ಶಿವಮೊಗ್ಗ : ನಿನ್ನೆ ಸರಿಸುಮಾರು ಒಂದು ಗಂಟೆಯ ಹೊತ್ತಿಗೆ ನಗರದ ಹಳೆ ಬೊಮ್ಮನಕಟ್ಟೆಯಲ್ಲಿ ನವುಲೆ ಆನಂದನ ಶಿಷ್ಯ ರಾಜೇಶ್ ಶೆಟ್ಟಿಯ ಭೀಕರ ಕೊಲೆಯಾಗಿತ್ತು.
ಸುಮಾರು ಆರು ಜನರನ್ನು ಒಳಗೊಂಡ ತಂಡ ಮಾರಕಾಸ್ತ್ರಗಳಿಂದ ನಡು ರಸ್ತೆಯಲ್ಲಿ ಎಲ್ಲರೆದುರು ರಾಜೇಶ್ ಶೆಟ್ಟಿಯನ್ನು ಕೊಚ್ಚಿ ಕೊಚ್ಚಿ ಕೊಂದಿದ್ದರು.
ಈ ಘಟನೆ ನಡೆದು 24 ಗಂಟೆಯ ಒಳಗೆ ಆರು ಜನ ಆರೋಪಿಗಳಲ್ಲಿ ನಾಲ್ವರನ್ನು ಶಿವಮೊಗ್ಗ ವ್ಯಾಪ್ತಿಯೊಳಗೆ ವಿನೋಬನಗರ ಪೊಲೀಸರು ಹಿಡಿದಿದ್ದು ಸ್ಥಳ ಮಾಹಜರಿಗೆ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಕರೆದೊಯ್ದ ಘಟನೆಗೆ ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಪೈಕಿ ಗಣೇಶ, ಚಿಟ್ಟೆ ನಾಗ, ವೆಂಕಟೇಶ, ಕಿರಣ್ ಗೌಡ, ಶಿವಮೊಗ್ಗ ವ್ಯಾಪ್ತಿಯೊಳಗೆ ಸೆರೆ ಸಿಕ್ಕಿದ್ದು ಪ್ರಮುಖ ಆರೋಪಿಗಳಾದ ಡಿಂಗಾ ದೀಪು ಹಾಗೂ ಕರಿಯ ವಿನಯ ತಲೆಮೆರೆಸಿಕೊಂಡಿದ್ದಾರೆ.


ಪ್ರಕರಣದ ದಲ್ಲಿದ್ದ ಎಲ್ಲಾ ಆರೋಪಿಗಳು ರೌಡಿಶೀಟರ್ ಗಳಾಗಿದ್ದು ಹಿಂದೆ ನಡೆದ ವೈಯಕ್ತಿಕ ಜಗಳ ಅತಿರೇಕಕ್ಕೆ ಹೋಗಿ ಈಗ ಅದು ರಾಜೇಶ್ ಶೆಟ್ಟಿ ಕೊಲೆಯಲ್ಲಿ ಅಂತ್ಯವಾಗಿದೆ.

ಎನ್ಕೌಂಟರಿಗೆ ಹೆದರಿ ಎಸ್ಕೇಪ್ ಆದ್ರಾ ಡಿಂಗಾ ದೀಪು ಕರಿಯಾ ವಿನಯ..?!
ಹಾಡು ಹಗಲೇ ಶಿವಮೊಗ್ಗದಲ್ಲಿ ಇತ್ತೀಚಿನ ದಿನಗಳಲ್ಲಿ ರೌಡಿಗಳ ಹಾವಳಿ ಮಿತಿಮೀರಿದೆ ಮಚ್ಚಿನಲ್ಲಿ ಕೊಚ್ಚುವುದು ಮಾಮೂಲಾಗಿದೆ ಇದನ್ನು ನಿಯಂತ್ರಿಸಲು ಪೊಲೀಸರು ಸಹ ಸಾಕಷ್ಟು ಸಲ ತಮ್ಮ ಬಂದೂಕಿಗೆ ಕೆಲಸ ಕೊಟ್ಟಿದ್ದಾರೆ. ಈ ಪ್ರಕರಣದಲ್ಲೂ ಕೂಡ ಹಾಡು ಹಗಲೇ ವಿನಯ್ ತಂಡ ರೌಡಿಶೀಟರ್ ರಾಜೇಶ್ ಶೆಟ್ಟಿಯನ್ನು ಭೀಕರ ಕೊಲೆ ಮಾಡಿದ್ದರಿಂದ ಎಲ್ಲಿ ನಮ್ಮನ್ನು ಎನ್ಕೌಂಟರ್ ಮಾಡಿಬಿಡುತ್ತಾರೋ ಎಂದು ಹೆದರಿ ತಲೆಮರಿಸಿಕೊಂಡು ಓಡಿ ಹೋಗಿದ್ದಾರೆ ಎನ್ನುತ್ತದೆ ಶಿವಮೊಗ್ಗ ಭೂಗತ ಲೋಕ.
ರಘುರಾಜ್ ಹೆಚ್.ಕೆ..9449553305…