
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿ,ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ 2024 ಹಳೇಮುಗಳಗೆರೆ ಗ್ರಾಮದಲ್ಲಿ ಹವಾಮಾನ ಮುನ್ಸೂಚನೆ ನೀಡುವ ಅಪ್ಲಿಕೇಶನ್ಗಳ ಬಳಕೆ ಮತ್ತು ಅವುಗಳಿಂದ ರೈತರಿಗೆ ಆಗುವ ಉಪಯೋಗಗಳನ್ನು ಗುಂಪು ಚರ್ಚೆ ಮತ್ತು ಬಳಕೆಯ ಪ್ರಾತ್ಯಕ್ಷಿಕೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಹಾವಿದ್ಯಾಲಯದ ಬೇಸಾಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸುಜಾತ ಆಗಮಿಸಿದ್ದರು. ಹವಾಮಾನ ವೈಪರಿತ್ಯಕ್ಕೆ ಕಾರಣಗಳು ಮತ್ತು ವೈಪರೀತ್ಯದಿಂದ ನಮ್ಮ ಕೃಷಿ ಚಟುವಟಿಕೆಗಳಿಗೆ ಆಗುವ ತೊಂದರೆಗಳನ್ನು ಮುಂಜಾಗ್ರತೆ ಕ್ರಮಗಳು ಏನೇನು ತೆಗೆದುಕೊಳ್ಳಬೇಕೆಂದು ತಿಳಿಸುತ್ತಾ. ಹವಾಮಾನ ಮುನ್ಸೂಚನೆ ನೀಡುವ ಸರ್ಕಾರಿ ಆ್ಯಪ್‌ಗಳೆಂದರೆ ಮೇಘದೂತ, ಮೌಸಾಮ್, ದಾಮಿನಿ ಮತ್ತು ಇತರೆ ಪ್ರಮುಖ ಆ್ಯಪ್‌ಗಳೆಂದರೆ ವೆದರ್ ಅಂಡ್ ರಾಡಾರ್, ಅಕ್ಯೂ ವೆದರ, ವಿಂಡೀಐದು ದಿನಗಳ ಮೊದಲೇ ಮಳೆಯ ಮುನ್ಸೂಚನೆ ಮೇಘಧೂತ ರೈತರಿಗೆ ಸುಲಭವಾಗಿ ಹವಾಮಾನದ ಮಾಹಿತಿ ನೀಡುವುದಕ್ಕಾಗಿ ಭಾರತೀಯ ಹವಾಮಾನ ಇಲಾಖೆ, ಭಾರತೀಯ ಸಂಶೋಧನಾ ಮಂಡಳಿ ಮತ್ತು ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ಸಹಯೋಗದಲ್ಲಿ ರೈತರಿಗೆ ಸ್ಥಳೀಯ ಹವಾಮಾನ ಮುನ್ಸೂಚನೆ ಮತ್ತು ಕೃಷಿ ಆಧಾರಿತ ಸಲಹೆಗಳನ್ನು ನೀಡಲು ಮೇಘಧೂತ ಆ್ಯಪ್ ಅಭಿವೃದ್ಧಿಪಡಸಲಾಗಿದೆ.ಈ ಆ್ಯಪ್ ಮೂಲಕ ಕನ್ನಡ, ತೆಲುಗು, ಮರಾಠಿ, ಹಿಂದಿ, ತಮಿಳು, ಮಲಯಾಳಂ ಸೇರಿದಂತೆ ದೇಶದ 10 ಭಾಷೆಯಗಳಲ್ಲಿ ಜಿಲ್ಲಾವಾರು ಮಾಹಿತಿ ನೀಡುತ್ತದೆ.
ಮುಂದಿನ ಐದು ದಿನಗಳ ಹವಾಮಾನ ಆಧಾರಿತ ಮಳೆ, ಉಷ್ಣಾಂಶ, ಆರ್ದ್ರತೆ, ಗಾಳಿಯ ವೇಗ, ಗಾಳಿಯ ದಿಕ್ಕಿನ ಮುನ್ಸೂಚನೆಯನ್ನು ಸಹ ಈ ಆ್ಯಪ್ ನೀಡುತ್ತದೆ.
ಸಿಡಿಲು ಬೀಳುವ ಮೊದಲೇ ಮುನ್ಸೂಚನೆ ನೀಡುತ್ತದೆ ದಾಮಿನಿ ಆ್ಯಪ್:ಮಳೆಗಾಲದಲ್ಲಿ ಸಿಡಿಲಿನಿಂದ ಅನಾಹುತಗಳು ಬಹಳಷ್ಟು ಆಗುತ್ತಿರುತ್ತವೆ. ಈ ಸಿಡಿಲಿನಿಂದ ಪಾರಾಗಲು ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯ ಅಧೀನದ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ದಾಮಿನಿ ಆ್ಯಪ್ ನ್ನು ಅಭಿವೃದ್ಧಿಪಡಿಸಿದೆ. ಇದು ರೈತರಿಗೆ ಆಪದ್ಭಾಂದವವಾಗಲಿದೆ.
ಸಿಡಿಲು ಹೊಡೆಯುವ ಕೆಲವು ನಿಮಿಷಗಳ ಮೊದಲೇ ಮುನ್ಸೂಚನೆ ನೀಡುವ ಈ ಆ್ಯಪ್ ನಿಂದ ಸಾವು, ನೋವಿನ ಪ್ರಮಾಣ ಗಣನೀಯ ತಗ್ಗಿಸಲು ನೆರವಿಗೆ ಬರಲಿದೆ.ಪುಣೆಯಲ್ಲಿರುವ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆಯು ಸಿಡಿಲಿನ ಅನಾಹುತ ತಪ್ಪಿಸಲು ಸಿಡಿಲು ಪತ್ತೆಹಚ್ಚುವ ಸಂವೇದಕಗಳನ್ನು ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಸಿದೆ. ಈ ಮೂಲಕ ಒಂದು ಸ್ಥಳದ ಸುತ್ತಲಿನ 20 ರಿಂದ 40 ಕಿ.ಮೀ. ದೂರದವರೆಗೆ 15 ನಿಮಿಷಗಳ ಒಳಗೆ ಸಂಭವಿಸಬಹುದಾದ ಸಿಡಿಲಿನ ಬಗ್ಗೆ ನಿಖರವಾದ ಮಾಹಿತಿ ದೊರೆಯುತ್ತದೆ.ಈ ಮಾಹಿತಿ ಆಧರಿಸಿ, ಜನಸಾಮಾನ್ಯರು, ರೈತರು ಸುರಕ್ಷಿತವಾದ ಸ್ಥಳಗಳಿಗೆ ತೆರಳಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಆ್ಯಪ್ ಸಹಕಾರಿಯಾಗಲಿದೆ.
ಹವಾಮಾನದ ಕುರಿತು ಮುನ್ಸೂಚನೆ ನೀಡುತ್ತದೆ ಮೌಸಮ್ನಗರಗಳನ್ನು ಆಧರಿಸಿ ಯಾವ ನಗರದಲ್ಲಿ ಮಳೆಯಾಗುತ್ತದೆ ಅಲ್ಲಿನ ವಾತಾವರಣ ಕುರಿತು ಮಾಹಿತಿ ನೀಡುತ್ತದೆ ಮೌಸಮ್ ಆ್ಯಪ್. ಇಂಟರ್‌ನ್ಯಾಷನಲ್ ಕ್ರಾಪ್ಸ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಫಾರ್ ಸೆಮಿ- ಏರಿಡ್ ಟ್ರಾಪಿಕ್ಸ್(ಐಸಿಆರ್‌ಐಎಸ್‌ಎಟಿ) ಹಾಗೂ ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮಿಟೀಯರಾಲಜಿ (ಐಐಟಿಎಮ್) ಹಾಗೂ ಇಂಡಿಯಾ ಮೆಟೀಯರಲಾಜಿಕಲ್ ಡಿಪಾರ್ಟ್‌ಮೆಂಟ್ (ಐಎಮ್‌ಡಿ) ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.ಉಷ್ಣತೆ, ಆರ್ದ್ರತೆ ಹಾಗೂ ಗಾಳಿಯ ವೇಗ ಹಾಗೂ ದಿಕ್ಕನ್ನು ತಿಳಿಸಲಿದೆ. ದಿನಕ್ಕೆ ಎಂಟು ಬಾರಿ ಈ ಆ್ಯಪ್‌ನ ಮಾಹಿತಿ ಅಪ್‌ಡೇಟ್ ಆಗಲಿದೆ. ಇದರಲ್ಲಿ ಹವಮಾನದಲ್ಲಿನ ತೀವ್ರ ಏರುಪೇರಿನ ಬಗ್ಗೆ ಮಾಹಿತಿ ನೀಡುವ ಸೌಲಭ್ಯವೂ ಇದೆ.ಹವಾಮಾನ ಮುನ್ಸೂಚನೆಯು ರೈತರ ವ್ಯವಹಾರ ನಿರ್ಧಾರಗಳಿಗೆ ಸಹಾಯ ಮಾಡುತ್ತದೆ. ಮುನ್ಸೂಚನೆಗಳು ದಿನನಿತ್ಯದ ನಿರ್ಧಾರಗಳನ್ನು ಯೋಜಿಸಲು ಅವರಿಗೆ ಸಹಾಯ ಮಾಡಬಹುದು.
ಈ ನಿರ್ಧಾರಗಳಲ್ಲಿ ಬೆಳೆ ನೀರಾವರಿ, ಗೊಬ್ಬರ ಹಾಕುವ ಸಮಯ ಮತ್ತು ಯಾವ ದಿನಗಳು ಹೊಲದಲ್ಲಿ ಕೆಲಸ ಮಾಡಲು ಸೂಕ್ತವಾಗಿವೆ ಎಂಬುದು. ರೈತರು ತೆಗೆದುಕೊಳ್ಳುವ ನಿರ್ಧಾರಗಳು ಲಾಭದಾಯಕ ಬೆಳೆ ಅಥವಾ ವೈಫಲ್ಯಕ್ಕೆ ಕಾರಣವಾಗುತ್ತವೆ ಎಂದು ಮುಖ್ಯ ಅತಿಥಿಗಳಾದ ಸುಜಾತ ಮೇಡಂ ರೈತರಿಗೆ ವಿವರಿಸಿದರು.