
ಶಿವಮೊಗ್ಗ: ಗಾಜನೂರು ಸಮೀಪ ತುಂಗಾ ಮೇಲ್ದಂಡೆ ಎಡನಾಲೆಯ ಅಕ್ಕಪಕ್ಕ ಅಕ್ರಮ ಮಣ್ಣು ಮತ್ತು ಕಲ್ಲು ಗಣಿಗಾರಿಕೆ ಹಾಗೂ ಒತ್ತುವರಿ ನಡೆಯುತ್ತಿದ್ದು ಅಧಿಕಾರಿಗಳು ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ.

ವಿನಯ್ ಎನ್ನುವ ವ್ಯಕ್ತಿ ಕಲ್ಲು ಮಣ್ಣು ಎರಡನ್ನು ಆಕ್ರಮವಾಗಿ ತೆಗೆದು ಮಾರಾಟ ಮಾಡುತ್ತಿದ್ದು ಇದರ ಬಗ್ಗೆ ತುಂಗಾ ಮೇಲ್ದಂಡೆ ಎಡನಾಲೆಯ ಅಧಿಕಾರಿಗಳು ಗೊತ್ತಿದ್ದು ಗೊತ್ತಿಲ್ಲದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಇಲ್ಲಿ ಸಾಕಷ್ಟು ಜನ ಇದೇ ತರಹ ಆಕ್ರಮವಾಗಿ ಕಲ್ಲು ಮಣ್ಣನ್ನು ಮಾರಾಟ ಮಾಡುತ್ತಿದ್ದು ತುಂಗಾ ಎಡದಂಡೆ ಯೋಜನೆಯ ಅಧಿಕಾರಿಗಳು ಏಕೆ ಮೌನವಾಗಿದ್ದಾರೆ ಈ ಮೌನದ ಹಿಂದಿನ ಉದ್ದೇಶವೇನು..? ಇದರಲ್ಲಿ ಇವರ ಪಾಲುದಾರಿಕೆ ಎಷ್ಟಿದೆ..? ಇವರಿಗೆ ಬರುವ ಮಾಮೂಲು ಎಷ್ಟು ..?ಎನ್ನುವುದು ಬಹಿರಂಗವಾಗಬೇಕಾಗಿದೆ.

ಹಾಗಾದರೆ ಇದನ್ನು ನೋಡಿಕೊಳ್ಳುವವರು ಯಾರು ನಿರಂತರವಾಗಿ ಹಗಲು ರಾತ್ರಿ ಎನ್ನದೆ ಇಲ್ಲಿ ಅಕ್ರಮ ಮಣ್ಣು ಮತ್ತು ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಭೂಮಂಡಲವನ್ನು ದೋಚುವ ಕೆಲಸ ನಡೆಯುತ್ತಿದೆ ಈತನ ಅಕ್ರಮಕ್ಕೆ ಕಡಿವಾಣ ಹಾಕಲು ತುಂಗಾ ಮೇಲ್ದಂಡೆ ಎಡನಾಲೆಯ ಅಧಿಕಾರಿಗಳು ಇನ್ನಾದರೂ ಕಾರ್ಯಾಮುಖವಾಗುತ್ತಾರ..? ಅಕ್ರಮವಾಗಿ ತೆಗೆದ ಮಣ್ಣು ಹಾಗೂ ಕಲ್ಲನ್ನು ಸಾಗಾಟ ಮಾಡಿ ಹೊಸಳ್ಳಿ ಶಿವಮೊಗ್ಗ ಮುತ್ತೂರು ಭಾಗಗಳಿಗೆ ಹಾಗೂ ಬ್ಯಾಕ್ ವಾಟರ್ ಒತ್ತುವರಿ ಮಾಡಿಕೊಂಡಿರುವವರಿಗೆ ಮಣ್ಣು ಹೊಡೆಯುವ ಕೆಲಸ ನಡೆಯುತ್ತಿದೆ ಇದನ್ನು ನೋಡಿಕೊಂಡು ಅಧಿಕಾರಿಗಳು ಸುಮ್ಮನಿರಲು ಕಾರಣವೇನು..? ಕೂಡಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಾಗೂ ಪೊಲೀಸ್ ಇಲಾಖೆಗೆ ದೂರನ್ನು ನೀಡಿ ಇಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮಣ್ಣು ಗಣಿಗಾರಿಕೆಯನ್ನು ತಡೆಯಬೇಕು ಪ್ರಾಕೃತಿಕ ಸಂಪತ್ತನ್ನು ಉಳಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ. ಇಲ್ಲವಾದಲ್ಲಿ ಪತ್ರಿಕೆ ನಿರಂತರವಾಗಿ ಸುದ್ದಿಯನ್ನು ಪ್ರಕಟಿಸುತ್ತದೆ ಎಚ್ಚರ…
ರಘುರಾಜ್ ಹೆಚ್. ಕೆ.9449553305.