
ಧರ್ಮಸ್ಥಳ : ಜಾಗೃತಿ ಟ್ರಸ್ಟ್ (ರಿ) ಬೆಂಗಳೂರು
ಇವರು ಧರ್ಮಸ್ಥಳದಲ್ಲಿ ಆಯೋಜಿಸಿದ್ದ
ಸರ್ವ ಧರ್ಮ ರಾಜ್ಯ ಮಟ್ಟದ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಪುಸ್ತಕ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಬಳ್ಳಾರಿ ಜಿಲ್ಲೆಯ ಸಮಾಜ ಸೇವಕರಾದ ಮಲ್ಲಿಕಾರ್ಜುನ ಕುಡ್ಲೆ ಹಾಗೂ ಶಿವಮೊಗ್ಗ ಜಿಲ್ಲೆಯ ರಘುರಾಜ್ ಹೆಚ್. ಕೆ ಪತ್ರಕರ್ತರು ಹಾಗೂ ನ್ಯೂಸ್ ವಾರಿಯರ್ಸ್ ಸಂಪಾದಕರು ಶೇಖರ್ ಅಜೇಕಾರ ಕನ್ನಡ ಪರ ಹೂರಾಟಗಾರರು ಉಡುಪಿ ವಿಜಯಲಕ್ಷ್ಮಿ ಬಾಗಲಕೋಟೆ ಶ್ರೀನಿವಾಸ ಸಮಾಜ ಸೇವಕರು ಪ್ರಕಾಶ ಪತ್ರಕರ್ತರು ಶಿವಮೂರ್ತಿ ಕರ್ನಾಟಕ ಲ್ಯಾಬ್ ಟೆಕ್ನಿಸಿಯನ ಅಧ್ಯಕ್ಷರು ಮೋಹನ್ ಕುಮಾರ್ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಂಜುಳಾ ಪಾವಗಡ ಅವರ ಭಾವನೆಯ ಅಲೆಗಳು ಕೃತಿಯನ್ನು ಪ್ರಕಾಶಕರಾದ ಜಾಗೃತಿ ಟ್ರಸ್ಟ್ ಹೊರತಂದಿದೆ.
ಜಾಗೃತಿ ಟ್ರಸ್ಟ್ ಸಂಸ್ಥೆಯನ್ನು ಇಂತಹ ಒಳ್ಳೆಯ ಕಾರ್ಯಕ್ಕೆ ಹುಟ್ಟು ಹಾಕಿದ್ದು ಸಮಾಜ ಸೇವೆ ಮಾಡುತ್ತಾ ಇಂತಹ ಪುಣ್ಯ ಕ್ಷೇತ್ರಗಳಲ್ಲಿ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುತಿದ್ದು, ಕವಿಗೊಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಶಾ ಶಿವು ಸಾಹಿತಿ, ಸಿ.ಜಿ.ಹಳ್ಳಿ ಮೂರ್ತಿ, ಡಾಕ್ಟರ್ ವಿಜಯಲಕ್ಷ್ಮಿ ಸ್ಪಂದನ ಮಹಿಳಾ ಪರ ವೇದಿಕೆ ಭಾಗವಹಿಸಿದ್ದರು. ಜಾಗೃತಿ ಟ್ರಸ್ಟ್ ಸಂಸ್ಥಾಪಕ ಅದ್ಯಕ್ಷರು ಬಿ. ನಾಗೇಶ್ ಹಾಗೂ ಜಾಗೃತಿ ಟ್ರಸ್ಟ್ ಸಂಘಟಕರ ಈ ಕಾರ್ಯ ಶ್ಲಾಘನೀಯವಾಗಿದೆ..
ಧರ್ಮಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗಿಯಾದವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಬಿ ನಾಗೇಶ್ ರವರ ಹುಟ್ಟುಹಬ್ಬದಂದು ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥನ ದರ್ಶನ ಪಡೆದು ಹುಟ್ಟು ಹಬ್ಬವನ್ನು ಕನ್ನಡ ಸಾಹಿತ್ಯಕ್ತರೊಂದಿಗೆ ಆಚರಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಕನಸುಗಳು ಯೋಜನೆಗಳು ಯಶಸ್ವಿಯಾಗಿ ಅಭಿವೃದ್ಧಿಯಾಗಲಿ. ಜಾಗೃತಿ ಟ್ರಸ್ಟ್ ಯಿಂದ ಇಂತಹ ನೂರಾರು ಸಾವಿರಾರು ಕಾರ್ಯಕ್ರಮಗಳು ನಡೆಯಲಿ. ಧರ್ಮಸ್ಥಳದಲ್ಲಿ ಸರ್ವ ಧರ್ಮ ರಾಜ್ಯ ಮಟ್ಟದ ಕವಿಗೋಷ್ಠಿ. ಪುಸ್ತಕ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದಲ್ಲದೆ.ಧಾರ್ಮಿಕ ಐತಿಹಾಸಿಕ ಕ್ಷೇತ್ರಗಳಾದ ಹೊರನಾಡು, ಪ್ರವಾಸದ ಜೊತೆಗೆ ದೇವರ ದರ್ಶನ ಮಾಡುವ ಭಾಗ್ಯ ಎಲ್ಲಾ ಸಾಹಿತ್ಯಾಸಕ್ತರಿಗೆ ಒದಗಿಸಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರ ದೇವಾಲಯದ ಧರ್ಮಾಧಿಕಾರಿಗಳಾದ
ಭಿಮೇಶ್ವರ ಜೋಶಿಯರವರಿಗೆ ಸನ್ಮಾನಿಸಿ ಆಶೀರ್ವಾದ ಪಡೆದರು.
ರಘುರಾಜ್ ಹೆಚ್.ಕೆ…9449553305….