
ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಮೋದಿ ಎನ್ನುವ ಹೆಸರು ಇಟ್ಟುಕೊಂಡವರೇಲ್ಲ ವಂಚಕರು ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ವಿರುದ್ಧ ಮೋದಿ ಎನ್ನುವ ಹೆಸರಿರುವ ವ್ಯಕ್ತಿ ಮೊಕದ್ದಮೆ ದಾಖಲಿಸಿದ್ದರು.
ಗುಜರಾತ್ ಕೋರ್ಟ್ ರಾಹುಲ್ ಗಾಂಧಿಯ ಸಂಸದ ಸ್ಥಾನ ವಜಾ ಮಾಡಿ ತೀರ್ಪು ನೀಡಿತ್ತು. ಆದರೆ ಮೇಲ್ಮನವಿಗಾಗಿ ಅವಕಾಶ ನೀಡಲಾಗಿತ್ತು.
ಈಗ ಮೇಲ್ಮನೆಯ ತೀರ್ಪು ಹೊರ ಬಿದ್ದಿದ್ದು ಮತ್ತೆ ರಾಹುಲ್ ಗಾಂಧಿ ಸಂಸದರಾಗಿ ಮುಂದುವರೆಯಲಿದ್ದಾರೆ ಎನ್ನುವ ತೀರ್ಪನ್ನು ಘನ ನ್ಯಾಯಾಲಯ ನೀಡಿದೆ ಎಂದು ಶಿವಮೊಗ್ಗದ ವಕೀಲರು ಕಾಂಗ್ರೆಸ್ ಮುಖಂಡರು ಆದ ಚಂದ್ರಕಾಂತ್ ಅವರು ನ್ಯೂಸ್ ವಾರಿಯರ್ಸ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಒಂದು ವೇಳೆ ಈ ಮಾಹಿತಿ ನಿಜವಾಗಿದ್ದರೆ…
ಕರ್ನಾಟಕದ ಚುನಾವಣೆಯ ಸಮಯದಲ್ಲಿ ರಾಹುಲ್ ಗಾಂಧಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಟಾನಿಕ್ ನೀಡಿದ ಹಾಗಿದೆ…

ರಘುರಾಜ್ ಹೆಚ್.ಕೆ…9449553305…