
ಸುದ್ದಿ: ರಶ್ಮಿ ಶ್ರೀಕಾಂತ್ ನಾಯಕ್..
ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ಮಳೆಯ ಕಣ್ಣಾಮುಚ್ಚಾಲೆ ಆಟ ಮುಂದೂವರೆದಿದೆ. ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಮೋಡ ಕವಿದ ಹಾಗೂ ಶೀತ ವಾತಾವರಣ ನಿರ್ಮಾಣವಾಗಿದೆ. ಗಾಳಿಯ ಅಬ್ಬರಕ್ಕೆ ಮರಗಳು ಧರೆಗುರುಳಿವೆ, ತಾಲೂಕಿನಲ್ಲಿ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ.
ಮಲೆನಾಡಿನ ಆಗುಂಬೆ ಬಿದರಗೋಡು,ಕೆಂದಾಳ್ ಬೈಲು, ಮೇಗರವಳ್ಳಿ,.ಕಮ್ಮರಡಿ, ಕಲ್ಮನೆ,
ಸುತ್ತಮುತ್ತ ಮಳೆಯ ಅಬ್ಬರ ಸ್ವಲ್ಪಮಟ್ಟಿಗೆ ಕಡಿಮೆಯಾಗಿ. ಬಿಟ್ಟು ಬಿಟ್ಟು.ಮಳೆಯಾಗುತ್ತಿದ್ದು, ಈ ಭಾಗದಲ್ಲಿ ಗಾಳಿಯ ಅಬ್ಬರ ಜೋರಾಗಿದೆ. ಗಾಳಿಯ ಅಬ್ಬರಕ್ಕೆ ವಿದ್ಯುತ್ ಕಂಬಗಳು ಧರೆಗುಳಿದ್ದು ಗ್ರಾಮೀಣ ಪ್ರದೇಶದಲ್ಲಿ
ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮರಗಳು
ವಿದ್ಯುತ್ ತಂತಿ ಮೇಲೆ ಬಿದ್ದು ಕೆಲವು ಕಡೆ ಮರಗಳು
ರಸ್ತೆಗುರುಳಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು.
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು
ಮಾಡಿಕೊಡುತ್ತಿದ್ದಾರೆ.
ವಿದ್ಯುತ್ ಕಂಬಗಳ ಮೇಲೆ ತೆಂಗಿನ ತೆಂಗಿನ ಮರ ಬಿದ್ದು ಇನ್ನೂ ಕೆಲವು ಕಡೆಗಳಲ್ಲಿ
ವಿದ್ಯುತ್ ಸಂಪರ್ಕ ವ್ಯತ್ಯಯವಾಗಿದೆ. ವಿದ್ಯುತ್
ಕಂಬಗಳು ಹಾನಿಯಾಗಿದ್ದು ಅಪಾರ ಪ್ರಮಾಣದ ನಷ್ಟವಾಗಿದೆ. ಮಳೆ ನಿಂತರು ಮಳೆ ಹನಿ
ನಿಂತಿಲ್ಲ ಎನ್ನುವಂತೆ ಮಳೆ ಹಾಗೂ ಗಾಳಿಯಿಂದ
ಅನೇಕ ಮನೆಗಳಿಗೆ ಸಣ್ಣ ಪುಟ್ಟ ಹಾನಿಯಾಗಿದೆ. ತುಂಗಾ ನದಿಗಳಲ್ಲಿನ ನೀರಿನ ಮಟ್ಟ
ಸ್ವಲ್ಪಮಟ್ಟಿಗೆ ಎರಿಕೆಯಾಗಿದೆ. ಪ್ರವಾಹಕ್ಕೆ ಒಳಗಾಗಿದ್ದ ಜಮೀನುಗಳಲ್ಲಿನ ನೀರಿನ ಪ್ರಮಾಣ ಹಾಗೆ ಇದ್ದು ಹಳ್ಳ – ಕೊಳ್ಳಗಳಲ್ಲಿನ ನೀರಿನ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು, ಯಥಾಸ್ಥಿತಿಗೆ ಬರುತ್ತಿದೆ
ಭಾರಿ ಗಾಳಿ ಮಳೆ – ತೀರ್ಥಹಳ್ಳಿಯಲ್ಲಿ ಮರ ಬಿದ್ದು ಕಾರು ಜಖಂ
ಪುಷ್ಯ ಮಳೆಯ ಆರ್ಭಟ ಹೆಚ್ಚಾಗಿದ್ದು ಗಾಳಿ ಮಳೆಯಿಂದ ಗೋಳಿ ಮರವೊಂದು ಉರುಳಿ ಬಿದ್ದು ಮಾರುತಿ ಸ್ವಿಫ್ಟ್ ಕಾರು ಜಖಂ ಗೊಂಡ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ .
ಪಟ್ಟಣದ ಮುಖ್ಯ ಬಸ್ ನಿಲ್ದಾಣ ಸಮೀಪ ಇರುವ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಕಛೇರಿಯ ಪಕ್ಕದಲ್ಲಿ ಇದ್ದಂತಹ ಭಾರಿ ಗಾತ್ರದ ಹಳೆಯ ಗೋಳಿ ಮರವೊಂದು ಬುಡಸಮೇತ ಉರುಳಿ ಬಿದ್ದಿದ್ದು ನಿಲ್ಲಿಸಿದ್ದ ಮಾರುತಿ ಶಿಫ್ಟ್ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ.
ತಡರಾತ್ರಿ ಈ ಘಟನೆ ನಡೆದ ಕಾರಣ ಬೇರೆ ಯಾವುದೇ ರೀತಿ ಅವಘಡ ಸಂಭವಿಸಿಲ್ಲ.ಘಟನಾ ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗರಾಜ್ ಸೇರಿದಂತೆ ಅನೇಕ ಅದಿಕಾರಿಗಳು ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.