿದ್ದರು ಈಚೆಗೆ.
ಆದರೆ ದೀಪದ ಅಗತ್ಯತೆ ಅರ್ಥ ಮಾಡಿಕೊಂಡು ಸಂತ್ರಸ್ತ ಜನರಿಗೆ ಸೇವೆಗೆ ನನ್ನ ಕಡೆಯಿಂದ ಅಂಬುಲೆನ್ಸ್ ನೀಡುವೆ ಎಂದು ಬೇಡಿಕೆ ಒಪ್ಪಿ ತಕ್ಷಣವೇ ತಮ್ಮ ಟ್ರಸ್ಟ ನಿಂದ ಮಂಜೂರು ಮಾಡಿದ್ದಾರೆ. ಈ ಹಿಂದೆ ಸಾಗರ ತಾಲೂಕಿಗೆ ಸೇವೆಗಾಗಿ ಅಂಬುಲೆನ್ಸ್ ನೀಡಿದ್ದರು. ಇಷ್ಟು ಬೇಗ ಇವೆಲ್ಲ ಸಾಧ್ಯ ಆಗುತ್ತದೆ ಎಂದು ನಮಗೆ ನಾವೇ ಭಾವಿಸಿರಲಿಲ್ಲ.
ಆದರೆ,
ಇಂದು dr ಶಂಕರ್ ರವರು ತುಮರಿಗೆ ಸ್ವತಃ ಆಗಮಿಸಿ ಆಂಬುಲೆನ್ಸ್ ನ್ನೂ ಸ್ಥಳೀಯ ಸಮಿತಿಗೆ ಹಸ್ತಾಂತರ ಮಾಡಿದ್ದಾರೆ. ಸಂತ್ರಸ್ತರ ಸೇವೆಗೆ ಕಡಿಮೆ ದರದಲ್ಲಿ ಈ ವಾಹನ ಲಭ್ಯ ಆಗಲಿದೆ.
ಶಂಕರ್ ರವರ ಗಮನ ಸೆಳೆಯಲು ನಮ್ಮ ಜಿ ಕೃಷ್ಣ ರವರು ಇಲ್ಲಿಯವರೇ ಆಗೀ ಈ ನೆಲದ ಕಷ್ಟ ನಷ್ಟ ಅರಿತು, ಬಡ ಜನರ ಬಗ್ಗೆ ಅಪಾರ ಕಾಳಜಿ ಹೊಂದಿ ಸಮಾಜಮುಖಿ ಆಗಿರುವುದು ಮುಖ್ಯ ಕಾರಣ ಎಂಬುದು ಅಷ್ಟೆ ಮುಖ್ಯ. ಅವರ ಜತೆ ಇಡೀ ತಂಡವಾಗಿ ತಾಲುಕು ಮೊಗವೀರ ಸಂಘ ಅಧ್ಯಕ್ಷರು ಪಧಾಧಿಕಾರಿಗಳ ಇಚ್ಚಾ ಶಕ್ತಿ ಕಾರಣ ಇವೆಲ್ಲ ಸಾಧ್ಯ ಆಗಿದೆ.
ಹಿಂದುಳಿದ ಜಾತಿಯಲ್ಲಿ ಬರುವ ಮೊಗವೀರ ಸಮುದಾಯ ಸಂಖ್ಯಾಶಾಸ್ತ್ರದಲ್ಲಿ ಕರಾವಳಿಯಲಿ ಹೆಚ್ಚಿರುವ ಕೂಲಿ ಕಾರ್ಮಿಕರು, ಸಣ್ಣ ಸಮುದಾಯವಾದರೂ ಸಂಘಟನೆಯ ಮತ್ತು ಸಮಾಜಮುಖಿ ಸೇವೆಯಲ್ಲಿ ಮುಂಚುಣಿ ಮತ್ತು ಮಾದರಿ ಆಗಲು ಡಾಕ್ಟರ್ ಶ್ರೀ ಜಿ.ಶಂಕರ್ ರವರ ಮಾರ್ಗದರ್ಶನ,ಬದ್ಧತೆ, ಹಣವನ್ನು ಸಮಾಜ ಒಳಿತಿಗೆ ಬಳಸುವ ದೊಡ್ಡತನ ಕಾರಣ ಆಗಿದೆ. ಜಿ ಶಂಕರ್ ಹೆಲ್ತ್ ಕಾರ್ಡ್ ಬಡವರ ಸಂಜೀವಿನಿ ಆಗಿದೆ.
ಈ ಎಲ್ಲಾ ಕಾರಣ ಡಾಕ್ಟರ್ ಮಾನ್ಯ ಶ್ರೀ ಜಿ. ಶಂಕರ್ ತಾವು ಹುಟ್ಟಿದ ಸಮುದಾಯ ಮತ್ತು ಎಲ್ಲಾ ಶೋಷಿತ ಸಮುದಾಯಗಳ ಬಡವರ ಭರವಸೆ ಆಗಿದ್ದಾರೆ. ಈಗ ದ್ವೀಪದ ಸರದಿ…
ಕೃತಜ್ಞತೆಗಳು..
ನೆಲ ನದಿ ಜನರ ಪರವಾಗಿ
ಒಳಿತಿನ ನಡೆಗೆ ಮಾದರಿಯಾದ ಮೊಗವೀರ ಮುತ್ತು, ಕೊಡುಗೈ ದಾನಿ ಶ್ರೀ ಡಾಕ್ಟರ್ ಜಿ. ರಮೇಶ್.
ಮಾಹಿತಿ ಹಾಗೂ ಛಾಯಾಚಿತ್ರ ಕೃಪೆ :- ಶ್ರೀ ಜಿ. ಟಿ. ಸತ್ಯನಾರಾಯಣ ತುಮರಿ…
ಓಂಕಾರ ಎಸ್. ವಿ. ತಾಳಗುಪ್ಪ….