
ಬಾರಿ ಕುತೂಹಲ ಮೂಡಿಸಿದ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ಅನ್ನು ಕೊನೆಗೂ ಆಯನೂರು ಮಂಜುನಾಥ್ ಗೆ ಕಾಂಗ್ರೆಸ್ ಪಕ್ಷ ನೀಡಿದೆ.
ಹಲವರು ನೈರುತ್ಯ ಪದವೀಧರ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದರು ಅದರಲ್ಲೂ ಪ್ರಮುಖವಾಗಿ ಎಸ್ಪಿ ದಿನೇಶ್ ಪ್ರಬಲ ಆಕಾಂಕ್ಷಿಯಾಗಿದ್ದರು ಆದರೆ ಕಾಂಗ್ರೆಸ್ ಪಕ್ಷ ಮಂಜುನಾಥ್ ಅವರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ.
ಆಯನೂರು ಮಂಜುನಾಥ್ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿಕೊಂಡಾಗ ನೈರುತ್ಯ ಪದವೀಧರ ಕ್ಷೇತ್ರ ತಮಗೆ ನೀಡುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಕೇಳಿಕೊಂಡಿದ್ದರು ಹಾಗೆ ಅವರುಗಳು ಸಹ ನೈರುತ್ಯ ಪದವೀಧರ ಕ್ಷೇತ್ರ ನೀಡುತ್ತೇವೆ ಎಂದು ಆಶ್ವಾಸನೆ ಕೂಡ ನೀಡಿದ್ದರು ಎನ್ನಲಾಗಿತ್ತು.
ಹಾಗೆ ಮುಂದುವರೆದು ಆಯನೂರು ಮಂಜುನಾಥ್ ಅವರು ನೈರುತ್ಯ ಪದವೀಧರ ಕ್ಷೇತ್ರ ತನಗೆ ಸಿಗುತ್ತದೆ ಎನ್ನುವ ಪ್ರಬಲ ನಂಬಿಕೆ ಇಟ್ಟುಕೊಂಡಿದ್ದರು ಹಾಗೆ ಅದಕ್ಕೆ ಪೂರಕವಾಗಿ ಕೆಲಸವನ್ನು ಮಾಡುತ್ತಿದ್ದರು ಸಮಯ ಸಿಕ್ಕಾಗಲೆಲ್ಲ ಇದರ ಬಗ್ಗೆ ಪತ್ರಿಕಾಗೋಷ್ಠಿಗಳಲ್ಲಿ ಹೇಳುತ್ತಿದ್ದರು ಆದರೆ ಎಸ್ಪಿ ದಿನೇಶ್ ತಮಗೆ ನೈರುತ್ಯ ಪದವೀಧರ ಕ್ಷೇತ್ರ ಸಿಗಬೇಕು ಎಂದು ತಮ್ಮ ಬೆಂಬಲಿಗರೊಡನೆ ಅನೇಕ ಬಾರಿ ಹೈಕಮಾಂಡ್ ಅನ್ನು ಭೇಟಿ ಮಾಡಿ ಕಾಂಗ್ರೆಸ್ನ ಮುಖಂಡರನ್ನು ಭೇಟಿ ಮಾಡಿ ತಮ್ಮ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು ಹಾಗೂ ಹಲವು ಬಾರಿ ಪತ್ರಿಕಾಗೋಷ್ಠಿಗಳನ್ನು ನಡೆಸಿ ತಾನು ಪ್ರಬಲ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು.
ಹೊರಗಿನಿಂದ ಬರುವವರಿಗೆ ನೀಡುವುದು ಬೇಡ ನಮಗೆ ನೀಡಬೇಕು ಎಂದು ಕೇಳಿಕೊಂಡಿದ್ದರು ಆದರೆ ಕೊನೆಗೂ ಕಾಂಗ್ರೆಸ್ ಎಲ್ಲಾ ಗೊಂದಲಕ್ಕೆ ತೆರೆ ಎಳೆದಿದ್ದು ಆಯನೂರು ಮಂಜುನಾಥ್ ಗೆ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ನೀಡುವುದರ ಮೂಲಕ ಕುತೂಹಲಕ್ಕೆ ತೆರೆ ಎಳೆದಿದೆ ಎನ್ನಬಹುದು.
ರಘುರಾಜ್ ಹೆಚ್.ಕೆ..9449553305.