
ತೀರ್ಥಹಳ್ಳಿ:- ತಾಲೂಕಿನ ಮಳಲಿಮಕ್ಕಿಯಲ್ಲಿ ನಡೆದ ಬಾಲಕರ ಗುಂಪು ಆಟಗಳ ಕ್ರೀಡಾಕೂಟದಲ್ಲಿ
ಆಗುಂಬೆಯ ಅನ್ನಪೂರ್ಣ ವಿದ್ಯಾ ಮಂದಿರ (ಎ.ವಿ.ಎಂ.) ಪ್ರೌಢಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್ ಪಂದ್ಯಾವಳಿಯಲ್ಲಿ ಎಲ್ಲ ಹಂತದಲ್ಲೂ
ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ,
ವಿಶೇಷವೇಂದರೆ ,
ಈ ವಾಲಿಬಾಲ್ ತಂಡದ ನಾಯಕತ್ವವನ್ನು ಆರ್ಯನ್
ಅನಿಲ್ ಗೌಡ ಕುರುವಳ್ಳಿ
ಇವರು ಮುನ್ನಡೆಸಿದ್ದು ಇಲ್ಲಿ ದೈಹಿಕ ಶಿಕ್ಷಕರು ಇರುವುದಿಲ್ಲ ಈತನೇ ತಂಡವನ್ನು ರೆಡಿ ಮಾಡಿದ್ದು ಈ ಸಾಧನೆ ಮೆಚ್ಚುವಂತದ್ದು ಅತ್ಯಂತ ಕುತೂಹಲಕಾರಿಯಾಗಿ ನಡೆದ ಪಂದ್ಯಾವಳಿಯಲ್ಲಿ ಆಗುಂಬೆ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದಲ್ಲೂ ಇದೇ ರೀತಿ ಉತ್ತಮ
ಕ್ರೀಡಾ ಪ್ರದರ್ಶನವನ್ನು ನೀಡಿ ವಿಜಯಿ ಆಗಲಿ ಎಂದು ಶಾಲೆಯ, ಅಧ್ಯಾಪಕರು, ಆಡಳಿತ ಮಂಡಳಿ, ಪೋಷಕರು ಶುಭ ಹಾರೈಸಿದ್ದಾರೆ.