
ಶಿವಮೊಗ್ಗ : ಇಂದು ದೇಶದೆಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸಾಹದಿಂದ ಆಚರಿಸಲಾಗುತ್ತಿದೆ.
ನಗರದ ವಾಸವಿ ಪಬ್ಲಿಕ್ ಸ್ಕೂಲ್ ನಲ್ಲಿ ಚಿಣ್ಣರು ಸಂಭ್ರಮದಿಂದ ಕೃಷ್ಣ ಹಾಗು ರಾಧೆಯ ಉಡುಗೆ ತೊಟ್ಟು ಜನ್ಮಾಷ್ಟಮಿ ಆಚರಿಸಿದರು.

ವಾಸವಿ ಪಬ್ಲಿಕ್ ಸ್ಕೂಲ್ ನ ಆಡಳಿತ ಮಂಡಳಿಯವರು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಾಲೆಯ ನರ್ಸರಿ ಹಾಗು ಎರಡನೇ ತರಗತಿಯ ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಗೆ ಕೃಷ್ಣ ಮತ್ತು ರಾಧೆಯ ಉಡುಗೆ ತೊಡಿಸಿ ಸ್ಮಾರ್ಟ್ ಸಿಟಿ ವತಿಯಿಂದ ಆರಂಭವಾಗಿರುವ ತುಂಗಾ ತೀರದ ವಿಹಾರ ಧಾಮದಲ್ಲಿ ಶಾಲಾ ಮಕ್ಕಳನ್ನು ಒಗ್ಗೂಡಿಸಿ ಅಲ್ಲಿಂದ ರಾಧೆ ಕೃಷ್ಣರನ್ನು ವಾಸವಿ ಪಬ್ಲಿಕ್ ಸ್ಕೂಲ್ ವರೆಗೆ ಮೆರವಣಿಗೆ ಮೂಲಕ ಕರೆ ತರಲಾಯಿತು.

ಎಸ್.ಕೆ ಶೇಷಾಚಲ. ಕಾರ್ಯದರ್ಶಿ ವಾಸವಿ ಪಬ್ಲಿಕ್ ಸ್ಕೂಲ್

ಈ ಸಂಧರ್ಭದಲ್ಲಿ ಮಕ್ಕಳ ಪೋಷಕರು, ಶಾಲೆಯ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು , ಶಿಕ್ಷಕ ಶಿಕ್ಷಕಿಯರು, ಸ್ಮಾರ್ಟ್ ಸಿಟಿ ಸಿಬ್ಬಂದಿಗಳು ಹಾಗು ಅರಮನೆ ವಾರ್ಡ್ ನ ಪಾಲಿಕೆ ಸದಸ್ಯ ಪ್ರಭು( ಪ್ರಭಾಕರ್) ಉಪಸ್ಥಿತರಿದ್ದರು.
ವರದಿ – ವಿನಯ್ ಕುಮಾರ್ ಹೆಚ್.ಎಮ್