
ಶಿವಮೊಗ್ಗ: ಇಂದು ನಗರದ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ - 2023 ರ
ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಂಡಿದ್ದು,
ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ. ಕೆ ಐಪಿಎಸ್ ರವರು ಎಲ್ಲರಿಗೂ ಸ್ವಾಗತ ಕೋರಿದರು.
ಗೌರವಾನ್ವಿತ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ
ದ ಅಧ್ಯಕ್ಷರಾದ ಮಂಜುನಾಥ್ ನಾಯಕ್ ರವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಗೌರವ ರಕ್ಷೆಯನ್ನು ಸ್ವೀಕರಿಸಿ, ಪಥ ಸಂಚಲನವನ್ನು ವೀಕ್ಷಿಸಿ ಕ್ರೀಡಾಕೂಡಕ್ಕೆ ಚಾಲನೆ ನೀಡಿದರು.


ನಂತರ ಕ್ರೀಡಾಕೂಟದ ಕುರಿತು ಮಾತನಾಡಿ,ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು ಕೆಲಸದ ಒತ್ತಡದ ನಡುವೆ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು, ಇದು ದೈಹಿಕವಾಗಿ ಸದೃಡರಾಗಲು ಮತ್ತು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ. ಕ್ರೀಡೆಯಲ್ಲಿ ಸೋಲು ಮತ್ತು ಗೆಲವು ಸಾಮಾನ್ಯವಾಗಿದ್ದು, ಸೋಲಿನಲ್ಲಿಗಾಲೀ ಅಥವಾ ಗೆಲುವಿನಲ್ಲಾಗಲೀ ಯಾವ ರೀತಿ ವ್ಯವಹರಿಸಬೇಕು ಎಂಬ ಬಗ್ಗೆ ಸಾಮಾನ್ಯ ಜೀವನ ಮತ್ತು ವೃತ್ತಿ ಜೀವನಕ್ಕೆ ಪಾಠವಾಗಲಿದೆ. ತಮ್ಮ ಸಾಮರ್ಥ್ಯವನ್ನು ತೋರಿಸಲು ಇದು ಉತ್ತಮ ವೇದಿಕೆಯಾಗಿರುತ್ತದೆ ಎಂದು ಹೇಳಿ ಕ್ರೀಡಾಕೂಟವು ಯಶಸ್ವಿಯಾಗಲೆಂದು ಶುಭಕೋರಿದರು.


ಈ ಸಂದರ್ಭದಲ್ಲಿ ಅನಿಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಪ್ರಭು ಡಿ.ಟಿ, ಡಿವೈಎಸ್ಪಿ ಡಿಸಿಆರ್.ಬಿ ಶಿವಮೊಗ್ಗ, ನಾಗರಾಜ್, ಡಿವೈಎಸ್ಪಿ ಭದ್ರಾವತಿ ಉಪ ವಿಭಾಗ, ಬಾಲರಾಜ್, ಡಿವೈಎಸ್ಪಿ, ಶಿವಮೊಗ್ಗ ಎ ಉಪ ವಿಭಾಗ, ಸುರೇಶ್ ಕುಮಾರ್, ಡಿವೈಎಸ್ಪಿ, ಶಿವಮೊಗ್ಗ ಬಿ ಉಪ ವಿಭಾಗ, ಮತ್ತು ಗಜಾನನ ವಾಮನ ಸುತರ,ಡಿವೈಎಸ್ಪಿ, ತೀರ್ಥಹಳ್ಳಿ ಉಪ ವಿಭಾಗ, ಜಿಲ್ಲೆಯ ಎಲ್ಲಾ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂಧಿಗಳು ಉಪಸ್ಥಿತರಿದ್ದರು.