

ಶಿವಮೊಗ್ಗ: ನಗರದಲ್ಲಿ ಹಲವು ಕೋ ಆಪರೇಟಿವ್ ಬ್ಯಾಂಕುಗಳ ಚುನಾವಣೆಗಳು ನಡೆಯುತ್ತಿದ್ದು ಚುನಾವಣೆಗೆ ಸ್ಪರ್ಧಿಸಿರುವ ಆಕಾಂಕ್ಷಿಗಳು ತಮ್ಮ ಬ್ಯಾನರ್, ಪ್ಲೆಕ್ಸ್ , ಕಟೌಟ್ ಗಳನ್ನು ನಗರದ ತುಂಬೆಲ್ಲಾ ಹಾಕಿಸಿದ್ದರು.
ಇದು ಸಾರ್ವಜನಿಕರಲ್ಲಿ ಬಹಳ ಟೀಕೆಗೆ ಹಾಗೂ ಚರ್ಚೆಗೆ ಅವಕಾಶವಾಗಿತ್ತು ಮಾಧ್ಯಮಗಳು ಕೂಡ ಇದರ ವಿರುದ್ಧ ಸುದ್ದಿ ಪ್ರಕಟ ಮಾಡಿದ್ದು ಇಡೀ ಶಿವಮೊಗ್ಗ ನಗರವೇ ಪ್ಲೆಕ್ಸ್ ಬ್ಯಾನರ್ ಕಟೌಟ್ ಗಳ ಮಯವಾಗಿತ್ತು .
ಮಹಾನಗರ ಪಾಲಿಕೆಯ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ಎಲ್ಲಕ್ಕಿಂತ ಹೆಚ್ಚಾಗಿ ಕಮಿಷನರ್ ವಿರುದ್ಧ ಜನರು ಛೀಮಾರಿ ಹಾಕಲು ಶುರು ಮಾಡಿದ್ದರು.
ಸುದ್ದಿ ಬಳಿಕ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ :
ಪತ್ರಿಕೆಯಲ್ಲಿ ಸುದ್ದಿ ಬಂದ ಬಳಿಕ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ನಗರದಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಬ್ಯಾನರ್ ಕಟೌಟ್ ಗಳನ್ನು ಪ್ಲೆಕ್ಸ್ ಗಳನ್ನು ತೆಗೆಯುವ ಕಾರ್ಯ ಶುರು ಮಾಡಿದ್ದು ಜನರ ಪ್ರಶಂಸೆಗೆ ಕಾರಣವಾಗಿದೆ.
ಇನ್ನು ಮುಂದಾದರೂ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡು ಆಯ್ದ ಸ್ಥಳಗಳಲ್ಲಿ ಮಾತ್ರ ಫ್ಲೆಕ್ಸ್ ,ಬ್ಯಾನರ್, ಕಟೌಟ್ ಗಳನ್ನು ಹಾಕಲು ಅವಕಾಶ ಮಾಡಿಕೊಡಬೇಕು ಆ ಮೂಲಕ ನಗರದ ಸೌಂದರ್ಯವನ್ನು ಕಾಪಾಡಲು ಪ್ರಯತ್ನಿಸಬೇಕು ಒತ್ತಡಗಳಿಗೆ ಶಿಫಾರಸ್ಸುಗಳಿಗೆ ಮಣಿಯಬಾರದು ಎನ್ನುವುದು ಸಾರ್ವಜನಿಕರ ಆಗ್ರಹ.