
ಪ್ರಾ.ಆ.ಕೇಂದ್ರ ಮೇಗರವಳ್ಳಿಯ ರಂಜದಕಟ್ಟೆ ಉಪಕೇಂದ್ರದಲ್ಲಿ ಸಮುದಾಯ ಆರೋಗ್ಯಾಧಿಕಾರಿಯಾಗಿದ್ದ ಜಯಶ್ರೀಯವರು ಭುವನೇಶ್ವರದ ಏಮ್ಸ್ ಸಂಸ್ಥೆಯ ಶುಶ್ರೂಷಣಾಧಿಕಾರಿಯಾಗಿ ನೇಮಕಗೊಂಡಿದ್ದರಿಂದ ಪ್ರಾ.ಆ.ಕೇಂದ್ರ ಮೇಗರವಳ್ಳಿಯಲ್ಲಿ ನಡೆದ ಭಾವಪೂರ್ಣ ಸಮಾರಂಭದಲ್ಲಿ ಅವರನ್ನು ಆತ್ಮೀಯವಾಗಿ ಗೌರವಿಸಿ, ಹಾರ್ದಿಕವಾಗಿ ಶುಭ ಹಾರೈಸಿ ಬೀಳ್ಕೊಡಲಾಯಿತು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ, ಅತ್ಯಂತ ತಾಳ್ಮೆ, ಶ್ರದ್ದೆ, ವಿನಮ್ರತೆ,ಸೇವಾ ಮನೋಭಾವಗಳಿಂದ ಜಯಶ್ರೀ ಮಾದರಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸಗಳನ್ನು ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಅಪಾರ ಪ್ರತಿಭಾವಂತರಾದ ಅವರು ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಏಮ್ಸ್ ಸಂಸ್ಥೆಯ ಶುಶ್ರೂಷಣಾಧಿಕಾರಿಯಾಗಿ ನೇಮಕವಾಗಿದ್ದಾರೆ. ಇದು ಕಡಿಮೆ ಸಾಧನೆಯಲ್ಲ. ಅವರು ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲಿ. ಅವರಿಂದ ಇನ್ನಷ್ಟು ಹೆಚ್ಚಿನ ಸೇವೆ ಸಮಾಜಕ್ಕೆ ದೊರಕಲಿ ಎಂದು ಶುಭ ಹಾರೈಸಿದರು.
ಹಿರಿಯ ಪ್ರಾ.ಆ.ಸುರಕ್ಷಾಧಿಕಾರಿ ನೀಲಮ್ಮ, ಪ್ರಾ.ಆ.ಸುರಕ್ಷಾಧಿಕಾರಿಳಾದ ವೀಣಾ ಎಂ ಪಿ, ನಾಗರತ್ನ ಎ ಜಿ ,ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತ ರೆಡ್ಡಿ, ಸಮುದಾಯ ಆರೋಗ್ಯಾಧಿಕಾರಿಗಳಾದ ಕೈಲಾಶ್, ಲಿಷಾ,ರಾಘವೇಂದ್ರ, ಸಂಧ್ಯಾ,ಮೀನಾಕ್ಷಿ,ರೆನಿಟಾ, ಆಶಾ ಫೆಸಿಲಿಟೇಟರ್ ರೇಖಾ,ಆಶಾ ಕಾರ್ಯಕರ್ತೆಯರಾದ ಸವಿತ,ರೂಪ ಮತ್ತಿತರರು ಅವರ ಉತ್ತಮ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.
ವೈದ್ಯಾಧಿಕಾರಿ ಡಾ.ರಂಜಿತ ಎನ್ ಎಸ್ ಅಧ್ಯಕ್ಷತೆ ವಹಿಸಿದ್ದರು. ಶುಶ್ರೂಷಣಾಧಿಕಾರಿ ನಿರ್ಮಲ, ಫಾರ್ಮಸಿ ಅಧಿಕಾರಿ ಸನ್ನಿಧಿ, ಪ್ರ ದ ಸಹಾಯಕ ನವೀನ್ ಕುಮಾರ್,,ಡಿ ದರ್ಜೆ ನೌಕರರಾದ ಪಾರ್ವತಿ, ಆಶಾ ಫೆಸಿಲಿಟೇಟರ್ ತೇಜಾವತಿ, ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.
ಆಶಾ ಕಾರ್ಯಕರ್ತೆ ಸುಧಾ ಪ್ರಾರ್ಥಿಸಿ, ನಾಗರತ್ನ ಸ್ವಾಗತಿಸಿ,ಹನುಮಂತ ರೆಡ್ಡಿ ನಿರೂಪಿಸಿ,ವಂದಿಸಿದರು.