
ಕಳೆದ ಎರಡು ಮೂರು ತಿಂಗಳಿಂದ ಶಿವಮೊಗ್ಗ ನಗರದ ಶೇಷಾದ್ರಿಪುರಂ ರೈಲ್ವೆ ಸ್ಟೇಷನ್ ಬಳಿ ಯಾವುದೇ ವಿಳಾಸವಿಲ್ಲದ ಇಬ್ಬರು ವ್ಯಕ್ತಿಗಳು ಶೇಷಾದ್ರಿಪುರಂ ಅಂಡರ್ ಪಾಸ್ ನ ಕೆಳಗೆ ದಿನನಿತ್ಯ ಮಲಗುತ್ತಿದ್ದರು.
ಕೋವಿಡ್ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ನಾಗರಿಕ ರಕ್ಷಣಾ ಸಮಿತಿಯ ಸದಸ್ಯರುಗಳು ಇವರಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ರಕ್ಷಣೆ ಸಿಗಬೇಕು.ಇಲ್ಲವಾದಲ್ಲಿ ಇವರಿಗೆ ಕೋವಿಡ್ ಸೋಂಕು ಬಂದಲ್ಲಿ ಸುತ್ತಮುತ್ತಲ ಜನರಿಗೂ ಬರುವ ಸಾಧ್ಯತೆ ಇದೆ ಎಂದು ನ್ಯೂಸ್ ವಾರಿಯರ್ಸ್ ಪತ್ರಿಕೆ ಬಳಿ ತಮ್ಮ ಕಳವಳ ವ್ಯಕ್ತಪಡಿಸಿದ್ದರು.
ಹಾಗೂ ಇನ್ನೊಂದು ಪ್ರಕರಣದಲ್ಲಿ ಮೀನಾಕ್ಷಿ ಭವನ್ ಹತ್ತಿರ ಒಂದು ಮಹಿಳೆ ನಿರಂತರವಾಗಿ ಜನರಿಗೆ ಕಲ್ಲುಗಳಿಂದ ಹೊಡೆಯುವುದು ಕೂಗಾಡುವುದು ಮಾಡುತ್ತಿದ್ದಳು.ಇದರಿಂದ ಅಲ್ಲಿ ಓಡಾಡುವ ಜನರಿಗೆ, ಸಾರ್ವಜನಿಕರಿಗೆ, ತುಂಬಾ ಕಿರಿಕಿರಿ ಉಂಟಾಗುತ್ತಿತ್ತು. ಇದನ್ನು ಗಮನಿಸಿದ ಶಿವಮೊಗ್ಗ ನಗರ ಆರೋಗ್ಯ ಕೇಂದ್ರದ ಮಹಿಳಾ ಸಿಬ್ಬಂದಿ ಒಬ್ಬರು ನ್ಯೂಸ್ ವಾರಿಯರ್ಸ್ ಪತ್ರಿಕೆಗೆ ಈ ಮಹಿಳೆಗೆ ರಕ್ಷಣೆ ಒದಗಿಸುವಂತೆ ಕೇಳಿಕೊಂಡಿದ್ದರು.

ಇವೆರಡು ಪ್ರಕರಣಗಳಲ್ಲಿ ಕೂಡ ಪತ್ರಿಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದಾಗ ಸೂಕ್ತವಾಗಿ ಸ್ಪಂದಿಸಿದ ಅಧಿಕಾರಿಗಳು 3 ವ್ಯಕ್ತಿಗಳನ್ನು ರಕ್ಷಿಸಿ ಅವರಿಗೆ ಸೂಕ್ತವಾದ ರಕ್ಷಣೆ ಒದಗಿಸಿದ್ದಾರೆ. ಮಾಹಿತಿ ನೀಡಿದ ಶೇಷಾದ್ರಿಪುರಂ ನಾಗರಿಕ ಸಮಿತಿಯ ಸದಸ್ಯರಿಗೂ, ಹಾಗೂ ಶಿವಮೊಗ್ಗ ನಗರದ ಆರೋಗ್ಯ ಕೇಂದ್ರದ ಮಹಿಳಾ ಸಿಬ್ಬಂದಿಗೂ, ಕ್ರಮ ತೆಗೆದುಕೊಂಡ ಭಿಕ್ಷುಕರ ಪುನರ್ವಸತಿ ಕೇಂದ್ರದ ಅಧೀಕ್ಷಕರಿಗೆ, ಹಾಗೂ ಮಹಿಳಾ ಅಭಿವೃದ್ಧಿ ಅಧಿಕಾರಿಯಾದ ಗಂಗಾಬಾಯಿ ಅವರಿಗೆ ಈ ಕಾರ್ಯಾಚರಣೆಯಲ್ಲಿ ಸಹಕರಿಸಿದ ಸಖಿತಂಡ, ಆರೋಗ್ಯ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳಿಗೂ ನ್ಯೂಸ್ ವಾರಿಯರ್ಸ್ ಪತ್ರಿಕೆ ತಂಡದ ವತಿಯಿಂದ ಧನ್ಯವಾದಗಳು….

ವರದಿ …ರಘುರಾಜ್ ಹೆಚ್. ಕೆ..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…