ಶಿವಮೊಗ್ಗ; ರಾಜ್ಯದ ಪದವಿ ಕಾಲೇಜುಗಳಲ್ಲಿ ಎಸ್.ಇ.ಪಿ.ಜಾರಿಯಾಗಿದ್ದರಿಂದ ವಾರದ ಕಾರ್ಯಭಾರ ಕಡಿಮೆಯಾಗಿದೆ. ಬೇರೆ ವಿಶ್ವವಿದ್ಯಾಲಯಗಳಲ್ಲಿ ಇದನ್ನು ವಾರಕ್ಕೆ 5 ಅವಧಿ ಇದ್ದಿದ್ದನ್ನು 6 ಅವಧಿಗೆ ಹೆಚ್ಚಿಸ ಬೇಕು ಎಂದು ಕುವಿವಿ ವ್ಯಾಪ್ತಿಯ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಶಾಸಕರೂ ಆದ ವಿವಿ ಅಕಾಡೆಮಿಕ್ ಕೌನ್ಸಿಲ್ಲಿನ ಸದಸ್ಯ ಡಿ.ಎಸ್.ಅರುಣ್ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಎನ್.ಇ.ಪಿ.ರದ್ದಾಗಿ ಎಸ್.ಇ.ಪಿ.ಜಾರಿಯಾಗಿದೆ. ಎನ್.ಇ.ಪಿ.ಯಲ್ಲಿದ್ದುದಕ್ಕಿಂತ ಕಾರ್ಯಭಾರ ಎಸ್.ಇ.ಪಿ.ಪಠ್ಯಕ್ರಮದಲ್ಲಿ ಕಡಿಮೆಯಾಗಿದೆ. ಪಠ್ಯಕ್ರಮ ಮುಗಿಸುವಲ್ಲಿ ಉಪನ್ಯಾಸಕರಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಸರಿಯಾಗುವುದರಲ್ಲಿ ಅನುಮಾನವಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ವಾರದ ಕಾರ್ಯಭಾರದಲ್ಲಿ ಪ್ರತಿ ವಿಷಯಕ್ಕೆ ಒಂದು ಅವಧಿ ಹೆಚ್ಚು ಮಾಡಿ 6 ಅವಧಿ ಮಾಡಬೇಕೆಂದು ಒತ್ತಾಯಿಸಲಾಯಿತು.
ವಾರಕ್ಕೆ 5 ಅವಧಿ ನಿಗಧಿಪಡಿಸಿದ್ದರಿಂದ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಭವಿಷ್ಯಕ್ಕೂ ಕುತ್ತು ಬರಲಿದೆ ಎಂಬ ಆತಂಕ ವ್ಯಕ್ತಪಡಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಯಿಂದ ಕಾಲೇಜುಗಳಿಗಾಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಈ ಕುರಿತು ಶಾಸಕ ಅರುಣ್ ಅವರು ವಿವಿ ಕುಲಪತಿಗಳನ್ನು ಸಂಪರ್ಕಿಸಿ ಮಾತನಾಡಲು ಫೋನ್ ಮಾಡಿ ಪ್ರಯತ್ನಿಸಿದರೂ ಫೋನ್ ಸ್ವೀಕಾರವಾಗಿಲ್ಲದ ಕಾರಣ ನಂತರ ಅವರ ಜೊತೆ ಮಾತನಾಡುವುದಾಗಿ ಅರುಣ್ ತಿಳಿಸಿದರು.
ಈ ಸಂದರ್ಭದಲ್ಲಿ ಸಹ್ಯಾದ್ರಿ ಕಾಲೇಜು ಪ್ರಾಚಾರ್ಯ ಡಾ.ಸನಾವುಲ್ಲಾ, ಡಾ.ಬಾಲಕೃಷ್ಣ ಹೆಗಡೆ ಡಾ.ಸುರೇಶ್ , ಡಾ.ರಂಗನಾಥ್, ಅರುಣ್ ಕುಮಾರ್ ಡಾ.ಸಕ್ರಾ ನಾಯ್ಕ್, , ಡಾ.ಮೋಹನ್ ಮೊದಲಾದವರಿದ್ದರು.