ಬೆಂಗಳೂರು: ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡುವ ರಾಜ್ಯ ಪ್ರಶಸ್ತಿಯು ತಾಯಿ ಮನೆ ಸುದರ್ಶನ್ ಮುಡಿಗೇರಿದೆ.
ತಾಯಿ ಮನೆ ಸುದರ್ಶನ್ ಎಂದರೆ ಎಲ್ಲರಿಗೂ ಗೊತ್ತಿರುವ ಹೆಸರು ತಮ್ಮ ನಿಸ್ವಾರ್ಥ ಸೇವೆಯಿಂದ ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ತಾಯಿ ಮನೆ ಎನ್ನುವ ಹೆಸರಿನ ಟ್ರಸ್ಟ್ ನಡಿ ಒಂದಷ್ಟು ಮಕ್ಕಳಿಗೆ ಆಸರೆಯ ಬೆಳಕಂತಾಗಿರುವ ಸುದರ್ಶನ್ ಗೆ 2024/ 25ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡುವ ರಾಜ್ಯ ಪ್ರಶಸ್ತಿ ದೊರಕಿರುವುದು ಶಿವಮೊಗ್ಗದ ಪಾಲಿಗೆ ಹೆಮ್ಮೆಯ ಸಂಗತಿ ಎನ್ನಬಹುದು.
ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಂತ್ರಿಗಳಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಪ್ರಶಸ್ತಿಯನ್ನು ಸುದರ್ಶನ್ ಅವರಿಗೆ ಪ್ರಧಾನ ಮಾಡಿದರು.
ಈ ಶುಭ ಸಂದರ್ಭದಲ್ಲಿ ಹಲವು ಶಾಸಕರು ಇಲಾಖೆಯ ಮುಖ್ಯಸ್ಥರು ಹಾಗೂ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.
ರಘುರಾಜ್ ಹೆಚ್ ಕೆ ..9449553305..