
ತೀವ್ರ ಕುತೂಹಲ ಕೆರಳಿಸಿರುವ ಶಿವಮೊಗ್ಗ ಡಿಸಿಸಿ ಬ್ಯಾಂಕ್
ಹಾಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಇಂದು ನಡೆಯುತ್ತಿದ್ದು.
ಬ್ಯಾಂಕ್ ನ ಆಡಳಿತ ಮಂಡಳಿಯ 12 ನಿರ್ದೇಶಕರ ಪೈಕಿ ಬ್ಯಾಂಕ್ ನ ಉಪಾಧ್ಯಕ್ಷರಾಗಿರುವ ಷಡಾಕ್ಷರಿ
ನಿರ್ದೇಶಕರುಗಳಾದ
ವಿಜಯ್ ದೇವ್, ದಿನೇಶ್ ದುಗ್ಗಪ್ಪಗೌಡ,ಎಂ ಎಂ ಪರಮೇಶ್ವರ್, ಎಚ್ ಕೆ ವೆಂಕಟೇಶ್,ಸುದೀರ್,
ಸೇರಿ ಏಳು ಮಂದಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಕೋರಿ ಇತ್ತೀಚೆಗೆ ಎಂ ಡಿ ಅವರಿಗೆ ಅರ್ಜಿ ಸಲ್ಲಿಸಿದ್ದರು.
ಬ್ಯಾಂಕ್ ಎಂ.ಡಿ ಯವರು ಈ ಬಗ್ಗೆ ಕೇಂದ್ರ ಬ್ಯಾಂಕಿನ ಸಕ್ಷಮ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು,
ಪ್ರಾಧಿಕಾರವು ಜುಲೈ 28ನೇ ದಿನಾಂಕವನ್ನು ಅವಿಶ್ವಾಸ ಮಂಡನೆಗೆ ದಿನ ನಿಗದಿ ಮಾಡಿದ್ದರು
ಏಳು ಜನ ಅವಿಶ್ವಾಸ ನಿರ್ಣಯಕ್ಕೆ ಅರ್ಜಿ ಸಲ್ಲಿಸಿರುವುದರಿಂದ ಹಾಲಿ ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿ ಇವರನ್ನು ಅಧಿಕಾರದಿಂದ ಕೆಳಗಿಳಿಸಿ
ಸಹಕಾರಿ ನಾಯಕ ಆರ್. ಎಂ.ಮಂಜುನಾಥ್ ಬೆಂಬಲಿತ ಉಪಾಧ್ಯಕ್ಷ ಎಚ್ ಎಲ್ ಷಡಾಕ್ಷರಿ ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

12 ನಿರ್ದೇಶಕರಲ್ಲಿ 9 ಜನ ನಿರ್ದೇಶಕರು ಹಾಲಿ ಅಧ್ಯಕ್ಷರಾದ ಚನ್ನವೀರಪ್ಪ ವಿರುದ್ಧ ಇದ್ದಾರೆ ಎನ್ನುವ ಮಾಹಿತಿ ಇದೆ ಹೀಗಾಗಿ ಚೆನ್ನವೀರಪ್ಪನವರ ಬೆಂಬಲ ಕಡಿಮೆ ಆಗುತ್ತದೆ..
ಒಂದು ವೇಳೆ ಚೆನ್ನವೀರಪ್ಪನವರೇ ರಾಜೀನಾಮೆ ಕೊಟ್ಟರೆ ಈ ಸಮಸ್ಯೆ ಬಗೆಹರಿಯುತ್ತದೆ ಇಲ್ಲವಾದಲ್ಲಿ ಮತಗಳು ಚಲಾವಣೆ ಆದರೆ ಮಂಜುನಾಥ್ ಗೌಡರ ಬಣ ಅಧ್ಯಕ್ಷ ಗಾದೆ ಹಿಡಿಯುತ್ತದೆ.
ರಘುರಾಜ್ ಹೆಚ್.ಕೆ..9449553305…