Tuesday, May 6, 2025
Google search engine
Homeರಾಜ್ಯಆಸ್ತಿ ತೆರಿಗೆ ಪಾವತಿಗೆ ಕೌಂಟರ್ ಪ್ರಾರಂಭ-ಶೇ.5 ರಿಯಾಯಿತಿ ಸೌಲಭ್ಯ ..! ಆಸ್ತಿ ತೆರಿಗೆ ಪಾವತಿಸಿ...

ಆಸ್ತಿ ತೆರಿಗೆ ಪಾವತಿಗೆ ಕೌಂಟರ್ ಪ್ರಾರಂಭ-ಶೇ.5 ರಿಯಾಯಿತಿ ಸೌಲಭ್ಯ ..! ಆಸ್ತಿ ತೆರಿಗೆ ಪಾವತಿಸಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ..!!


ಶಿವಮೊಗ್ಗ : ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಅನುಕೂಲವಾಗುವಂತೆ ಪಾಲಿಕೆ ಕಚೇರಿಯ ಆವರಣದಲ್ಲಿ ಅಗತ್ಯ ಕೌಂಟರ್‍ಗಳನ್ನು ಪ್ರಾರಂಭ ಮಾಡಲಾಗಿದ್ದು, ಸಾರ್ವಜನಿಕರು ನೇರವಾಗಿ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿಸಲು ಅವಕಾಶವಿರುತ್ತದೆ.
ಅಲ್ಲದೇ ಈಗಾಗಲೇ ಜಾರಿಯಲ್ಲಿರುವಂತೆ ಆಸ್ತಿ ತೆರಿಗೆ ಪಾವತಿಯನ್ನು ಮಹಾನಗರಪಾಲಿಕೆಯ ವೆಬ್‍ಸೈಟ್ ವಿಳಾಸ www.shivamoggacitycorp.org ಮುಖಾಂತರ ಆನ್‍ಲೈನ್‍ನಲ್ಲಿ ಹಾಗೂ ಯುಪಿಐ ಮೊಬೈಲ್ ಆ್ಯಪ್‍ಗಳಾದ ಪೇಟಿಎಂ/ಫೋನ್ ಪೇ/ಗೂಗಲ್ ಪೇ/ಇತರೆ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡಬಹುದಾಗಿರುತ್ತದೆ.


ಸರ್ಕಾರದ ಸುತ್ತೋಲೆಯನ್ವಯ 2023-24 ನೇ ಸಾಲಿಗೆ ಅನ್ವಯಿಸುವ ಆಸ್ತಿ ತೆರಿಗೆ ಮೇಲಿನ ಶೇ.5 ರ ತೆರಿಗೆ ರಿಯಾಯಿತಿ ಸೌಲಭ್ಯದ ಕಾಲಾವಧಿಯನ್ನು ಜೂನ್-30ರವರೆಗೆ ಅಲ್ಲದೇ ದಿನಾಂಕ:01-07-2023 ರಿಂದ ಅನ್ವಯಿಸುವಂತೆ ವಿಳಂಬದ ಅವಧಿಗೆ ಮಾಸಿಕ ಶೇ.2 ರಷ್ಟು ದಂಡ ವಿಧಿಸಲಾಗುವುದು.
ಆದ್ದರಿಂದ ಸಾರ್ವಜನಿಕರು ಜೂನ್-30 ರವರೆಗೆ ಶೇ.5 ರ ತೆರಿಗೆ ರಿಯಾಯಿತಿ ಸೌಲಭ್ಯವನ್ನು ಉಪಯೋಗಿಸಿಕೊಂಡು ಪಾವತಿಸಬಹುದು.

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕಚೇರಿಯ ರಾಜಸ್ವ ನಿರೀಕ್ಷಕರು ಹಾಗೂ ಕರ ವಸೂಲಿಗಾರರು ಕಚೇರಿಯಿಂದ ಅನುಮೋದಿತವಾಗಿರುವ ಇಡಿಸಿ(ಪಿಓಎಸ್) ಯಂತ್ರಗಳ ಮೂಲಕ ನೇರವಾಗಿ ಆಸ್ತಿ ಮಾಲೀಕರ ಸ್ವತ್ತಿನ ಸ್ಥಳದಲ್ಲಿ ಪಾವತಿಸಿಕೊಂಡು ರಸೀದಿಯನ್ನು ನೀಡುವ ಸೌಲಭ್ಯ ಸಹ ಕಲ್ಪಿಸಲಾಗಿದ್ದು, ಏಪ್ರಿಲ್-2023ರ ಅವಧಿಯಲ್ಲಿ ತೆರಿಗೆ ಪಾವತಿಸಿ ಸಾರ್ವಜನಿಕರು ಶೇ. 5%ರ ತೆರಿಗೆ ರಿಯಾಯಿತಿ ಸೌಲಭ್ಯವನ್ನು ಪಡೆಯಲು ಹಾಗೂ ಆಸ್ತಿ ತೆರಿಗೆ ಪಾವತಿಸಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

.

ರಘುರಾಜ್ ಹೆಚ್.ಕೆ…9449553305…

RELATED ARTICLES
- Advertisment -
Google search engine

Most Popular

Recent Comments

Latest news
ಕೆಲಕಾಲ ಕಾರ್ಯದ ಒತ್ತಡದಿಂದ ಮುಕ್ತರಾಗಿ ಸಂತಸದ ದಿನ ಕಳೆಯಲು ಸೂಕ್ತ ವಾತಾವರಣ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆ ಜ... Shivamogga breaking:ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು..! Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ...