
ಶಿವಮೊಗ್ಗದಲ್ಲಿ ಆಗಾಗ ಚಿರತೆ, ಕರಡಿ , ಆನೆ, ಪ್ರತ್ಯಕ್ಷ ಆಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಶ್ರಮವಹಿಸಿ ಹಿಡಿಯುತ್ತಿದ್ದಾರೆ.
ಆದರೆ ನಗರಕ್ಕೆ ಆಗಮಿಸುತ್ತಿರುವ ಕಾಡುಪ್ರಾಣಿಗಳ ಹಾವಳಿಯಿಂದಾಗಿ ನಾಗರಿಕರು ಆತಂಕಕ್ಕೆ ಈಡಾಗಿದ್ದಾರೆ.
ಇತ್ತೀಚಿಗೆ ಶಿವಮೊಗ್ಗದ ನವುಲೆ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಎಲ್ಲೆಡೆ ಸುದ್ದಿ ಬರುತ್ತಿದೆ. ಆದರೆ ಇದರ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರಿಕೆ ವಿಚಾರಿಸಿದಾಗ ಚಿರತೆ ಹದಿನೈದು ದಿನಗಳ ಹಿಂದೆ ನವುಲೆಯ ಕೃಷಿ ಕಾಲೇಜಿನ ಹಿಂಭಾಗ ಕಾಣಿಸಿಕೊಂಡಿದೆ ಎಂದು ಅಲ್ಲಿನ ಸೆಕ್ಯೂರಿಟಿ ಒಬ್ಬರು ಹೇಳಿದ್ದರು ಆದರೆ ನಾವು ಅದನ್ನು ಪರಿಶೀಲಿಸಿದಾಗ ಚಿರತೆ ಅಲ್ಲಿಂದ ಪಾಸಾಗಿದ್ದರೆ ಮುಂದೆ ಅಬ್ಬಲಗೆರೆ, ಕೋಟೆಗಂಗೂರು, ಭಾಗಗಳಿಗೆ ತೆರಳಬೇಕು ಸಾಮಾನ್ಯವಾಗಿ ಹುಲಿ ಸ್ವಭಾವ ಹಾಗೂ ಚಿರತೆ ಸ್ವಭಾವ ಭಿನ್ನವಾಗಿರುತ್ತದೆ. ಹುಲಿ ಒಂದು ಕಡೆ ಬೀಡುಬಿಟ್ಟರೆ ಮತ್ತೊಂದು ಹುಲಿ ಬಂದು ಅದನ್ನು ಓಡಿಸುವವರೆಗೂ ಅದು ಅಲ್ಲಿನ ಪ್ರಾಣಿಗಳನ್ನು ಮನುಷ್ಯರನ್ನು ಬೇಟೆಯಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿರುತ್ತದೆ ಆದರೆ ಚಿರತೆ ಹಾಗಲ್ಲ ಅಲ್ಲಲ್ಲೇ ಬಿಡು ಬಿಟ್ಟು ಒಂದೆರಡು ದಿನ ತನ್ನ ಆಹಾರವನ್ನು ಪೂರೈಸಿಕೊಂಡು ಮತ್ತೆ ಬೇರೆ ಸ್ಥಳಗಳಿಗೆ ತೆರಳುತ್ತಿರುತ್ತದೆ. ಹಾಗಾಗಿ ಚಿರತೆ ನಾವು ಅಲ್ಲಿ ಇಲ್ಲ ಎಂದು ಹೇಳುತ್ತಿಲ್ಲ ಅಥವಾ ಇದೆ ಎಂದು ಹೇಳುತ್ತಿಲ್ಲ ನಮ್ಮ ಕಾರ್ಯಚರಣೆಯನ್ನು ಮುಂದುವರಿಸಿದ್ದೇವೆ ಜನರು ಕೂಡ ಸ್ವಲ್ಪ ಜಾಗೃತರಾಗಿ ಇದ್ದರೆ ಒಳಿತು ಯಾವುದೇ ಮಾಹಿತಿ ಇದ್ದರೆ ದಯವಿಟ್ಟು ಅರಣ್ಯ ಇಲಾಖೆಯ ಹೆಲ್ಪ್ಲೈನ್ ನಂಬರ್ 1926 ಗೆ ಕರೆ ಮಾಡಿ ಮಾಹಿತಿ ತಿಳಿಸಿ ಆದರೆ ಮಾಹಿತಿ ಅಧಿಕೃತವಾಗಿರಲಿ ಎಂದು ಪತ್ರಿಕೆ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಅರಣ್ಯ ಒತ್ತುವರಿ ಕಾಡು ಪ್ರಾಣಿಗಳ ಪಾಲಿಗೆ ವರದಾನವಾಗಿದೆಯಾ..?
ಇತ್ತೀಚಿನ ವರ್ಷಗಳಲ್ಲಿ ಎಲ್ಲೆಡೆ ಅರಣ್ಯ ಇಲಾಖೆಯ ಭೂಮಿಯನ್ನು ಒತ್ತುವರಿ ಮಾಡುತ್ತಿದ್ದು ಎಲ್ಲೋ ಒಂದೊಂದು ಕಡೆ ಒಂದಷ್ಟು ಜಾಗವನ್ನು ಬಿಡುತ್ತಿದ್ದಾರೆ ಇದು ವನ್ಯಜೀವಿಗಳಿಗೆ ವರದಾನವಾಗಿದ್ದು ಅವುಗಳು ಅವುಗಳನ್ನು ಆಕ್ರಮಿಸಿಕೊಂಡು ಬಿಡು ಬಿಟ್ಟು ಅಲ್ಲಿಂದ ತಮ್ಮ ಕಾರ್ಯಚರಣೆಯನ್ನು ಮುಂದುವರೆಸಿಕೊಂಡು ಅಲ್ಲಿ ಬರುವ ಕಾಡುಪ್ರಾಣಿಗಳಾದ ಹಂದಿ, ಮೊಲ, ನಾಯಿಗಳನ್ನು ಬೇಟೆಯಾಡುತ್ತವೆ. ಒಂದೊಂದು ಬಾರಿ ಮನುಷ್ಯರ ಮೇಲು ಅಟ್ಯಾಕ್ ಮಾಡಿದರು ಆಶ್ಚರ್ಯ ಪಡಬೇಕಾಗಿಲ್ಲ. ಮೊದಲೇ ಬೇಸಿಗೆಕಾಲ ನೀರನ್ನು ಹುಡುಕಿಕೊಂಡು ಬರುವ ಕಾಡುಪ್ರಾಣಿಗಳು ಇಲ್ಲಿ ಸಿಕ್ಕ ಪ್ರಾಣಿಗಳನ್ನು ಬೇಟೆಯಾಡುತ್ತವೆ.
ಸ್ಥಳೀಯ ನಾಗರಿಕರು ಜಾಗೃತರಾಗಿ ಇದ್ದರೆ ಒಳಿತು ಹಾಗೆ ಯಾವುದೇ ಮಾಹಿತಿಗಳಿದ್ದರೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತನ್ನಿ…
ಅರಣ್ಯ ಇಲಾಖೆಯ ಹೆಲ್ಪ್ಲೈನ್ ನಂಬರ್ 1926 ಗೆ ಕರೆ ಮಾಡಿ ಮಾಹಿತಿ ತಿಳಿಸಿ
ರಘುರಾಜ್ ಹೆಚ್. ಕೆ ..9449553305.