
ಶಿವಮೊಗ್ಗ: ರಾಜ್ಯ ಎನ್‌ಪಿಎಸ್ NPS ನೌಕರರ ಸಂಘದ ಶಿವಮೊಗ್ಗ ಜಿಲ್ಲೆಯ ತಾಲೂಕು ಅಧ್ಯಕ್ಷ ಹೊನ್ನಾಳಿಯ ದಲಿತ ಸಮುದಾಯದ ಪ್ರಭಾಕರ್ ತನಗೆ ಆದ ನೋವುಗಳು,ಆ ಆ ನೋವುಗಳನ್ನು ನೀಡಿದವರು ತನ್ನ ಕುಟುಂಬಕ್ಕೆ ಆದ ಹಿಂಸೆಯಿಂದ ಬೇಸತ್ತು ಹಲವು ವ್ಯಕ್ತಿಗಳ ಹೆಸರು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಬದುಕಿಗೆ ವಿದಾಯ ಹೇಳುವುದಾಗಿ ತನ್ನ ನೋವನ್ನು ಹಂಚಿಕೊಂಡಿದ್ದಾರೆ..
ಅದರ ಇವರ ಈ ಕೆಳಗಿನಂತಿದೆ,
ರಾಜ್ಯದ ಸಮಸ್ತ NPS ನೌಕರ ಸಂಘದ ಪದಾಧಿಕಾರಿ ಮಿತ್ರರೇ ನಾನು ಕಳೆದ ಹತ್ತು ವರ್ಷಗಳಿಂದ NPS ನೌಕರ ಸಂಘವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ್ದೇನೆ .ರಾಜ್ಯ ಸಂಘದ ನಿರ್ಧೇಶನದಂತೆ ಅನೇಕ ಕಾರ್ಯಕ್ರಮಗಳನ್ನು ಶಿವಮೊಗ್ಗ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಸಂಘಟನೆ ಮಾಡಿದ್ದೇನೆ ಇತ್ತೀಚೆಗೆ ಜನವರಿ 22-2023 ರಂದು ಶಿವಮೊಗ್ಗ ಜಿಲ್ಲಾ ಮಟ್ಟದ NPS ನೌಕರರ ಸಮಾವೇಶ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದರ ಫಲವಾಗಿ ನನ್ನ ವೃತ್ತಿಬದುಕಿಗೆ ರಾಜ್ಯದ ನೌಕರ ಸಂಘದ ಅಧ್ಯಕ್ಷರಾದ ಷಡಾಕ್ಷರಿ, ಅವರ ಸಹಚರರಾದ ಮೋಹನ್ ಕುಮಾರ ಆರ್,ಬಸವನಗೌಡ , ಹಾಗೂ ಹಿಂದಿನ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಮತ್ತು ಅವರ ಆಪ್ತ ಕಾರ್ಯದರ್ಶಿಗಳಾಗಿದ್ದ ಎ ಆರ್ ರವಿ ಅವರ ವ್ಯವಸ್ಥಿತ ಪಿತೂರಿಯಿಂದಾಗ ಹಿಂಬಡ್ತಿ ಮಾಡಿ ನಿಯಮಗಳಲ್ಲಿ ವೇತನ ಸಂರಕ್ಷಣೆಗೆ ಅವಕಾಶವಿದ್ದರೂ ಹಿಂಬಡ್ತಿ ಆದೇಶದಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಶ್ರೀ ಮಹಂತಯ್ಯ ಹೊಸಮಠ ಅವರು ಹಿಂಬಡ್ತಿ ಮಾಡಿದ್ದಲ್ಲದೆ, ಹೆಚ್ಚುವರಿ ವೇತನ ಕಟಾಯಿಸುವಂತೆ ಆದೇಶ ಮಾಡಿದ್ದರ ಪ್ರತಿಫಲವಾಗಿ ಹೊನ್ನಾಳಿ BEO ರವರಾದ ನಂಜರಾಜ ಅವರು ಸರಿಯಾದ ಸಮಯಕ್ಕೆ ಅಂತಿಮ ವೇತನ ಪ್ರಮಾಣ ಪತ್ರ, ಸೇವಾವಹಿಯನ್ನು ಕಳುಹಿಸದೆ ಕಳೆದ 6 ತಿಂಗಳಿಂದ ವೇತನ ಆಗದೆ ನರಕಯಾತನೆ ಅನುಭವಿಸಿದ್ದೇನೆ ಮತ್ತು ನನ್ನ ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ ನನ್ನ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ 6 ತಿಂಗಳಕಾಲ ಕಳೆದಾಯಿತು ಆದರೂ ಯಾವುದೇ ಪರಿಹಾರ ಸಿಗದೆ ಪ್ರಯತ್ನಗಳೆಲ್ಲ ವಿಫಲವಾಗಿದ್ದು ಅತ್ಯಂತ ನೋವಿನ ಸಂಗತಿ ..ಈ ಘಟನೆಗೆ ಕಾರಣರಾದವರು ಚೆನ್ನಾಗಿರಲಿ……ನಾನು ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಾನಸಿಕವಾಗಿ ವಿಫಲನಾಗಿರುವ ಪ್ರಯುಕ್ತ ನಾನು ಬದುಕಿಗೆ ವಿಧಾಯ ಹೇಳಲು ಬಯಸಿದ್ದೇನೆ….. ನನ್ನ ನಿರ್ಧಾರಕ್ಕೆ ಮೇಲ್ಕಾಣಿಸಿದ ವ್ಯಕ್ತಿಗಳೇ ನೇರ ಕಾರಣರಾಗಿರುತ್ತಾರೆ ………..ನನ್ನ ಈ ನನ್ನ ಕುಟುಂಬದ ಹೊಣೆಗಾರಿಕೆ ಇಡೀ NPS ನೌಕರ ಸಂಘಟನೆಯದ್ದು ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಸಹಕಾರ ಮಾಡಿ……
ಇಂತಿ ನಿಮ್ಮ ನತದೃಷ್ಟ NPS ನೌಕರ ಪ್ರಭಾಕರ ಎಸ್…………
ಈ ವಿಷಯದ ಬಗ್ಗೆ ಮಾತನಾಡಿರುವ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷರಾದ ಶಾಂತರಾಮ ಅವರು ಪ್ರಭಾಕರ್ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದು ಶಿವಮೊಗ್ಗ ತಾಲೂಕಿನಲ್ಲಿ ಎನ್‌ಪಿಎಸ್ ನೌಕರರ ಪರವಾಗಿ ಧ್ವನಿಯಾಗಿ ನಿಂತು ಸಂಘಟನೆಯನ್ನು ಕಟ್ಟಿ ಉತ್ತಮ ಸಂಘಟನಾ ಚತುರನಾಗಿದ್ದ ಆತನಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮತ್ತು ಆತನ ಪಟಾಲಂ ಸೇರಿಕೊಂಡು ಚಿತ್ರ ಹಿಂಸೆ ನೀಡಿದ್ದರಿಂದ ಆತ ಈ ನಿರ್ಧಾರ ತೆಗೆದುಕೊಂಡಿದ್ದಾನೆ. ಆತನ ಜೊತೆಗೆ ನಾವಿದ್ದೇವೆ ಆತ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ಈ ಮೂಲಕ ಹೇಳಲು ಇಚ್ಚಿಸುತ್ತೇನೆ ಹಾಗೆ ಆತನಾ ಈ ನಿರ್ಧಾರಕ್ಕೆ ಕಾರಣವಾಗಿರುವ ವ್ಯಕ್ತಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡು ಕಾನೂನಿನ ಮೂಲಕ ಶಿಕ್ಷೆ ವಿಧಿಸಬೇಕು ಎಂದು ಈ ಮೂಲಕ ನಾನು ಕೇಳಿಕೊಳ್ಳುತ್ತೇನೆ ಇಲ್ಲವಾದಲ್ಲಿ ನಮ್ಮ ಹೋರಾಟ ಅನಿವಾರ್ಯವಾಗುತ್ತದೆ ಎಂದು ಹೇಳಬಯಸುತ್ತೇನೆ….
ರಘುರಾಜ್ ಹೆಚ್.ಕೆ…9449553305…