Wednesday, April 30, 2025
Google search engine
Homeತೀರ್ಥಹಳ್ಳಿAgumbe:ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಆಗುಂಬೆ ಎಸ್ ವಿ ಎಸ್ ಪ್ರೌಢಶಾಲೆ..!

Agumbe:ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಆಗುಂಬೆ ಎಸ್ ವಿ ಎಸ್ ಪ್ರೌಢಶಾಲೆ..!

ತೀರ್ಥಹಳ್ಳಿ:ಆಗುಂಬೆ ಎಸ್ ವಿ ಎಸ್ ಅನುದಾನಿತ ಕನ್ನಡ ಮಾಧ್ಯಮ ಶಾಲೆ ಯಲ್ಲಿ 19 ವರ್ಷಗಳ ನಂತರ ವಲಯ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟ ಹಾಗೂ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಏರ್ಪಡಿಸಲಾಗಿತ್ತು .

ಈ ಐತಿಹಾಸಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಾಗೂ ಕ್ರೀಡಾಕೂಟ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು. ದಿನಾಂಕ 13 ಮತ್ತು 14ರಂದು ಎರಡು ದಿನಗಳ ಕಾಲ ನಡೆದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ 4000 ಸಾವಿರ ಜನಕ್ಕೆ ಶೃಂಗೇರಿ ಮಠದಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಠದ ಊಟದ ಜೊತೆಗೆ ಶಾಲೆಯ ವತಿಯಿಂದ ವಿಶೇಷವಾಗಿ ಸಿಹಿ ತಿಂಡಿಗಳನ್ನು ಮಾಡಿ ವಿತರಿಸಲಾಯಿತು.

ಹಿರಿಯ ಕಿರಿಯ ವಿದ್ಯಾರ್ಥಿಗಳ ಸಮ್ಮಿಲನ ನಡೆಯಿತು ಹಿರಿಯ ವಿದ್ಯಾರ್ಥಿಗಳಿಗೆ ತಮಗೆ ಪಾಠ ಹೇಳಿಕೊಟ್ಟ ಗುರುಗಳ ದರ್ಶನವಾಯಿತು .

ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ನಿವೃತ್ತ ಹಿರಿಯ ಮುಖ್ಯ ಉಪಾಧ್ಯಾಯರಾದ ಐತಾಳ್ ಸೇರಿದಂತೆ ಮಹೇಶ್, ಅರವಿಂದ್, 1965 ರ ಬ್ಯಾಚಿನ ಹಿರಿಯ ವಿದ್ಯಾರ್ಥಿನಿ ಸಂಧ್ಯಾ, ಹಾಗೂ 2024ರ ವಿದ್ಯಾರ್ಥಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದ ಗಣ್ಯರು ಉದ್ಘಾಟಿಸಿದರು.

ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದ ಹಿರಿಯ ವಿದ್ಯಾರ್ಥಿ ವೇಣು ಹೆಬ್ಬಾರ್ ಎಸ್ ವಿ ಎಸ್ ಶಾಲೆ ಬೆಳೆದು ಬಂದ ರೀತಿ ಅನುಭವಿಸಿದ ಸಮಸ್ಯೆಗಳು ಇಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿರುವ ಬಗ್ಗೆ ಶಾಲೆಗಳಲ್ಲಿ ಕಲಿಸಿದ ಗುರುಗಳ ಬಗ್ಗೆ ಶಾಲೆ ಪ್ರಾರಂಭದ ಬಗ್ಗೆ ಶಾಲೆಯ ಮುಂದಿನ ಯೋಜನೆಗಳ ಬಗ್ಗೆ ಮುಂದಿನ ವರ್ಷ 60 ವರ್ಷದ ವರ್ಣ ಮಹೋತ್ಸವ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಸುದೀರ್ಘವಾಗಿ ಮಾಹಿತಿ ನೀಡಿದರು. ಹಾಗೂ ಮುಂದೆ ಶಾಲೆಯನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ತುಂಬಾ ಮಹತ್ವವಾದದ್ದು ಆ ದಿಕ್ಕಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ ಎಂದರು.

ಹಿರಿಯ ವಿದ್ಯಾರ್ಥಿಗಳು ಮಾತನಾಡಿ, ತಮಗೆ ಕಲಿಸಿದ ಗುರುಗಳನ್ನು ನೆನೆಸುತ್ತಾ ತಾವು ಈ ಸ್ಥಾನಕ್ಕೆ ಬರಲು ಇಲ್ಲಿನ ಶಿಕ್ಷಣ ಕಾರಣ ಎನ್ನುವುದನ್ನು ನೆನಪು ಮಾಡಿಕೊಳ್ಳುತ್ತಾ ಮುಂದೆ ಈ ಶಾಲೆಯ ಅಭಿವೃದ್ಧಿಯ ಬಗ್ಗೆ ಶ್ರಮಿಸೋಣ ಎಂದರು.

ಅಧ್ಯಕ್ಷೀಯ ಭಾಷಣವನ್ನು ಮಾಡಿದ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರು ಎಸ್ ವಿ ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಆದ ಹೊಸಹಳ್ಳಿ ಸುಧಾಕರ್ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಇಂದು ನಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಈ ಸುಸಂದರ್ಭದಲ್ಲಿ ನಾವೆಲ್ಲರೂ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಹಾಗೆ ಈಗಾಗಲೇ ಸಾಕಷ್ಟು ಜನ ಹಿರಿಯ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ವೈಯಕ್ತಿಕವಾಗಿ ಹಣ ನೀಡಿದ್ದಾರೆ ನಾನು ನನ್ನ ವೈಯಕ್ತಿಕ ಹಣದಿಂದ ಒಂದಷ್ಟು ವರ್ಷ ಶಾಲೆಯ ಶಿಕ್ಷಕರಿಗೆ ಸಂಬಳ ನೀಡುತ್ತಾ ಬಂದಿದೆ ಈಗ ತಾವೆಲ್ಲರೂ ಜೊತೆಯಾಗಿರುವುದು ಸಂತೋಷದ ಸಂಗತಿ ಮುಂದೆ ಕೂಡ ಎಲ್ಲರೂ ಸೇರಿ ಈ ಶಾಲೆಯನ್ನು ಬೆಳೆಸೋಣ ಈಗಾಗಲೇ ಶಾಲೆಯ ದುರಸ್ತಿಗೆ ಸಾಕಷ್ಟು ಹಣ ಖರ್ಚಾಗಿದೆ ಇನ್ನೂ ಸಾಕಷ್ಟು ಹಣ ಬೇಕಾಗುವ ನಿರೀಕ್ಷೆ ಇದೆ ಹಿರಿಯ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಇದೇನು ಕಷ್ಟವಲ್ಲ ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ ಶಾಲೆಯನ್ನು ನಾವು ಅಭಿವೃದ್ಧಿಪಡಿಸಬೇಕು ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸೋಣ ಎಂದರು.

ಸಮಾರೂಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಮಾಜಿ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷರು ಎಂ ಎ ಡಿ ಬಿ ಅಧ್ಯಕ್ಷರು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆದ ಆರ್ ಎಂ ಮಂಜುನಾಥ್ ಗೌಡರು ಆಗಮಿಸಿದ್ದರು ಆರ್ ಎಂ ಅವರು ಮಾತನಾಡುತ್ತಾ 60 ವರ್ಷಗಳ ಇತಿಹಾಸ ಇರುವ ಈ ಆಗುಂಬೆ ಶಾಲೆ ಉಳಿಯಬೇಕು ಬೆಳೆಯಬೇಕು ಆ ನಿಟ್ಟಿನಲ್ಲಿ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಸೇರಿಕೊಂಡು ಸ್ನೇಹ ಸಮ್ಮಿಲನ ಕಾರ್ಯಕ್ರಮ ಮಾಡಿರುವುದು ಸಂತೋಷದ ವಿಚಾರ ಹಾಗೆ ಇಂದಿನ ಕ್ರೀಡಾಕೂಟ ಕೂಡ ನಮ್ಮನ್ನು ಬಾಲ್ಯದ ನೆನಪಿಗೆ ಕರೆದುಕೊಂಡು ಹೋಗಿತ್ತು ಶಾಲೆಯ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರದಿಂದ ಯಾವ ಸೌಲಭ್ಯಗಳ ಅಗತ್ಯತೆ ಇದೆಯೋ ಖಂಡಿತಾ ಮಾಡುತ್ತೇನೆ ಎಂದು ಭರವಸೆ ನೀಡುವುದರ ಜೊತೆಗೆ 5 ಲಕ್ಷ ಹಣವನ್ನು ಶಾಲೆಯ ಅಭಿವೃದ್ಧಿಗೋಸ್ಕರ ಕಟ್ಟಡದ ದುರಸ್ತಿ ಗೋಸ್ಕರ ನೀಡಿದರು . ಹಾಗೆ ಶಾಲೆಯ ಉನ್ನತಿಗಾಗಿ ಶ್ರಮಿಸುತ್ತಿರುವ ಎಲ್ಲರನ್ನು ಅವರು ಸ್ಮರಿಸಿದರು ಕನ್ನಡ ಶಾಲೆಗಳು ಉಳಿಯಬೇಕು ಬೆಳೆಯಬೇಕು ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ ಎಂದರು ಇದೇ ಸಂದರ್ಭದಲ್ಲಿ ಗೌರವ ಪೂರಕವಾಗಿ ಆರ್ ಎಂ ಮಂಜುನಾಥ್ ಗೌಡರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಕೃಷ್ಣಮೂರ್ತಿ ‌ಬಾಯರ್ ಹಿರಿಯ ವಿದ್ಯಾರ್ಥಿ ಹಾಗೂ ಎಸ್ ವಿ ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹೊಸಹಳ್ಳಿ ಸುಧಾಕರ್, ಕ್ರೀಡೆಯ ಉಸ್ತುವಾರಿ ವಹಿಸಿದ್ದ ಮಾಜಿ ಪೊಲೀಸ್ ಅಧಿಕಾರಿ ರತ್ನಾಕರ್, ಶಾಲೆಯ ಮುಖ್ಯೋಪಾಧ್ಯಾಯರಾದ ವಾಸುದೇವ್, ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ರವಿಕುಮಾರ್, ವೇಣು ಹೆಬ್ಬಾರ್, ಶಿವಳ್ಳಿ ಪ್ರದೀಪ್, ಹಂಡಿಗೆ ಸಂತೋಷ್, ಜಯಣ್ಣ ಹೆಗ್ಡೆ ಆಗುಂಬೆ ಗ್ರಾಮ ಪಂಚಾಯಿತಿ ಸದಸ್ಯರಾದ ರಾಘವೇಂದ್ರ, ದೈಹಿಕ ಶಿಕ್ಷಕರಾದ ಜಿತೇಂದ್ರ ಶಾಲೆಯ ಹಿರಿಯ ವಿದ್ಯಾರ್ಥಿ ‌ ಹಾಗೂ ಪತ್ರಕರ್ತರಾದ ರಘುರಾಜ್ ಹೆಚ್‌, ಕೆ . ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಡಾ/‌ಸುಂದರೇಶ್, ತಾಲೂಕಿನ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಸಚಿಂದ್ರ ಹೆಗ್ಡೆ ಉಪಸ್ಥಿತರಿದ್ದರು.

ವಲಯ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟದ ಪ್ರಶಸ್ತಿಗಳ ವಿವರ :

ಕಬಡ್ಡಿ :ಪ್ರಥಮ – SVS ಆಗುಂಬೆದ್ವಿತೀಯ – GHS ಮೇಗರವಳ್ಳಿಬ್ಯಾಡ್ಮಿಂಟನ್ : ಪ್ರಥಮ – SVS ಆಗುಂಬೆದ್ವಿತೀಯ – AVM ಆಗುಂಬೆವಾಲಿಬಾಲ್:ಪ್ರಥಮ: AVM ಆಗುಂಬೆದ್ವಿತೀಯ: ಸಹ್ಯಾದ್ರಿ ತೀರ್ಥಹಳ್ಳಿ.ಖೋಖೋ: ಪ್ರಥಮ: ಮತ್ತಿಗಾರುದ್ವಿತೀಯ: ಹೆದ್ದೂರುಥ್ರೋ ಬಾಲ್ : ಪ್ರಥಮ – GHS ಗುಡ್ಡೆಕೊಪ್ಪದ್ವಿತೀಯ – GHS ಮಳಲೇ ಮಕ್ಕಿ.ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು SVS ಪಡೆದುಕೊಂಡಿತು.

ಕಾರ್ಯಕ್ರಮದ ನಿರೂಪಣೆಯನ್ನು ಆರುಂಧತಿ ಮಾಡಿದರು ಸರ್ವರಿಗೂ ಸ್ವಾಗತವನ್ನು ಶಿವಳ್ಳಿ ಪ್ರದೀಪ್ ಮಾಡಿದರು ವಂದನಾರ್ಪಣೆಯನ್ನು ಸಂತೋಷ್ ಹಂಡಿಗೆ ಮಾಡಿದರು.

——–ರಘುರಾಜ್ ಹೆಚ್.ಕೆ.. ಶಾಲೆಯ ಹಳೆಯ ವಿದ್ಯಾರ್ಥಿ…..

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...