
ಭಾರತದ ಮೇಲೆ ಸದಾ ಹಗೆ ಸಾಧಿಸುತ್ತಿರುವ ಪಾಕಿಸ್ತಾನ ಎನ್ನುವ ದುಷ್ಟ ರಾಷ್ಟ್ರ ಹೇಗಾದರೂ ಮಾಡಿ ಭಾರತವನ್ನು ತನ್ನ ಕೈವಶ ಮಾಡಿಕೊಳ್ಳಬೇಕು. ಎನ್ನುವ ಹಟ ತೊಟ್ಟು ಅದಕ್ಕಾಗಿ ವಾಮ ಮಾರ್ಗಗಳನ್ನು ಅನುಸರಿಸುತ್ತಿದೆ.

ಕೆಲವು ಉಗ್ರಗಾಮಿ ಸಂಘಟನೆಗಳು ಪಾಕಿಸ್ತಾನ ಸರ್ಕಾರದ ಪರವಾಗಿದ್ದು ಆ ಸಂಘಟನೆಯ ಸಕ್ರಿಯ ಸದಸ್ಯರು ತಮ್ಮ ಪ್ರಾಣ ಹೋದರೂ ಪರವಾಗಿಲ್ಲ ಭಾರತೀಯರ ಪ್ರಾಣ ತೆಗೆಯಬೇಕು ಎನ್ನುವ ದುಷ್ಟ ಮನೋಭಾವದವರು ಅವರಿಗೆ ತಂದೆ ತಾಯಿ ಅಣ್ಣ ತಮ್ಮ ಮಕ್ಕಳು ಎನ್ನುವ ಕನಿಕರವಿಲ್ಲ ಅವರಿಗೆ ಎಲ್ಲರೂ ಒಂದೇ ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ಸಾರ್ವಜನಿಕ ವಾಸಿಸುವ ಸ್ಥಳಗಳಲ್ಲಿ ಈ ದುಷ್ಟರು ಬಾಂಬ್ ಇಡುವುದು ಆ ಮೂಲಕ ಜನರಲ್ಲಿ ಭಯ ಹುಟ್ಟಿಸುವುದು ಭಾರತದ ಆರ್ಥಿಕತೆ ಮೇಲೆ ಹಾಗೂ ಜನರ ಮನಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುವಂತೆ ನೋಡಿಕೊಳ್ಳುವುದು ಈ ದುಷ್ಟರ ಕೆಲಸ ಇವರಿಗೆ ಒಂದಷ್ಟು ಜನ ಭಾರತದಲ್ಲಿರುವ ಇವರದೇ ಮನಸ್ಥಿತಿಯವರು ಸಾತ್ ನೀಡುತ್ತಿದ್ದಾರೆ ಎನ್ನುವ ಮಾಹಿತಿಗಳಿವೆ ಹಾಗಾಗಿ ಅವರು ವಾಮ ಮಾರ್ಗದಿಂದ ಭಾರತಕ್ಕೆ ನುಸುಳಿ ತಪ್ಪು ಮಾಹಿತಿಗಳನ್ನು ನೀಡಿ ಇಲ್ಲಿಯ ಪ್ರಜೆಗಳ ಹಾಗೆ ವಾಸಿಸುತ್ತಾ ಮುಂದೊಂದು ದಿನ ಅಪಾಯಕಾರಿ ವಾತಾವರಣ ಸೃಷ್ಟಿಸುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಹಲವು ಕಡೆ ಭಾರತೀಯ ಗುಪ್ತಚರ ಇಲಾಖೆಗೆ ಸಿಕ್ಕ ಮಾಹಿತಿಯ ಆಧಾರದ ಮೇಲೆ ಹಲವು ಜನರನ್ನು ವಶಪಡಿಸಿಕೊಂಡಿದ್ದಾರೆ.

ಇದಕ್ಕೆ ತಾಜಾ ಉದಾಹರಣೆ ಬೆಂಗಳೂರಿನಲ್ಲಿ ವಾಸವಿದ್ದ ಪಾಕಿಸ್ತಾನಿ ಪ್ರಜೆಯನ್ನು ಪೊಲೀಸರು ಬಂಧಿಸಿದ್ದು ಅದು ಮರೆಯುವ ಮುಂಚೆಯೇ ಬೆಣ್ಣೆ ನಗರಿ ಮಧ್ಯ ಕರ್ನಾಟಕದ ದಾವಣೆಗೆರೆಯಲ್ಲಿ ವಾಸವಿದ್ದ ನಾಲ್ವರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳನ್ನು ವಶಪಡಿಸಿಕೊಂಡಿರುವ ಪೊಲೀಸರಿಗೆ ಈಗ ತಲೆ ನೋವಾಗಿರುವುದು ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಕೂಡ ಇವರ ವ್ಯಾಪ್ತಿ ವಿಸ್ತಾರವಾಗಿದೆ ಎನ್ನುವುದು ಆ ದಿಕ್ಕಿನಲ್ಲಿ ಕಾರ್ಯಾಚರಣೆ ಶುರುವಾಗಿದೆ.
ಬೆಣ್ಣೆ ನಗರಿ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳ ಬಂಧನ :
ದಾವಣಗೆರೆಯ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ವಾಸವಿದ್ದ ಸಿದ್ದಿಕಿ ಮೊಹಮ್ಮದ್ ಯಾಸಿನ್ (ಮಗ), ಜೈನಾಬಿ ನೂರ್ (ಸೊಸೆ), ಫಾತಿಮಾ (ಮಗಳು), ಅಲ್ತಾಫ್ ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ .
ಹಿಂದುಗಳ ಹೆಸರಿನಲ್ಲಿ ವಾಸ :
ಅಲ್ತಾಫ್ ಪತ್ನಿ ಫಾತಿಮಾ ಪಾಕಿಸ್ತಾನ ಪ್ರಜೆಯಾಗಿದ್ದಾಳೆ ದಾವಣಗೆಯಲ್ಲಿ ವಾಸ್ತವ್ಯ ಹೂಡಿದ್ದ ಪಾಕಿಸ್ತಾನದ ಮಹಿಳೆ ನಕಲಿ ದಾಖಲೆ ಸೃಷ್ಟಿಸಿ ಹಿಂದೂಗಳ ಹೆಸರಿನಲ್ಲಿ ವಾಸವಾಗಿದ್ದರು. ಪಾಕಿಸ್ತಾನ ಮೂಲದ ಮಹಿಳೆ ಫಾತಿಮಾ ದಾವಣಗೆರೆಯ ಅಲ್ತಾಫ್ ನನ್ನು ವಿವಾಹವಾಗಿದ್ದಳು.ಮೊಹಮ್ಮದ್ ಹನೀಫ್ ಕೂಡ ಪಾಕಿಸ್ತಾನದವನಾಗಿದ್ದಾನೆ. ಹನೀಫ್ ಸೊಸೆ, ಮಗಳು, ಅಳಿಯನನ್ನೂ ಬಂಧಿಸಲಾಗಿದೆ. ರಶೀದ್ ಅಲಿ ಸಿದ್ದಿಕಿ ಎಂಬಾತನ ಮಾವ ಮೊಹಮ್ಮದ್ ಹನೀಫ್ ಬೆಂಗಳೂರಿನಲ್ಲಿ ಸೆರೆ ಸಿಕ್ಕಿರುವ ಪ್ರಮುಖ ಆರೋಪಿಯಾಗಿದ್ದಾನೆ .

ಭಾರತದ ಪ್ರಮುಖ ಸ್ಥಳಗಳಲ್ಲಿ ವಿಚಾರಣೆ ಆರಂಭ :
ರಾಜ್ಯದ ಪ್ರಮುಖ ಸ್ಥಳಗಳಾದ ದೆಹಲಿ, ಚೆನ್ನೈ ಬೆಳಗಾವಿ, ಮುಂಬೈ ಸೇರಿದಂತೆ ಹಲವು ಕಡೆ ಮಾಹಿತಿ ತೆಗೆದುಕೊಳ್ಳುತ್ತಿರುವ ಪೊಲೀಸರಿಗೆ ಹಲವು ಅನುಮಾನಗಳು ಶುರುವಾಗಿದೆ. ಪಾಕಿಸ್ತಾನದ ಪ್ರಜೆಗಳು ಭಾರತಕ್ಕೆ ಬಂದಿದ್ದಾದರೂ ಹೇಗೆ..? ಅವರಿಗೆ ಇಲ್ಲಿ ವಾಸವಿರಲು ಅವಕಾಶ ಮಾಡಿಕೊಟ್ಟಿದ್ದು ಯಾರು..? ಭಾರತದಲ್ಲಿ ಅವರು ಆಧಾರ್ ಕಾರ್ಡ್ ಮಾಡಿಸಲು ಸಾಧ್ಯವಾಗಿದ್ದು ಹೇಗೆ..? ಭಾರತದಲ್ಲಿರುವ ಭ್ರಷ್ಟ ಅಧಿಕಾರಿಗಳು ಹಾಗೂ ಕೆಲವು ಸಮಾಜಘಾತಕ ಶಕ್ತಿಗಳು ಇವರ ನೆರವಿಗೆ ನಿಂತಿವೆಯಾ..? ಎನ್ನುವ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.
ಬೆಂಗಳೂರಿನ ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆಗಳು ಬಂಧನವಾಗಿರುವ ಸಂಬಂಧ ಹೆಚ್ಚಿನ ತನಿಖೆಗಾಗಿ ಪೊಲೀಸರ 4 ತಂಡಗಳ ರಚನೆ ಮಾಡಲಾಗಿದೆ. ಡಿವೈಎಸ್ಪಿ ಮೋಹನ್ಕುಮಾರ್ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಲಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕೃಷ್ಣಕುಮಾರ್, ಜಿಗಣಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್, ಅತ್ತಿಬೆಲೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ, ಸರ್ಜಾಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ಗಳಾದ ನವೀನ್, ಕುಮಾರ್ ಅವರ ತಂಡ ರಚನೆ ಮಾಡಲಾಗಿದೆ ಇವರ ತಂಡ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಪಾಕಿಸ್ತಾನದ ನಕಲಿ ನಿವಾಸಿಗಳು ಭಾರತದಲ್ಲಿ ಸೆರೆ ಸಿಕ್ಕಿದ್ದು ಹೇಗೆ..?!
ಕಳೆದ ಆರು ವರ್ಷಗಳಿಂದ ಪಾಕಿಸ್ತಾನಿ ಕುಟುಂಬವೊಂದು ಶರ್ಮಾ ಎನ್ನುವ ಅಡ್ಡಹೆಸರಿನಲ್ಲಿ ಅಕ್ರಮವಾಗಿ ಭಾರತದಲ್ಲಿ ನೆಲೆಸಿತ್ತು. ಪೊಲೀಸರು ರಶೀದ ಅಲಿ ಸಿದ್ದಿಕಿ (ವಯಸ್ಸು 48 ವರ್ಷ) ಅವನ ಪತ್ನಿ ಆಯೇಶಾ (ವಯಸ್ಸು 38ವರ್ಷಗಳು) ಮತ್ತು ಅವನ ಅತ್ತೆ- ಮಾವ ಹನೀಫ ಮಹಮದ (ವಯಸ್ಸು 73 ವರ್ಷಗಳು) ರುಬಿನಾ(ವಯಸ್ಸು 61 ವರ್ಷಗಳು) ಇವರನ್ನು ಜಿಗಣಿಯಿಂದ ಬಂಧಿಸದರು.ಈ ಕುಟುಂಬವು ಕ್ರಮವಾಗಿ ಶಂಕರ್ ಶರ್ಮಾ, ಆಶಾ ರಾಣಿ, ರಾಮ ಬಾಬು ಶರ್ಮಾ ಮತ್ತು ರಾಣಿ ಶರ್ಮಾ ಹೆಸರನ್ನು ಇಟ್ಟುಕೊಂಡಿದ್ದರು.ಇಬ್ಬರು ಪಾಕಿಸ್ತಾನಿ ಪ್ರಜೆಗಳು ಬಾಂಗ್ಲಾದೇಶ ಮಾರ್ಗವಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು. ಈ ಸಮಯದಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಅನುಮಾನ ಬಂದು, ಅವರ ತನಿಖೆ ನಡೆಸಿದಾಗ ಪಾಸ್‌ಪೋರ್ಟ್ ನಕಲಿ ಎಂದು ತಿಳಿದುಬಂದಿದೆ. ವಿಚಾರಣೆ ನಡೆಸಿದಾಗ, ಸಿದ್ದಿಕಿಯವರ ಸಂಬಂಧಿಯೆಂದು ತಿಳಿಯಿತು.
ಬೆಂಗಳೂರು ಪೊಲೀಸರು ಸಿದ್ದಿಕಿ ಮನೆಗೆ ತೆರಳಿ ಅವನ ವಿಚಾರಣೆ ನಡೆಸಿದಾಗ ಆತ 2018 ರಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದಾನೆ. ಅಲ್ಲದೇ ಅವನ ಪಾಸ್‌ಪೋರ್ಟ್‌ಗಳು ಮತ್ತು ಆಧಾರ್ ಕಾರ್ಡ್‌ಗಳ ಮೇಲೆಯೂ ಹಿಂದೂ ಹೆಸರು ಇರುವುದು ಕಂಡು ಬಂದಿದೆ.
ಪೋಲೀಸರು ಅವನ ಮನೆಯ ತಪಾಸಣೆ ನಡೆಸಿದಾಗ, ಮನೆಯ ಗೋಡೆಗಳ ಮೇಲೆ ‘ಮೆಹದಿ ಫೌಂಡೇಶನ್ ಇಂಟರ್ ನ್ಯಾಷನಲ್ ಜಶ್ನ್-ಎ-ಯೂನಸ್’ ಎಂದು ಬರೆಯಲಾಗಿತ್ತು. ಅಲ್ಲದೆ, ಗೋಡೆಗಳ ಮೇಲೆ ಕೆಲವು ಮೌಲ್ವಿಗಳ ಛಾಯಾಚಿತ್ರಗಳು ಇದ್ದವು.
ಪೊಲೀಸರು ಬಿಗಿಯಾಗಿ ತನಿಖೆ ನಡೆಸಿದಾಗ ಸಿದ್ದಿಕಿ ತಾನು ಪಾಕಿಸ್ತಾನಿ ಪ್ರಜೆ ಎಂದು ಒಪ್ಪಿಕೊಂಡನು. ಅವನು ಸ್ವತಃ ಕರಾಚಿಯ ಹತ್ತಿರದ ಲಿಯಾಕತ್ ಬಾದ್ ನ ನಿವಾಸಿಯಾಗಿದ್ದು, ಅವನ ಕುಟುಂಬ ಲಾಹೋರಿನಲ್ಲಿ ವಾಸಿಸುತ್ತಿತ್ತು. 2011 ರಲ್ಲಿ ಅವನು ಆಯೇಶಾಳೊಂದಿಗೆ ಆನ್ ಲೈನ ವಿವಾಹ ಮಾಡಿಕೊಂಡಿದ್ದನು. ಆಗ ಆಯೇಶಾ ಅವಳ ಪೋಷಕರೊಂದಿಗೆ ಬಾಂಗ್ಲಾದೇಶದಲ್ಲಿ ವಾಸಿಸುತ್ತಿದ್ದಳು. ಪಾಕಿಸ್ತಾನದಲ್ಲಿ ಮೆಹದಿ ಫೌಂಡೇಶನ್‌ನ ಧಾರ್ಮಿಕ ಚಟುವಟಿಕೆ ನಡೆಸುತ್ತಿದ್ದುದರಿಂದ ಸಿದ್ಧಕಿಯನ್ನು ದೇಶದಿಂದ ಗಡಿಪಾರು ಮಾಡಲಾಗಿತ್ತು.
ಸಿದ್ದಿಕಿ ಬಾಂಗ್ಲಾದೇಶಕ್ಕೆ ಹೋದನು ಮತ್ತು ಅಲ್ಲಿ ಅವನು ಮೆಹದಿ ಫೌಂಡೇಶನ ವೆಚ್ಚದಲ್ಲಿ ಪುನಃ ಧರ್ಮಪ್ರಸಾರ ಪ್ರಾರಂಭಿಸಿದನು. ಆದರೆ 2014 ರಲ್ಲಿ ಬಾಂಗ್ಲಾದೇಶದಲ್ಲಿ ಅವನಿಗೆ ವಿರೋಧ ವ್ಯಕ್ತವಾಯಿತು. ಅದರಿಂದ ಅವನು ಭಾರತದ ಮೆಹದಿ ಫೌಂಡೇಶನ್‌ಗಾಗಿ ಕೆಲಸ ಮಾಡುವ ಪರ್ವೇಜ್ ಹೆಸರಿನ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಿ ಭಾರತಕ್ಕೆ ಬಂದನು. ಬಂಗಾಳದ ಮೌಲದಿಂದ ಓರ್ವ ದಲ್ಲಾಳಿಯ ಸಹಾಯದಿಂದ ಸಿದ್ಧಿಕಿ ಮತ್ತು ಅವನ ಪತ್ನಿ, ಅತ್ತೆ-ಮಾವ, ಸಂಬಂಧಿ ಜೈನಾಬಿ ನೂರ ಮತ್ತು ಮಹಮ್ಮದ ಯಾಸಿನ ಇವರು ಅನಧಿಕೃತವಾಗಿ ಭಾರತಕ್ಕೆ ಬಂದರು. ಅವರು ಕೆಲವು ದಿನ ದೆಹಲಿಯಲ್ಲಿ ಉಳಿದರು. ತದನಂತರ ಅವನು ಶರ್ಮಾ ಹೆಸರಿನಿಂದ ನಕಲಿ ಪಾಸಪೋರ್ಟ, ಆಧಾರಕಾರ್ಡ ಮತ್ತು ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡು ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ ವಾಸವಾಗಿದ್ದರು.
ಭಾರತದ ವಿವಿಧ ರಾಜ್ಯಗಳಲ್ಲಿ ಹಾಗೂ ಹಲವು ಪ್ರಮುಖ ಜಿಲ್ಲೆಗಳಲ್ಲಿ ಪಾಕಿಸ್ತಾನದ ಪ್ರಜೆಗಳು ನಕಲಿ ವಿಳಾಸದ ಅಡಿಯಲ್ಲಿ ವಾಸವಾಗಿರುವ ಶಂಕೆ ಇದೆ ಒಂದಷ್ಟು ಭಾರತದ ದುಷ್ಟ ಮನೋಭಾವದವರು ಇವರಿಗೆ ಸಹಕಾರ ನೀಡುತ್ತಿದ್ದಾರೆ ಹಾಗೂ ಇವರು ಇಲ್ಲಿ ವಾಸಿಸಲು ಅಗತ್ಯವಿರುವ ಆಧಾರ್ ಕಾರ್ಡ್ ಗಳಂತಹ ವ್ಯವಸ್ಥೆಗಳನ್ನು ಕೂಡ ಮಾಡಿಕೊಡುತ್ತಿದ್ದಾರೆ ಅದನ್ನು ಪತ್ತೆ ಹಚ್ಚಬೇಕು ಆಗ ಇದನ್ನು ನಿಯಂತ್ರಣ ಮಾಡಲು ಸಾಧ್ಯ ಇಲ್ಲವಾದರೆ ಮುಂದೊಂದು ದಿನ ದೊಡ್ಡ ಸಮಸ್ಯೆಯಾಗಿ ಎದುರಾಗಬಹುದು.
ರಘುರಾಜ್ ಹೆಚ್.ಕೆ..9449553305.