
ಶಿವಮೊಗ್ಗ: ನಗರದ ತಾವರೆ ಚೆಟ್ಟನಹಳ್ಳಿ ನಿವಾಸಿಗಳಾದ ನಂದನ್ ಎಸ್ ಕೆ ಹಾಗೂ ಅಶ್ವಿನಿ ಟಿ ಜಿ ಅವರ ಹಿರಿಯ ಪುತ್ರ ಧನುಷ್ ಎನ್ ನಿನ್ನೆ ಪ್ರಕಟವಾದ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಉತ್ತಮ ಅಂಕ ಗಳಿಸಿದ್ದಾನೆ.
ನಗರದ ಖಾಸಗಿ ಶಾಲೆಯಾದ ಪೋದಾರ್ ನಲ್ಲಿ ಓದುತ್ತಿದ್ದ ಧನುಷ್ ಓದಿನ ಜೊತೆಯಲ್ಲಿ ಕ್ರೀಡೆ ಸ್ವಿಮ್ಮಿಂಗ್ ಇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದ 94% ಫಲಿತಾಂಶವನ್ನು ತೆಗೆದುಕೊಂಡಿರುವ ಧನುಷ್ ಸೈನ್ಸ್ ಹಾಗೂ ಸೋಶಿಯಲ್ ಸೈನ್ಸ್ ನಲ್ಲಿ ಕ್ರಮವಾಗಿ 95ರಿಂದ 98 ಅಂಕಗಳನ್ನು ತೆಗೆದುಕೊಂಡಿದ್ದಾನೆ.
ಈತನ ಈ ಸಾಧನೆಗೆ ತಂದೆ ತಾಯಿ ಅಜ್ಜಿ ಅಜ್ಜ ಸೇರಿದಂತೆ ಬಂಧುಗಳು ಹಾಗೂ ಶಾಲೆಯ ಶಿಕ್ಷಕರು ಸ್ನೇಹಿತರು ಶುಭ ಹಾರೈಸಿದ್ದಾರೆ.
