
ಕರ್ನಾಟಕದಲ್ಲಿ ಚುನಾವಣಾ ಹಬ್ಬ ಶುರುವಾಗಿದೆ ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿವೆ ಆದರೆ ಆಡಳಿತ ಪಕ್ಷ ಬಿಜೆಪಿ ಮಾತ್ರ ಇನ್ನು ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ ಹೀಗಾಗಿ ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷಗಳು ಟೀಕಾ ಪ್ರಹಾರವನ್ನು ನಡೆಸುತ್ತಿವೆ.
ಆದರೆ ಈ ಎಲ್ಲಾ ಟೀಕೆಗಳ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭಾನುವಾರ ಅಥವಾ ಸೋಮವಾರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಅಧ್ಯಕ್ಷರಾದ ಜೆಪಿ ನಡ್ಡಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಬಿಎಲ್ ಸಂತೋಷ್ , ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಿ,ಟಿ ರವಿ ಪ್ರಹ್ಲಾದ್ ಜೋಶಿ, ಸದಾನಂದ ಗೌಡ, ಹಾಗೂ ಇನ್ನಿತರ ಪ್ರಮುಖ ರಾಜ್ಯ ನಾಯಕರೊಂದಿಗೆ ಸಂಭಾವ್ಯ ಹೆಸರುಗಳ ಕುರಿತು ನಿನ್ನೆ ಚರ್ಚೆ ನಡೆಸಲಾಗಿದ್ದು. ಬಿಜೆಪಿಯ ಸಂಸದೀಯ ಮಂಡಳಿಯು ಕರ್ನಾಟಕದ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪ್ರಮುಖ ನಾಯಕರೊಂದಿಗೆ ಮಾತುಕತೆ ನಡೆಸಿ ಒಂದು ಅಂತಿಮ ತೀರ್ಮಾನಕ್ಕೆ ಇಂದು ಬರಬಹುದು ಎನ್ನಲಾಗುತ್ತಿದೆ.
ಸಂಸದೀಯ ಮಂಡಳಿಯ ಸಭೆಯ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಎಲ್ಲಾ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚಿಸುತ್ತೇವೆ. ಜಿಲ್ಲೆ ಮತ್ತು ಕ್ಷೇತ್ರವಾರು ವಿವರಗಳು ಮತ್ತು ಇತ್ತೀಚಿನ ಸಮೀಕ್ಷೆಯ ಫಲಿತಾಂಶಗಳು ನಮ್ಮ ಬಳಿ ಇವೆ, ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ರಾಷ್ಟ್ರೀಯ ನಾಯಕರೊಂದಿಗೆ ವಿವರವಾದ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದ್ದರು.
ಕರ್ನಾಟಕಕ್ಕೆ ಮೋದಿ ಆಗಮನ :
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜ್ಯಕ್ಕೆ ಭೇಟಿ ನೀಡಿದ್ದು. ಇದೇ ಮೊದಲ ಬಾರಿಗೆ ಪ್ರಧಾನಿ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ವನ್ಯಜೀವಿ ಸಫಾರಿ ನಡೆಸಿ ಗಮನ ಸೆಳೆದಿದ್ದಾರೆ. ಇಂದು ಸಂಜೆ ದೆಹಲಿಗೆ ವಾಪಸಾಗಲಿದ್ದಾರೆ.
ಪ್ರಧಾನಿ ಮೋದಿ ದೆಲ್ಲಿಗೆ ವಾಪಸಾದ ನಂತರ ಭಾನುವಾರ ರಾತ್ರಿ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸಭೆ ನಡೆದು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂದೇ ರಾತ್ರಿ ಅಥವಾ ಸೋಮವಾರ ಪಟ್ಟಿ ಪ್ರಕಟಗೊಳಿಸುವ ಸಂಭವವಿದೆ.
ಸಂಸದೀಯ ಮಂಡಳಿಯ ಸಭೆಯಲ್ಲಿ ಚರ್ಚೆಯಾದ ಹಾಗೂ ಚರ್ಚೆಯಾಗುವ ವಿಷಯಗಳು:
ಸಭೆಯಲ್ಲಿ 75 ವರ್ಷ ವಯಸ್ಸಾದವರಿಗೆ ಟಿಕೆಟ್ ನೀಡಬೇಕೆ ಅಥವಾ ಬೇಡವೆ?! ಮೂರು ಅಥವಾ ಅದಕ್ಕೂ ಹೆಚ್ಚು ಬಾರಿ ಶಾಸಕರಾದವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡಬೇಕೆ ಅಥವಾ ಬೇಡವೆ..?! ಗುಜರಾತ್ ,ಉತ್ತರಪ್ರದೇಶ ಮಾದರಿ ಟಿಕೆಟ್ ಹಂಚಿಕೆ ಮಾಡುವ ಕುರಿತು ಯುವ ನಾಯಕರಿಗೆ ಆದ್ಯತೆ ನೀಡುವ ಕುರಿತು ಹಾಗೆ ಇತ್ತೀಚಿನ ಕೆಲವು ಸಮೀಕ್ಷೆಗಳ ಪ್ರಕಾರ ಆಂತರಿಕ ಸಮೀಕ್ಷೆಗಳ ಪ್ರಕಾರ ಗೆಲ್ಲುವ ಅಭ್ಯರ್ಥಿಗಳಿಗೆ ಮೊದಲ ಪ್ರಾತಿನಿಧ್ಯ ನೀಡುವ ಕುರಿತು ಗೊಂದಲ ಇರುವ ಕ್ಷೇತ್ರಗಳಲ್ಲಿ ಎರಡು ಮೂರು ಜನ ಅಭ್ಯರ್ಥಿಗಳ ಇರುವ ಪಟ್ಟಿಯಲ್ಲಿ ಪರಿಷ್ಕರಣೆ ಮಾಡುವ ಕುರಿತು ಹೀಗೆ ಹಲವು ವಿಷಯಗಳನ್ನು ಚರ್ಚೆ ನಡೆಸುವ ಸಾಧ್ಯತೆಯಿದೆ.
ಸಂಸದೀಯ ಮಂಡಳಿಯಲ್ಲಿ ಬಿ,ಎಲ್ ಸಂತೋಷ್ ಮತ್ತು ಬಿ ಎಸ್ ಯಡಿಯೂರಪ್ಪ :
ಬಿಜೆಪಿಯ ಸಂಸದೀಯ ಮಂಡಳಿಯಲ್ಲಿ ಬಿ,ಎಲ್ ಸಂತೋಷ್ ಮತ್ತು ಬಿ,ಎಸ್ ಯಡಿಯೂರಪ್ಪ ಇರುವುದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ ಇಬ್ಬರು ನಾಯಕರು ಆರ್ ಎಸ್ ಎಸ್ ಮೂಲದವರು ಹಾಗೂ ಕರ್ನಾಟಕದ ಪ್ರಬಲ ನಾಯಕರು ಇಬ್ಬರಿಗೂ ತಮ್ಮದೇ ಆದ ವೈಯಕ್ತಿಕ ಅಭ್ಯರ್ಥಿಗಳ ಪಟ್ಟಿ ಇದೆ ಅವರನ್ನೇ ನಿಲ್ಲಿಸಬೇಕು ಎನ್ನುವ ಹಠವು ಇದೆ .
ಈ ದೃಷ್ಟಿಯಲ್ಲಿ ನೋಡುವುದಾದರೆ ಯಾರಿಗೆ ಹೆಚ್ಚು ಪ್ರಾತಿನಿಧ್ಯ ಸಿಗುತ್ತದೆ ಎನ್ನುವ ಕುತೂಹಲ ಕೂಡ ಎಲ್ಲರಲ್ಲೂ ಮನೆ ಮಾಡಿದೆ… ಒಟ್ಟಿನಲ್ಲಿ ಎಲ್ಲ ಕುತೂಹಲಕ್ಕೂ ಇಂದು ಅಥವಾ ನಾಳೆ ತೆರೆ ಬೀಳಲಿದೆ…
ಬಿಜೆಪಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಇಂತಿದೆ :
ಚನ್ನಗಿರಿ : ಮಾಡಲ್ ಕುಟುಂಬ
ಹರಿಹರ: ಬಿಪಿ ಹರೀಶ್
ರಾಣೆಬೆನ್ನೂರು: ಅರುಣ್ ಕುಮಾರ್ ಪೂಜಾರ್ ಅಥವಾ ಶಂಕರ್.
ನಿಪ್ಪಾಣಿ: ಶಶಿಕಲಾ ಜೊಲ್ಲೆ
ಕುಡಚಿ (SC): ಪಿ.ರಾಜೀವ್
ರಾಯಬಾಗ (SC): ದುರ್ಯೋಧನ ಮಹಾಲಿಂಗಪ್ಪ ಐಹೊಳೆ
ಅರಭಾವಿ: ಬಾಲಚಂದ್ರ ಜಾರಕಿಹೊಳಿ
ಮುದ್ದೇಬಿಹಾಳ: ಎ.ಎಸ್ ಪಾಟೀಲ್ ನಡಹಳ್ಳಿ
ದೇವರ ಹಿಪ್ಪರಗಿ: ಸೋಮನಗೌಡ ಬಿ ಪಾಟೀಲ್ ಸಾಸನೂರ
ಬಿಜಾಪುರ ನಗರ: ಬಸನಗೌಡ ಪಾಟೀಲ್ ಯತ್ನಾಳ್
ಸಿಂದಗಿ: ರಮೇಶ ಭೂಸನೂರು
ಗೋಕಾಕ್: ರಮೇಶ್ ಜಾರಕಿಹೊಳಿ
ಬೆಳಗಾವಿ ಉತ್ತರ : ಅನಿಲ್ ಎಸ್ ಬೆನಕೆ
ಬೆಳಗಾವಿ ದಕ್ಷಿಣ : ಅಭಯ ಪಾಟೀಲ
ಔರಾದ್ (SC) : ಪ್ರಭು ಚೌಹಾಣ್
ರಾಯಚೂರು: ಡಾ.ಶಿವರಾಜ್ ಪಾಟೀಲ್
ದೇವದುರ್ಗ (ಎಸ್‌ಟಿ): ಶಿವನಗೌಡ ನಾಯಕ್
ಗಂಗಾವತಿ: ಪರಣ್ಣ ಮುನವಳ್ಳಿ
ಯಲಬುರ್ಗಾ: ಹಾಲಪ್ಪ ಆಚಾರ್
ಶಿರಹಟ್ಟಿ (SC): ರಾಮಪ್ಪ ಲಮಾಣಿ
ಕಿತ್ತೂರು: ಮಹಾಂತೇಶ್ ದೊಡ್ಡಗೌಡರ್
ರಾಮದುರ್ಗ: ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ
ಮುಧೋಳ (SC): ಗೋವಿಂದ ಎಂ. ಕಾರಜೋಳ
ತೇರದಾಳ: ಸಿದ್ದು ಸವದಿ
ಬಿಳಗಿ : ಮುರುಗೇಶ್ ನಿರಾಣಿ
ಬಾಗಲಕೋಟೆ : ವೀರಣ್ಣ ಚರಂತಿಮಠ
ಹುನಗುಂದ: ದೊಡ್ಡನಗೌಡ ಪಾಟೀಲ
ಸುರಪುರ (ST): ರಾಜುಗೌಡ
ಯಾದಗಿರಿ: ವೆಂಕಟರೆಡ್ಡಿ ಮುದ್ನಾಳ್
ಸಿರ್ಸಿ : ವಿಶ್ವೇಶ್ವರ ಹೆಗಡೆ ಕಾಗೇರಿ
ಶಿಗ್ಗಾಂವ್ : ಬಸವರಾಜ ಬೊಮ್ಮಾಯಿ
ಬ್ಯಾಡಗಿ : ವಿರೂಪಾಕ್ಷಪ್ಪ
ಬಳ್ಳಾರಿ ಹಿರೇಕೆರೂರು : ಬಿ.ಸಿ ಪಾಟೀಲ್ –
ವಿಜಯನಗರ : ಆನಂದ್ ಸಿಂಗ್
ಸಿರುಗುಪ್ಪ (ಎಸ್‌ಟಿ) : ಎಂ.ಎಸ್.ಸೋಮಲಿಂಗಪ್ಪ
ಬಳ್ಳಾರಿ ನಗರ : ಜಿ.ಸೋಮಶೇಖರ ರೆಡ್ಡಿ
ಚಿತ್ರದುರ್ಗ : ಜಿ.ಎಚ್.ತಿಪ್ಪಾರೆಡ್ಡಿ
ಹೊಸದುರ್ಗ: ಗೂಳಿಹಟ್ಟಿ ಡಿ.ಶೇಖರ್
ಜಗಳೂರು (ಎಸ್‌ಟಿ) : ಎಸ್ ವಿ ರಾಮಚಂದ್ರ
ಸೇಡಂ: ರಾಜಕುಮಾರ್ ಪಾಟೀಲ್
ಗುಲ್ಬರ್ಗ ಗ್ರಾಮಾಂತರ (SC): ಬಸವರಾಜ ಮತ್ತಿಮೂಡ್
ಗುಲ್ಬರ್ಗ ದಕ್ಷಿಣ: ದತ್ತಾತ್ರೇಯ ಸಿ.ಪಾಟೀಲ
ಆಳಂದ: ಸುಭಾಷ್ ಗುತ್ತೇದಾರ್
ರೋಣ: ಕಳಕಪ್ಪ ಬಂಡಿ
ನರಗುಂದ: ಸಿಸಿ ಪಾಟೀಲ್
ನವಲಗುಂದ: ಶಂಕರ ಪಾಟೀಲ ಮುನೇನಕೊಪ್ಪ
ಧಾರವಾಡ: ಅಮೃತ್ ದೇಸಾಯಿ
ಹುಬ್ಬಳ್ಳಿ-ಧಾರವಾಡ ಕೇಂದ್ರ: ಜಗದೀಶ್ ಶೆಟ್ಟರ್
ಹುಬ್ಬಳ್ಳಿ-ಧಾರವಾಡ ಪಶ್ಚಿಮ: ಅರವಿಂದ ಬೆಲ್ಲದ್
ಕಲಘಟಗಿ : ಸಿಎಂ ನಿಂಬಣ್ಣನವರ್
ಕಾರವಾರ : ರೂಪಾಲಿ ನಾಯ್ಕ್
ಕುಮಟಾ: ದಿನಕರ ಶೆಟ್ಟಿ
ಭಟ್ಕಳ : ಸುನೀಲ್ ನಾಯ್ಕ ಸಿ
ಹೊನ್ನಾಳಿ : ಎಂ.ಪಿ.ರೇಣುಕಾಚಾರ್ಯ
ಹಾಸನ : ಪ್ರೀತಂ ಜೆ.ಗೌಡ
ಬೆಳ್ತಂಗಡಿ : ಹರೀಶ್ ಪೂಂಜಾ
ಮಂಗಳೂರು ನಗರ ಉತ್ತರ : ಭರತ್ ಶೆಟ್ಟಿ
ಮಂಗಳೂರು ನಗರ ದಕ್ಷಿಣ : ಡಿ.ವೇದವ್ಯಾಸ್ ಕಾಮತ್
ಬಂಟ್ವಾಳ :ರಾಜೇಶ್ ನಾಯ್ಕ್
ಮಡಿಕೇರಿ : ಅಪ್ಪಚ್ಚು ರಂಜನ್
ವಿರಾಜಪೇಟೆ : ಕೆ ಜಿ ಬೋಪಯ್ಯ
ನಂಜನಗೂಡು (ಎಸ್‌ಸಿ) :ಹರ್ಷವರ್ಧನ್ ಬಿ.
ಕೃಷ್ಣರಾಜ :ಎಸ್.ಎ.ರಾಮದಾಸ್
ಶಿವಮೊಗ್ಗ ನಗರ : ಕೆ ಎಸ್ ಈಶ್ವರಪ್ಪ ಅಥವಾ ಕೆಇ ಕಾಂತೇಶ್ ಒಂದು ವೇಳೆ ಹೈಕಮಾಂಡ್ ಮನವೂಲಿಸಿ ಈಶ್ವರಪ್ಪ ಒಪ್ಪಿದರೆ ಹರಿಕೃಷ್ಣ ,ಎಸ್ ದತ್ತಾತ್ರಿ, ಜ್ಯೋತಿ ಪ್ರಕಾಶ್ ರಲ್ಲಿ ಒಬ್ಬರು…
ಶಿವಮೊಗ್ಗ ಗ್ರಾಮಾಂತರ (SC) : ಕೆ ಬಿ ಅಶೋಕ್ ನಾಯ್ಕ್
ತೀರ್ಥಹಳ್ಳಿ : ಆರಗ ಜ್ಞಾನೇಂದ್ರ
ಶಿಕಾರಿಪುರ : ಬಿ.ವೈ.ವಿಜಯೇಂದ್ರ
ಸೊರಬ : ಕುಮಾರ್ ಬಂಗಾರಪ್ಪ
ಸಾಗರ : ಹರತಾಳ್ ಹಾಲಪ್ಪ ,
ಭದ್ರಾವತಿ : ತೀರ್ಥಪ್ಪ
ಕಾರ್ಕಳ : ವಿ.ಸುನೀಲ್ ಕುಮಾರ್
ತರೀಕೆರೆ : ಡಿ.ಎಸ್ ಸುರೇಶ್
ಕಡೂರು : ಬೆಳ್ಳಿಪ್ರಕಾಶ್
ನಂಜನಗೂಡು (ಎಸ್‌ಸಿ) :ಹರ್ಷವರ್ಧನ್ ಬಿ.
ಕೃಷ್ಣರಾಜ :ಎಸ್.ಎ.ರಾಮದಾಸ್
ಮಹಾಲಕ್ಷ್ಮಿ ಲೇಔಟ್ : ಕೆ.ಗೋಪಾಲಯ್ಯ
ಮಲ್ಲೇಶ್ವರಂ : ಡಾ.ಸಿ.ಎನ್.ಅಶ್ವಥ್ ನಾರಾಯಣ
ಸಿವಿ ರಾಮನ್ ನಗರ (SC) : ಎಸ್.ರಘು
ರಾಜಾಜಿ ನಗರ : ಎಸ್.ಸುರೇಶ್ ಕುಮಾರ್
ಬಸವನಗುಡಿ : ರವಿ ಸುಬ್ರಹ್ಮಣ್ಯ
ಪದ್ಮನಾಭನಗರ : ಆರ್.ಅಶೋಕ
ಮಹದೇವಪುರ (SC) : ಅರವಿಂದ ಲಿಂಬಾವಳಿ
ಬೊಮ್ಮನಹಳ್ಳಿ : ಎಂ ಸತೀಶ್ ರೆಡ್ಡಿ
ಬೆಂಗಳೂರು ದಕ್ಷಿಣ: ಎಂ.ಕೃಷ್ಣಪ್ಪ
ಕೆ.ಆರ್ ಪೇಟೆ: ನಾರಾಯಣ ಗೌಡ
ಇದು ಬಿಜೆಪಿಯ ಮೊದಲ ಹಂತದ ಪಟ್ಟಿ ಎನ್ನಲಾಗುತ್ತಿದ್ದು ಇದೆ ಅಂತಿಮವೇನಲ್ಲ ರಾಜಕೀಯ ಚದುರಂಗದಾಟದಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು ಯಾರು ಬೇಕಾದರೂ ಹಿಂದೆ ಸರಿಬಹುದು ಕಾದು ನೋಡಬೇಕು ಅಷ್ಟೇ…

ರಘುರಾಜ್ ಹೆಚ್.ಕೆ…9449553305…