
ಬೆಂಗಳೂರು ಲೋಕಾಯುಕ್ತದವರು ರಾಜ್ಯದ ಹಲವು ಕಡೆ ಇಂದು ದಾಳಿ ನಡೆಸಿದ್ದು ಅದರಲ್ಲಿ ಶಿವಮೊಗ್ಗದ ಗಾಂಧಿಬಜಾರ್ ನ ಮುರಳಿಧರ್ ಎನ್ನುವ ರಿಯಲ್ ಎಸ್ಟೇಟ್ ಉದ್ಯಮಿಯ ಮನೆಯ ಮೇಲೆ ಕೂಡ ದಾಳಿ ನಡೆಸಿದ್ದಾರೆ.
ಯಾರು ಈ ಮುರುಳಿಧರ್..?
ಬೆಂಗಳೂರಿನ ಲೋಕಾಯುಕ್ತದವರು ಯಲಹಂಕದಲ್ಲಿರುವ ಬಿಬಿಎಂಪಿಯ ಚೀಫ್ ಇಂಜಿನಿಯರ್ ರಂಗನಾಥ್ ಅವರ ಮನೆಯ ಮೇಲೆ ದಾಳಿ ನಡೆಸಿದ್ದು ಈ ದಾಳಿಯ ವೇಳೆ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿವೆ. ಅದೇ ರೀತಿ ರಂಗನಾಥ್ ಅವರ ಹೆಂಡತಿ ತನುಜಾ ಅವರ ಅಣ್ಣನಾದ ಶಿವಮೊಗ್ಗದ ಗಾಂಧಿಬಜಾರ್ ನ ರಿಯಲ್ ಎಸ್ಟೇಟ್ ಉದ್ಯಮಿ ಮುರಳಿಧರ್ ಅವರ ಮನೆಯ ಮೇಲೆ ದಾಳಿ ನಡೆಸಿದ್ದು ಈ ದಾಳಿಯ ವೇಳೆ ಹಲವು ಮಹತ್ವದ ದಾಖಲಾತಿಗಳು, ಬಂಗಾರ ಖರೀದಿಯ ಬಿಲ್ಲುಗಳು, ಹಲವು ಆಸ್ತಿಗೆ ಸಂಬಂಧಪಟ್ಟ ದಾಖಲೆಗಳು ಲಭ್ಯವಾಗಿವೆ ಎನ್ನಲಾಗುತ್ತಿದೆ.