ವಿನೋಬನಗರದ ಆರನೇ ತಿರುವಿನ ನಿವಾಸಿಗಳಾದ ಶರಶ್ಚಂದ್ರ, ದಶರತ್, ರಂತಹ ಸಾಮಾಜಿಕ ಕಳಕಳಿಯುಳ್ಳ ನಿವಾಸಿಗಳು ಅಲ್ಲಿನ ಸ್ಥಳೀಯರಿಗೆ ಬಾರಿ ವಾಹನಗಳಿಂದ ತೊಂದರೆ ಆಗುತ್ತಿರುವುದರಿಂದ ಕಿರಿದಾದ ರಸ್ತೆ ಆಗಿರುವುದರಿಂದ ಬೇರೆ ಮಾರ್ಗವನ್ನು ಮಾಡಿಕೊಡಬೇಕೆಂದು ಪೊಲೀಸ್ ವೃತ್ತ ನಿರೀಕ್ಷಕರು ಶಿವಮೊಗ್ಗ, ಮಹಾನಗರ ಪಾಲಿಕೆ ಆಯುಕ್ತರ ಮುಖಾಂತರ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು.


ಇವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ಭಾರಿ ವಾಹನಗಳಿಗೆ ಪರ್ಯಾಯ ಮಾರ್ಗವಾಗಿ ಕೆಇಬಿ ಸಮೀಪ ಇರುವ 60ಅಡಿ ರಸ್ತೆಯ ಮೂಲಕ, ಇಲ್ಲವೇ ಲಕ್ಷ್ಮಿ ಚಿತ್ರಮಂದಿರದ ಸಮೀಪದಲ್ಲಿರುವ ತುಂಗಾ ಚಾನೆಲ್ ಹಿಂಭಾಗದ ರಸ್ತೆಯಲ್ಲಿ ಭಾರಿ ವಾಹನಗಳು ಸಂಚರಿಸಲು ಅನುವು ಮಾಡಿಕೊಡಬಹುದು. ಎಂದು ಸ್ಥಳೀಯರು ನೀಡಿರುವ ಮನವಿ ಮೇರೆಗೆ ಮಹಾನಗರ ಪಾಲಿಕೆ ಆಯುಕ್ತರ, ಹಾಗು ಪೊಲೀಸ್ ವೃತ್ತ ನಿರೀಕ್ಷಕರು ಶಿವಮೊಗ್ಗ ಇವರ ವರದಿಯಂತೆ ಆದೇಶ ಹೊರಡಿಸಿದ್ದಾರೆ….
ವರದಿ… ರಘುರಾಜ್ ಹೆಚ್.. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…