
ಶಿವಮೊಗ್ಗ: ವಿನೋಬನಗರದ ಸವಿ ಬೇಕರಿ ಹತ್ತಿರದ ನಿವಾಸಿಯಾದ ಸುನಿತಾ ಎಸ್ ವಿ ಎನ್ನುವ ಸುಮಾರು 43 ವರ್ಷದ ಮಹಿಳೆ ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಕಾರ್ಯಕರ್ತ ಶರತ್ ಕಲ್ಯಾಣಿಯ ವಿರುದ್ಧ ಬಾಳು ಕೊಡುವುದಾಗಿ ವಂಚಿಸಿ ಹಣವನ್ನು ತೆಗೆದುಕೊಂಡು ಬಲವಂತವಾಗಿ ದೈಹಿಕ ಸಂಪರ್ಕ ಮಾಡಿ ಮೋಸ ಮಾಡಿದ್ದಾನೆ ಎಂದು ನಗರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಏನಿದು ಪ್ರಕರಣ..?
ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಕಾರ್ಯಕರ್ತ ಶರತ್ ಕಲ್ಯಾಣಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಸುಮಾರು 43 ವಯಸ್ಸಿನ ಸುನಿತಾ ಎಸ್ ವಿ ಎನ್ನುವ ಮಹಿಳೆ ಜೊತೆ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಕಳೆದ ವರ್ಷ ಆಗಸ್ಟ್ ನಲ್ಲಿ ಪರಿಚಯ ಮಾಡಿಕೊಂಡು ನಿರಂತರ ಸಂಪರ್ಕದಲ್ಲಿದ್ದು ನನಗೆ ಮದುವೆಯಾಗಿಲ್ಲ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸುತ್ತಾನೆ ಸುನಿತಾ ನಾನು ಈಗಾಗಲೇ ಜೀವನದಲ್ಲಿ ಸಾಕಷ್ಟು ನೊಂದಿದ್ದೇನೆ ಮತ್ತೆ ನನಗೆ ಈ ತರಹದ ಸುಳ್ಳು ಭರವಸೆಗಳು ಬೇಡ ಎಂದು ಎಷ್ಟು ಹೇಳಿದರು ಕೇಳದೆ ನಿನ್ನನ್ನು ಖಂಡಿತ ಮದುವೆ ಆಗುತ್ತೇನೆ ಎಂದು ನಂಬಿಸಿ ಆಕೆಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಮಾಡುತ್ತಾನೆ ಕಳೆದ 7 /8 ತಿಂಗಳಿಂದ ಇದು ಹೀಗೆ ಮುಂದುವರೆದುಕೊಂಡು ಹೋಗುತ್ತದೆ ಇಷ್ಟು ಸಾಲದೆಂಬಂತೆ ನನಗೆ ಸ್ವಲ್ಪ ಹಣಕಾಸಿನ ಸಮಸ್ಯೆ ಇದೆ ನೀನು ಹಣ ಕೊಡು ಎಂದು ಕೇಳಿ ಆಕೆಯ ಹತ್ತಿರ ಸುಮಾರು ನಾಲ್ಕು ಲಕ್ಷ ಹಣವನ್ನು ಗೂಗಲ್ ಪೇ ಮಾಡಿಸಿಕೊಳ್ಳುತ್ತಾನೆ ಹಣ ತೆಗೆದುಕೊಂಡ ನಂತರ ಸುನಿತಾ ನಡುವೆ ಅಂತರ ಕಾಪಾಡಿಕೊಳ್ಳುತ್ತಾನೆ ಇದರಿಂದ ಗಾಬರಿಯಾದ ಸುನೀತಾ ಆತನಿಗೆ ನಿರಂತರವಾಗಿ ಸಂಪರ್ಕ ಮಾಡಲು ಪ್ರಯತ್ನಪಡುತ್ತಾಳೆ ಆದರೆ ಶರತ್ ಸುನಿತಾ ಕರೆಯನ್ನು ಸ್ವೀಕರಿಸುವುದಿಲ್ಲ ಸಂಪರ್ಕಕ್ಕೂ ಸಿಗುವುದಿಲ್ಲ ಇದರಿಂದ ಬೇಸತ್ತ ಸುನೀತಾ ಗುಂಡಪ್ಪ ಶೆಡ್ ನಲ್ಲಿರುವ ಶರತ್ ಮನೆಗೆ ಹೋಗುತ್ತಾಳೆ ನನ್ನ ಹಣವನ್ನು ತೆಗೆದುಕೊಂಡು ಮದುವೆಯಾಗುವುದಾಗಿ ವಂಚಿಸಿ ಮೋಸ ಮಾಡುತ್ತಿದ್ದೀಯಾ ಮದುವೆಯಾಗು ಎಂದು ಕೇಳುತ್ತಾಳೆ ಆಗ ಕುಪಿತಗೊಂಡ ಶರತ್ ನನ್ನನ್ನು ಮದುವೆಯಾಗು ಎಂದು ಕೇಳಲು ನಿನಗೆ ಏನು ಹಕ್ಕಿದೆ ಎಂದು ಸುನೀತಾ ನನ್ನು ದಬಾಯಿಸುತ್ತಾನೆ ಹಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಇನ್ನೊಂದು ಸಲ ಮನೆ ಹತ್ತಿರ ಬಂದರೆ ಕೊಲೆ ಮಾಡುವುದಾಗಿ ಬೆದರಿಸುತ್ತಾನೆ.
ಶರತ್ ಕಲ್ಯಾಣಿ ಪರಾರಿ ..!
ಶರತ್ ಕಲ್ಯಾಣಿಯ ಈ ವಂಚನೆಯ ವಿರುದ್ಧ ಮಹಿಳಾ ಠಾಣೆಯಲ್ಲಿ ಸುನೀತಾ ದೂರನ್ನು ನೀಡಿದ್ದು ದೂರು ನೀಡಿದ ಬೆನ್ನಲ್ಲೇ ಶರತ್ ಪರಾರಿಯಾಗಿದ್ದು ಶರತ್ ಕಲ್ಯಾಣಿ ಹುಡುಕಾಟದಲ್ಲಿ ಪೊಲೀಸರು ಇದ್ದಾರೆ.
ಶರತ್ ಕಲ್ಯಾಣಿ ಪೊಲೀಸರಿಗೆ ಸಿಕ್ಕ ಮೇಲೆ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ..?!
ಒಂದಷ್ಟು ಜನ ಮಹಿಳೆಯರಿಗೆ ಶರತ್ ಕಲ್ಯಾಣಿ ಇದೇ ತರಹ ಮೋಸ ಮಾಡಿದ್ದಾನೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ ಶರತ್ ಕಲ್ಯಾಣಿ ಬಂಧನದ ನಂತರ ಆ ಪ್ರಕರಣಗಳು ಹೊರಬರುವ ಸಾಧ್ಯತೆ ಇದೆ.
ರಘುರಾಜ್ ಹೆಚ್.ಕೆ..9449553305..