
ಭದ್ರಾವತಿ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಭದ್ರಾ ವೈನ್ಸ್ ಬಳಿ ಹೇಮಂತ ಆಲಿಯಾಸ್ ಕರಿ ಚಿಕ್ಕಿ ಎನ್ನುವವನ ಭೀಕರ ಹತ್ಯೆಯಾಗಿದೆ.
ಕೊಲೆಗೆ ಕಾರಣವೇನು..?
3 ವರ್ಷಗಳ ಹಿಂದೆ ರಮೇಶ್ ಎನ್ನುವನನ್ನು ಮುಜ್ಜು ಮತ್ತು ಸಹಚರರು ಸೇರಿಕೊಂಡು ಕೊಲೆ ಮಾಡಿದ್ದರು ನಂತರ ಮುಜ್ಜು ಟಾರ್ಚರ್ ತಾಳಲಾಗದೆ 4 ತಿಂಗಳ ಹಿಂದೆ ಮುಜ್ಜು ಅನ್ನು ರಮೇಶ್ ಸಹಚರರು ಸುರೇಶ್, ಗುಂಡ ಇನ್ನಿತರು ಸೇರಿಕೊಂಡು ಹತ್ಯೆ ಮಾಡಿದ್ದರು.
ಈ ಹತ್ಯೆಗೆ ಪ್ರತಿಕಾರವಾಗಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನಗರದ ದುರ್ಗಾ ವೈನ್ಸ್ ಬಳಿ ಮುಜ್ಜು ಕೊಲೆಯ ಆರೋಪಿ ಗುಂಡನ ಅಣ್ಣ ಹೇಮಂತ್ ಆಲಿಯಾಸ್ ಕರಿ ಚಿಕ್ಕಿ ಎನ್ನುವುನನ್ನು ಲಾಂಗ್ ಗಳನ್ನು ಹಿಡಿದು ಬಂದ ಹಂತಕರು ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.
ಮುಜ್ಜು ತಮ್ಮ ಮುಬಾರಕ್ ಹಾಗೂ ಸಹಚರರು ಸೇರಿಕೊಂಡು ಹತ್ಯೆ ನಡೆಸಿದ್ದು ಪ್ರಾಥಮಿಕ ಹಂತದಲ್ಲಿ ಬೊಮ್ಮನ ಕಟ್ಟೆಯ ಸತ್ಯಾನಂದ, ಮುಬಾರಕ್ ಯಾನೆ ಮುಬ್ಬು(26), 20 ವರ್ಷದ ಖಲೀಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ..
ಒಟ್ಟಿನಲ್ಲಿ ಮೂರು ಕೊಲೆಗಳು ರಿವೆಂಜ್ ಗೋಸ್ಕರ ನಡೆದಿದ್ದು ಭದ್ರಾವತಿಯಲ್ಲಿ ಇದು ಮತ್ತೆ ಮುಂದುವರಿಯುವ ಸಾಧ್ಯತೆ ಇದೆ.
ರಘುರಾಜ್ ಹೆಚ್.ಕೆ.9449553305.